ಮೆಹುಲ್ ಚೋಕ್ಸಿ ಡೊಮಿನಿಕಾದಿಂದ ಭಾರತಕ್ಕೆ ತೆರಳಲಿದ್ದಾರೆ ಎಂದ ಆಂಟಿಗುವಾ ಪ್ರಧಾನಿ; ಡೌಗ್ಲಾಸ್-ಚಾರ್ಲ್ಸ್ ಏರ್ಪೋರ್ಟ್ ತಲುಪಿದ ಖಾಸಗಿ ಜೆಟ್
ಕತಾರ್ನ ಬಾಂಬಾರ್ಡಿಯರ್ ಗ್ಲೋಬಲ್ 5000 ಜೆಟ್ ಡೌಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣವನ್ನು ತಲುಪಿದೆ. ಇದು ಮೇ 28ರಂದು ದೆಹಲಿಯಿಂದ ಹೊರಟು ಮಾಡ್ರಿಡ್ ಮಾರ್ಗವಾಗಿ ಡೊಮಿನಿಕಾವನ್ನು ತಲುಪಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದಲ್ಲಿ ಆರೋಪಿಯಾಗಿರುವ ದೇಶಭ್ರಷ್ಟ ಉದ್ಯಮಿ ಮೆಹುಲ್ ಚೋಕ್ಸಿ ಸದ್ಯ ಡೊಮಿನಿಕಾ ಪೊಲೀಸರ ವಶದಲ್ಲಿದ್ದಾರೆ. ಡೊಮಿನಿಕಾದಿಂದ ಆಂಟಿಗುವಾಕ್ಕೆ ಚೋಕ್ಸಿಯನ್ನು ಕಳಿಸಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಪ್ರಧಾನಿ ಗಸ್ಟನ್ ಬ್ರೌನ್ ಈಗಾಗಲೇ ಹೇಳಿದ್ದಾರೆ. ಇದೀಗ ಚೋಕ್ಸಿಯನ್ನು ಭಾರತಕ್ಕೆ ಕಳಿಸುವ ಸಿದ್ಧತೆ ನಡೆದಿದೆ, ಅವರನ್ನು ಕರೆದೊಯ್ಯಲು ಖಾಸಗಿ ವಿಮಾನವೊಂದು ಡೊಮಿನಿಕಾದ ಡೌಗ್ಲಾಸ್-ಚಾರ್ಲ್ಸ್ ಏರ್ಪೋರ್ಟ್ ತಲುಪಿದೆ ಎಂದು ಗಸ್ಟನ್ ಬ್ರೌನ್ ಹೇಳಿದ್ದಾರೆ. ಹಾಗೇ ಈ ಖಾಸಗಿ ಜೆಟ್ನ ಫೋಟೋ ಕೂಡ ಆಂಟಿಗುವಾ ಮಾಧ್ಯಮದಲ್ಲಿ ಪ್ರಕಟವಾಗಿದೆ.
ಮೆಹುಲ್ ಚೋಕ್ಸಿ ಭಾರತದಿಂದ ಪರಾರಿಯಾಗಿಯೇ ಆಂಟಿಗುವಾಕ್ಕೆ ಹೋಗಿದ್ದು ಎಂದು ದೃಢಪಡಿಸುವ ಕೆಲವು ದಾಖಲೆಗಳನ್ನು ಭಾರತ ಡೊಮಿನಿಕಾ ಕೋರ್ಟ್ಗೆ ಸಲ್ಲಿಸಿದೆ. ಹಾಗೇ ದಾಖಲೆಗಳ ಪರಿಶೀಲನೆ ಮಾಡಿರುವ ನ್ಯಾಯಾಧೀಶರು ಜೂ.2ರವರೆಗೆ ಚೋಕ್ಸಿ ಗಡೀಪಾರಿಗೆ ತಡೆಹಿಡಿದಿದ್ದಾರೆ. ಖಂಡಿತ ಡೊಮಿನಿಕಾದಿಂದ ಭಾರತಕ್ಕೆ ವಾಪಸ್ ಕರೆದೊಯ್ದು, ಅಲ್ಲಿನ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ ಎಂಬುದು ನನ್ನ ಅರಿವಿಗೆ ಬಂದ ವಿಚಾರಗಳು ಎಂದು ಪ್ರಧಾನಿ ಗಸ್ಟನ್ ಬ್ರೌನ್ ಅಲ್ಲಿನ ಎಫ್ಎಂ ಚಾನಲ್ವೊಂದಕ್ಕೆ ಹೇಳಿದ್ದಾರೆ.
ಕತಾರ್ನ ಬಾಂಬಾರ್ಡಿಯರ್ ಗ್ಲೋಬಲ್ 5000 ಜೆಟ್ ಡೌಗ್ಲಾಸ್-ಚಾರ್ಲ್ಸ್ ವಿಮಾನ ನಿಲ್ದಾಣವನ್ನು ತಲುಪಿದೆ. ಇದು ಮೇ 28ರಂದು ದೆಹಲಿಯಿಂದ ಹೊರಟು ಮಾಡ್ರಿಡ್ ಮಾರ್ಗವಾಗಿ ಡೊಮಿನಿಕಾವನ್ನು ತಲುಪಿದೆ. ಇನ್ನು ಚೋಕ್ಸಿ ಜೈಲಿನ ಹಿಂದೆ ಇರುವ, ಅವರ ಕೈ, ಮಣಿಕಟ್ಟಿನ ಮೇಲೆ ಗಾಯಗಳಾಗಿರುವ ಫೋಟೋ ಶನಿವಾರ ಬಿಡುಗಡೆಯಾಗಿದೆ. ಅವರ ಪರ ವಕೀಲರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಕ್ಕಳಲ್ಲಿಯೂ ಪತ್ತೆಯಾಗುತ್ತಿದೆ ಬ್ಲ್ಯಾಕ್ ಫಂಗಸ್; ಮೆದುಳಿಗೆ ಅಟ್ಯಾಕ್, ನಿಮ್ಹಾನ್ಸ್ನಲ್ಲಿ ಇಬ್ಬರು ಬಾಲಕರಿಗೆ ಚಿಕಿತ್ಸೆ
Published On - 2:15 pm, Sun, 30 May 21