ರಾಯರ ಆರಾಧನಾ ಮಹೋತ್ಸವ ಆರಂಭ, ಕೊರೊನಾ ಆರ್ಭಟದಿಂದ ಕಳೆಗುಂದಿದೆ ಸಂಭ್ರಮ

| Updated By: ಸಾಧು ಶ್ರೀನಾಥ್​

Updated on: Aug 03, 2020 | 11:02 AM

ರಾಯಚೂರು: ನೆರೆಯ ಆಂಧ್ರದ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ಜರುಗಬೇಕಿದ್ದ ರಾಯರ ಆರಾಧನೆ ಮಹೋತ್ಸವ ಈ ಬಾರಿ ಕೊರೊನಾ ಅಟ್ಟಹಾಸದ ನಡುವೆ ಕಳೆಗುಂದಿದೆ. ರಾಯರ 349ನೇ ಆರಾಧನೆ ಮಹೋತ್ಸವ ಇಂದು ಆರಂಭವಾದ ಹಿನ್ನೆಲೆಯಲ್ಲಿ ಶ್ರೀಮಠ ಈ ಬಾರಿ ಅತ್ಯಂತ ಸರಳವಾಗಿ ಪೂಜಾ ಕೈಂಕರ್ಯಗಳನ್ನ ನಡೆಸುತ್ತಿದೆ. ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಹಾಗೂ ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದು ಶ್ರೀಗಳಿಂದ ಚಾಲನೆ ದೊರೆತಿದೆ. ಆರಾಧನೆ ಮಹೋತ್ಸವ ಆಗಸ್ಟ 8 ರವರೆಗೂ ನಡೆಯಲಿದ್ದು ಈ ಸಲ ಅತ್ಯಂತ […]

ರಾಯರ ಆರಾಧನಾ ಮಹೋತ್ಸವ ಆರಂಭ, ಕೊರೊನಾ ಆರ್ಭಟದಿಂದ ಕಳೆಗುಂದಿದೆ ಸಂಭ್ರಮ
Follow us on

ರಾಯಚೂರು: ನೆರೆಯ ಆಂಧ್ರದ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ಜರುಗಬೇಕಿದ್ದ ರಾಯರ ಆರಾಧನೆ ಮಹೋತ್ಸವ ಈ ಬಾರಿ ಕೊರೊನಾ ಅಟ್ಟಹಾಸದ ನಡುವೆ ಕಳೆಗುಂದಿದೆ.

ರಾಯರ 349ನೇ ಆರಾಧನೆ ಮಹೋತ್ಸವ ಇಂದು ಆರಂಭವಾದ ಹಿನ್ನೆಲೆಯಲ್ಲಿ ಶ್ರೀಮಠ ಈ ಬಾರಿ ಅತ್ಯಂತ ಸರಳವಾಗಿ ಪೂಜಾ ಕೈಂಕರ್ಯಗಳನ್ನ ನಡೆಸುತ್ತಿದೆ. ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಹಾಗೂ ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಇಂದು ಶ್ರೀಗಳಿಂದ ಚಾಲನೆ ದೊರೆತಿದೆ.

ಆರಾಧನೆ ಮಹೋತ್ಸವ ಆಗಸ್ಟ 8 ರವರೆಗೂ ನಡೆಯಲಿದ್ದು ಈ ಸಲ ಅತ್ಯಂತ ಸರಳವಾಗಿ ಆಚರಿಸಲು ನಿಶ್ಚಯಿಸಲಾಗಿದೆ.