ಗಲ್ವಾನ್ ಕದನದಲ್ಲಿ ಹುತಾತ್ಮನಾದ ಯೋಧನ ಪತ್ನಿ ಉಪಜಿಲ್ಲಾಧಿಕಾರಿಯಾಗಿ ನೇಮಕ

| Updated By:

Updated on: Jul 25, 2020 | 2:50 PM

ಹೈದರಾಬಾದ್​: ಚೀನಾ ಸೈನಿಕರ ವಿರುದ್ಧ ಹೋರಾಡುತ್ತಾ ಹುತಾತ್ಮರಾದ ಕರ್ನಲ್​ ಸಂತೋಷ್​ ಬಾಬು ಅವರ ಪತ್ನಿಯನ್ನ ತೆಲಂಗಾಣ ಸರ್ಕಾರ ಉಪ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್​ ಹುತಾತ್ಮ ಯೋಧನ ಪತ್ನಿ ಸಂತೋಷಿ ಬಾಬು ಅವರಿಗೆ ನಿನ್ನೆ ತಮ್ಮ ಕಚೇರಿಯಲ್ಲಿ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು. ಜೊತೆಗೆ, ಸಂತೋಷಿ ಅವರನ್ನ ಹೈದರಾಬಾದ್​ ಅಥವಾ ಆಸುಪಾಸಿನ ಪ್ರದೇಶದಲ್ಲಿ ಮಾತ್ರ ಕಾರ್ಯನಿರ್ವಹಿಸಬೇಕು ಎಂಬ ಸೂಚನೆ ಸಹ ನೀಡಿದ್ದಾರೆ. ಜೊತೆಗೆ, ಕುಟುಂಬದ ಅನುಕೂಲಕ್ಕಾಗಿ ನಗರದ ಪ್ರತಿಷ್ಠಿತ ಬಂಜಾರಾ ಹಿಲ್ಸ್​ ಬಡಾವಣೆಯಲ್ಲಿ ನಿವೇಶನ […]

ಗಲ್ವಾನ್ ಕದನದಲ್ಲಿ ಹುತಾತ್ಮನಾದ ಯೋಧನ ಪತ್ನಿ ಉಪಜಿಲ್ಲಾಧಿಕಾರಿಯಾಗಿ ನೇಮಕ
Follow us on

ಹೈದರಾಬಾದ್​: ಚೀನಾ ಸೈನಿಕರ ವಿರುದ್ಧ ಹೋರಾಡುತ್ತಾ ಹುತಾತ್ಮರಾದ ಕರ್ನಲ್​ ಸಂತೋಷ್​ ಬಾಬು ಅವರ ಪತ್ನಿಯನ್ನ ತೆಲಂಗಾಣ ಸರ್ಕಾರ ಉಪ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್​ ಹುತಾತ್ಮ ಯೋಧನ ಪತ್ನಿ ಸಂತೋಷಿ ಬಾಬು ಅವರಿಗೆ ನಿನ್ನೆ ತಮ್ಮ ಕಚೇರಿಯಲ್ಲಿ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದರು.

ಜೊತೆಗೆ, ಸಂತೋಷಿ ಅವರನ್ನ ಹೈದರಾಬಾದ್​ ಅಥವಾ ಆಸುಪಾಸಿನ ಪ್ರದೇಶದಲ್ಲಿ ಮಾತ್ರ ಕಾರ್ಯನಿರ್ವಹಿಸಬೇಕು ಎಂಬ ಸೂಚನೆ ಸಹ ನೀಡಿದ್ದಾರೆ. ಜೊತೆಗೆ, ಕುಟುಂಬದ ಅನುಕೂಲಕ್ಕಾಗಿ ನಗರದ ಪ್ರತಿಷ್ಠಿತ ಬಂಜಾರಾ ಹಿಲ್ಸ್​ ಬಡಾವಣೆಯಲ್ಲಿ ನಿವೇಶನ ಸಹ ನೀಡಿದೆ.

ರಾಜ್ಯ ಸರ್ಕಾರ ಈ ಹಿಂದೆ ಸಂತೋಷಿ ಅವರಿಗೆ ಸರ್ಕಾರಿ ನೌಕರಿ ನೀಡಿತ್ತು. ಅದರೆ, ಈಗ ಉಪಜಿಲ್ಲಾಧಿಕಾರಿಯಾಗಿ ಬಡ್ತಿ ನೀಡಿದೆ.

Published On - 5:43 pm, Thu, 23 July 20