ಮರಾಠ ಕೋಟಾ: ರಾಜ್ಯ ಹಿಂದುಳಿದ ವರ್ಗಗಳ ಸಮಿತಿಯ ವರದಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ

ವಕೀಲ ಆಶಿಶ್ ಮಿಶ್ರಾ ಮೂಲಕ ಬಾಂಬೆ ಹೈಕೋರ್ಟ್ ನಲ್ಲಿ ಒಬಿಸಿ ವೆಲ್ಫೇರ್ ಫೌಂಡೇಶನ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಎಂಎಸ್‌ಸಿಬಿಸಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ವಾದಿಸಿದೆ. ರಾಜಕೀಯ ಪ್ರಭಾವದಿಂದ ಮರಾಠ ಸಮುದಾಯದ ಸಮೀಕ್ಷೆ ನಡೆಸಲು ನಿರಾಕರಿಸಿದ್ದರಿಂದ ಹಿಂದಿನ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು ಎಂದು ಅದು ಆರೋಪಿಸಿದೆ.

ಮರಾಠ ಕೋಟಾ: ರಾಜ್ಯ ಹಿಂದುಳಿದ ವರ್ಗಗಳ ಸಮಿತಿಯ ವರದಿಯನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ
ಮರಾಠ ಮೀಸಲಾತಿ ಹೋರಾಟ
Follow us
ರಶ್ಮಿ ಕಲ್ಲಕಟ್ಟ
|

Updated on: Feb 21, 2024 | 4:12 PM

ಮುಂಬೈ ಫೆಬ್ರುವರಿ 21: ನಿವೃತ್ತ ನ್ಯಾಯಮೂರ್ತಿ ಎಸ್‌ಬಿ ಶುಕ್ರೆ ಮತ್ತು ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ (MSCBC) ಇತರ ಸದಸ್ಯರನ್ನು ನೇಮಿಸುವ ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸಲ್ಲಿಸಲಾಗಿದೆ. ಈ ಆಯೋಗವು ಇತ್ತೀಚೆಗೆ ಮಹಾರಾಷ್ಟ್ರ(Maharashtra) ಸರ್ಕಾರಕ್ಕೆ ಮರಾಠ ಸಮುದಾಯ ಹಿಂದುಳಿದಿರುವಿಕೆಯನ್ನು ವಿವರಿಸುವ ವರದಿಯನ್ನು ಸಲ್ಲಿಸಿದೆ. ಆಯೋಗವು ರಾಜ್ಯ ಸರ್ಕಾರಕ್ಕೆ ಮಾಡಿರುವ ಶಿಫಾರಸುಗಳಿಗೆ ತಡೆ ನೀಡುವಂತೆಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿದೆ. ಈ ಶಿಫಾರಸುಗಳ ಆಧಾರದ ಮೇಲೆ ಮಹಾರಾಷ್ಟ್ರ ಕ್ಯಾಬಿನೆಟ್ ಮಂಗಳವಾರ ಕರಡು ಮಸೂದೆಗೆ ತನ್ನ ಅನುಮೋದನೆಯನ್ನು ನೀಡಿದ್ದು, ಮರಾಠರಿಗೆ ಮೀಸಲಾತಿಯ (Maratha Reservation) ಬಗ್ಗೆ ಶಾಸನಕ್ಕೆ ದಾರಿ ಮಾಡಿಕೊಟ್ಟಿತು.

ವಕೀಲ ಆಶಿಶ್ ಮಿಶ್ರಾ ಮೂಲಕ ಒಬಿಸಿ ವೆಲ್ಫೇರ್ ಫೌಂಡೇಶನ್ ಸಲ್ಲಿಸಿದ ಮನವಿಯಲ್ಲಿ, ಎಂಎಸ್‌ಸಿಬಿಸಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯು ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ವಾದಿಸಿದೆ. ರಾಜಕೀಯ ಪ್ರಭಾವದಿಂದ ಮರಾಠ ಸಮುದಾಯದ ಸಮೀಕ್ಷೆ ನಡೆಸಲು ನಿರಾಕರಿಸಿದ್ದರಿಂದ ಹಿಂದಿನ ಸದಸ್ಯರು ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತು ಎಂದು ಅದು ಆರೋಪಿಸಿದೆ.

MSCBC ಯ ಅಧ್ಯಕ್ಷರಾದ ನ್ಯಾಯಮೂರ್ತಿ (ನಿವೃತ್ತ) ಶುಕ್ರೆ ಅವರನ್ನು ಉಪವಾಸ ನಿರತ ಮರಾಠ ನಾಯಕ ಮನೋಜ್ ಜಾರಂಗೆ-ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಲು ರಾಜ್ಯ ಸರ್ಕಾರವು ನೇಮಿಸಿದೆ.. ಅವರ ಒತ್ತಡದ ಮೇರೆಗೆ, ಮರಾಠ ಸಮುದಾಯಕ್ಕೆ ಕೋಟಾ ಪ್ರಯೋಜನಗಳಿಗಾಗಿ ಶಾಸನವನ್ನು ಪರಿಚಯಿಸಲು ಒಂದು ದಶಕದಲ್ಲಿ ಸರ್ಕಾರವು ತನ್ನ ಮೂರನೇ ಪ್ರಯತ್ನವನ್ನು ಮಾಡುತ್ತಿದೆ. ಸಂಧಾನದ ಸಂದರ್ಭದಲ್ಲಿ, ನ್ಯಾಯಮೂರ್ತಿ ಶುಕ್ರೆ ಮೀಸಲಾತಿಯನ್ನು ಒದಗಿಸುವ ಭರವಸೆ ನೀಡಿದರು ಮತ್ತು MSCBC ಯ ಎಲ್ಲಾ ಹೊಸದಾಗಿ ನೇಮಕಗೊಂಡ ಸದಸ್ಯರು ಮರಾಠಾ ಆಗಿದ್ದಾರೆ ಎಂದು ಮನವಿ ಆರೋಪಿಸಿದೆ.

ಇದನ್ನೂ ಓದಿ: ಮರಾಠ ಮೀಸಲಾತಿ ಮಸೂದೆ ಅಂಗೀಕಾರ; ಉಪವಾಸ ಸತ್ಯಾಗ್ರಹ ಕೈಬಿಡಲು ಮನೋಜ್ ಜಾರಂಗೆ ನಿರಾಕರಣೆ

ಮಂಗಳವಾರ ನಡೆದ ವಿಚಾರಣೆ ವೇಳೆ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ್ ಅವರು ಅರ್ಜಿಯ ಪ್ರತಿಯನ್ನು ತಮಗೆ ನೀಡಿಲ್ಲ ಎಂದು ಸೂಚಿಸಿದರು. ಇದನ್ನು ಕೂಡಲೇ ಮಾಡಲಾಗುವುದು ಎಂದು ಮಿಶ್ರಾ ಭರವಸೆ ನೀಡಿದರು.

ನೇಮಕಾತಿಗಳಿಗೆ ಸರಿಯಾದ ಪ್ರಕ್ರಿಯೆಯ ಕೊರತೆಯಿದೆ. ಆಯೋಗದ ವಸ್ತುನಿಷ್ಠತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ಪಿಐಎಲ್​​ನಲ್ಲಿ ಹೇಳಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ