ದಾವೋಸ್: ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ (WEF) ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಹಲವು ದೇಶಗಳು ವಂದೇ ಭಾರತ್‌ನಲ್ಲಿ ಆಸಕ್ತಿ ತೋರಿಸಿವೆ ಎಂದಿದ್ದಾರೆ. ವಿಶ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಭಾರತದ ನಿಯೋಗದ ಭಾಗವಾಗಿ ದಾವೋಸ್‌ನಲ್ಲಿ ಭಾಗವಹಿಸಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಭಾರತದಿಂದ ಅರೆ-ಹೈ-ಸ್ಪೀಡ್ ವಂದೇ ಭಾರತ್ ರೈಲುಗಳನ್ನು ಆಮದು ಮಾಡಿಕೊಳ್ಳಲು ಅನೇಕ ದೇಶಗಳು ಆಸಕ್ತಿ ತೋರಿಸಿವೆ ಎಂದು ಹೇಳಿದ್ದಾರೆ. ದಾವೋಸ್‌ನಲ್ಲಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸೆಮಿಕಂಡಕ್ಟರ್‌ಗಳು, ಆಹಾರ ಸಂಸ್ಕರಣೆ, ಕೈಗಾರಿಕಾ ಸರಕುಗಳು, ಬಂಡವಾಳ ಸರಕುಗಳು ಮತ್ತು ಶುದ್ಧ ಇಂಧನದಂತಹ ಕ್ಷೇತ್ರಗಳಲ್ಲಿ ಬೇರೆ ದೇಶಗಳು ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿವೆ ಎಂದು ಹೇಳಿದ್ದಾರೆ.
ಭಾರತೀಯ ರೈಲ್ವೆ ಭಾರತದ ಮೊದಲ ಸ್ಥಳೀಯ ಅರೆ-ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಿತು. ಇದನ್ನು ‘ಮೇಕ್ ಇನ್ ಇಂಡಿಯಾ’ ಯೋಜನೆಯ ಯಶಸ್ಸಿನ ಕಥೆ ಎಂದು ಪರಿಗಣಿಸಲಾಗಿದೆ. ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು 2019ರ ಫೆಬ್ರವರಿ 15ರಂದು ನವದೆಹಲಿ-ಕಾನ್ಪುರ್-ಅಲಹಾಬಾದ್-ವಾರಣಾಸಿ ಮಾರ್ಗದಲ್ಲಿ ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುವ ಮೂಲಕ ಆರಂಭಿಸಲಾಯಿತು.
ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಮೋದಿ ಸೋಲು; ಸುಳ್ಳು ಮಾಹಿತಿ ನೀಡಿದ ಮಾರ್ಕ್ ಜುಕರ್‌ಬರ್ಗ್ ಬಗ್ಗೆ ಅಶ್ವಿನಿ ವೈಷ್ಣವ್ ಟೀಕೆ
2022-23ರ ಆರ್ಥಿಕ ವರ್ಷದಲ್ಲಿ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಸಲು ಸುಮಾರು 31.84 ಲಕ್ಷ ಜನ ಬುಕ್ ಮಾಡಿದ್ದಾರೆ. ಈ ಅವಧಿಯಲ್ಲಿ ವಂದೇ ಭಾರತ್ ರೈಲುಗಳ ಒಟ್ಟಾರೆ ಆಕ್ಯುಪೆನ್ಸಿ ಶೇ. 96.62ರಷ್ಟಿದೆ. ವಂದೇ ಭಾರತ್ ರೈಲುಗಳು ಉನ್ನತ ಶ್ರೇಣಿಯ ಸೌಲಭ್ಯಗಳನ್ನು ಹೊಂದಿವೆ. ಉದಾಹರಣೆಗೆ ಕವಚ ತಂತ್ರಜ್ಞಾನ, ದಿವ್ಯಾಂಗರಿಗೆ ಪ್ರವೇಶಿಸಬಹುದಾದ ಶೌಚಾಲಯಗಳು ಮತ್ತು ಸಂಯೋಜಿತ ಬ್ರೈಲ್ ಚಿಹ್ನೆಗಳು ಇತ್ಯಾದಿ.
ಭಾರತದಲ್ಲಿ 4 ಹೊಸ ರೀತಿಯ ರೈಲುಗಳಿವೆ. ವಂದೇ ಭಾರತ್ ಚೇರ್ ಕಾರ್, ವಂದೇ ಭಾರತ್ ಸ್ಲೀಪರ್, ನಮೋ ಭಾರತ್ ರೈಲು ಮತ್ತು ಅಮೃತ್ ಭಾರತ್ ರೈಲು. ವಂದೇ ಭಾರತ್ ಸ್ಲೀಪರ್‌ನ ಪರೀಕ್ಷೆಯು ಬಹುತೇಕ ಪೂರ್ಣಗೊಂಡಿದೆ ಮತ್ತು ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿಜವಾದ ಉತ್ಪಾದನೆಗೆ ಮುಂಚಿತವಾಗಿ ಡೇಟಾವನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು ಜನರಿಗೆ ಸಿಹಿ ಸುದ್ದಿ: 2 ಹೊಸ ರೈಲು ನಿಲ್ದಾಣ ನಿರ್ಮಾಣ!
ಈ ವೇಳೆ ಸಚಿವ ಅಶ್ವಿನಿ ವೈಷ್ಣವ್ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಕೇಂದ್ರ ಸರ್ಕಾರ ರೂಪಿಸಿದ ಕಾರ್ಯತಂತ್ರದ 4 ಸ್ತಂಭಗಳನ್ನು ಪಟ್ಟಿ ಮಾಡಿದರು. ಭಾರತವು ಪ್ರಸ್ತುತ ಉತ್ತಮ ಚಿಂತನೆಯ ಆರ್ಥಿಕ ಕಾರ್ಯತಂತ್ರವನ್ನು ಹೊಂದಿದೆ. ಈ ಕಾರ್ಯತಂತ್ರವು 4 ಸ್ತಂಭಗಳನ್ನು ಆಧರಿಸಿದೆ. ಸಾಮಾಜಿಕ ಮತ್ತು ಭೌತಿಕ ಮೂಲಸೌಕರ್ಯದಲ್ಲಿ ಸಾರ್ವಜನಿಕ ಹೂಡಿಕೆ, ತಂತ್ರಜ್ಞಾನ ಉತ್ಪಾದನೆ ಮತ್ತು ನಾವೀನ್ಯತೆಯ ಮೇಲೆ ಕೇಂದ್ರೀಕರಿಸುವುದು, ಅಂತರ್ಗತ ಬೆಳವಣಿಗೆ ಮತ್ತು ಸರಳೀಕರಣ ಇವೇ ಆ 4 ಸ್ತಂಭಗಳು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
“ನಾವು ಸಾರ್ವಜನಿಕ ಹೂಡಿಕೆಯನ್ನು ನೋಡಿದಾಗ 2021ರ ಬಜೆಟ್, ನಾವು ಸುಮಾರು 40 ಬಿಲಿಯನ್ ಯುಎಸ್ ಡಾಲರ್‌ಗಳಿಂದ ಪ್ರಾರಂಭಿಸಿ ನಂತರ ಅದನ್ನು 60, 80, 100 ಕ್ಕೆ ಹೆಚ್ಚಿಸಿದ್ದೇವೆ. ಈ ವರ್ಷ (2023-24) ಬಜೆಟ್ ಸುಮಾರು 145 ಯುಎಸ್ ಡಾಲರ್‌ಗಳಷ್ಟಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ