ಮೀರತ್​​ನಲ್ಲಿ ಗಂಡನನ್ನು ಕೊಂದು ಡ್ರಮ್​ನಲ್ಲಿ ತುಂಬಿಸಿದ್ದ ಹೆಂಡತಿ ಗರ್ಭಿಣಿ; ಶಾಕಿಂಗ್ ವಿಷಯ ಬಯಲು

ಮೀರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಗಂಡನನ್ನು ಕೊಂದು, ಆತನ ದೇಹವನ್ನು ತುಂಡು ಮಾಡಿ ಡ್ರಮ್​ನಲ್ಲಿ ತುಂಬಿಸಿದ್ದ ಆರೋಪಿ ಮುಸ್ಕಾನ್ ರಸ್ತೋಗಿ ಗರ್ಭಿಣಿಯಾಗಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ. ಮುಸ್ಕಾನ್ ರಸ್ತೋಗಿ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿ ಆಕೆಯ ಪತಿ ಸೌರಭ್ ರಜಪೂತ್ ಅವರನ್ನು ಕೊಲೆ ಮಾಡಿದ್ದರು. ಆ ಕೊಲೆಯ ನಂತರ ಅವರು ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ಸಿಮೆಂಟ್ ತುಂಬಿದ ಡ್ರಮ್‌ನಲ್ಲಿ ಇಟ್ಟಿದ್ದರು. ಇದೀಗ 27 ವರ್ಷದ ಮುಸ್ಕಾನ್ ಗರ್ಭಿಣಿಯಾಗಿದ್ದಾಳೆ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಮೀರತ್​​ನಲ್ಲಿ ಗಂಡನನ್ನು ಕೊಂದು ಡ್ರಮ್​ನಲ್ಲಿ ತುಂಬಿಸಿದ್ದ ಹೆಂಡತಿ ಗರ್ಭಿಣಿ; ಶಾಕಿಂಗ್ ವಿಷಯ ಬಯಲು
Meerut Murder Case Accused

Updated on: Apr 07, 2025 | 10:07 PM

ಮೀರತ್, ಏಪ್ರಿಲ್ 7: ಕೆಲವು ದಿನಗಳ ಹಿಂದೆ ಮೀರತ್​​ನಲ್ಲಿ (Meerut Case) ನಡೆದ ನೌಕಾಪಡೆಯ ಮಾಜಿ ಅಧಿಕಾರಿ ಸೌರಭ್ ರಜಪೂತ್ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. 27 ವರ್ಷದ ಯುವಕನನ್ನು ಆತನ ಪತ್ನಿ ಮುಸ್ಕಾನ್ (Muskan Rastogi) ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಭೀಕರವಾಗಿ ಕೊಂದಿದ್ದರು. ಬಳಿಕ ಪ್ಲಾಸ್ಟಿಕ್ ಡ್ರಮ್​ನಲ್ಲಿ ಆತನ ದೇಹದ ತುಂಡುಗಳನ್ನು ಹಾಕಿ, ಅದರ ಮೇಲೆ ಸಿಮೆಂಟ್ ಹಾಕಿ ಮಚ್ಚಿಟ್ಟಿದ್ದರು. ಪೊಲೀಸ್ ತನಿಖೆಯ ಪ್ರಕಾರ, ಮುಸ್ಕಾನ್ ಮತ್ತು ಸಾಹಿಲ್ ಒಟ್ಟಾಗಿ ಕೊಲೆಗೆ ಸಂಚು ರೂಪಿಸಿದ್ದರು. ಮುಸ್ಕಾನ್ ಈ ಅಪರಾಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತಿಗೆ ಮಾದಕ ದ್ರವ್ಯ ನೀಡಿದ ನಂತರ ಆಕೆ ತನ್ನ ಪ್ರಿಯಕರನೊಂದಿಗೆ ಆತನ ದೇಹವನ್ನು ಕತ್ತರಿಸಿ ಡ್ರಮ್‌ನಲ್ಲಿ ಇರಿಸಿ, ಸಾಕ್ಷ್ಯವನ್ನು ಮರೆಮಾಚುವ ಪ್ರಯತ್ನದಲ್ಲಿ ಸಿಮೆಂಟ್ ತುಂಬಿಸಿದರು. ಆದರೆ, ಈ ವೇಳೆ ಆಕೆ ಗರ್ಭಿಣಿಯಾಗಿದ್ದರು ಎಂಬ ಆಘಾತಕಾರಿ ವಿಷಯ ಇಂದು ಬೆಳಕಿಗೆ ಬಂದಿದೆ.

ಮೀರತ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮುಸ್ಕಾನ್ ರಸ್ತೋಗಿ ಅವರನ್ನು ಇಂದು ಗರ್ಭಧಾರಣೆಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷಾ ಫಲಿತಾಂಶಗಳು ಪಾಸಿಟಿವ್ ಬಂದಿದ್ದು, ಆಕೆ ಗರ್ಭಿಣಿ ಎಂದು ದೃಢಪಟ್ಟಿದೆ. ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಅವರನ್ನು ಮಾರ್ಚ್ 19ರಿಂದ ಚೌಧರಿ ಚರಣ್ ಸಿಂಗ್ ಜಿಲ್ಲಾ ಜೈಲಿನಲ್ಲಿ ಇರಿಸಲಾಗಿದೆ. ಗರ್ಭಿಣಿಯಾಗಿದ್ದಾಗಲೇ ಆಕೆ ತನ್ನ ಗಂಡನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ವಿಕೃತಿ ಮೆರೆದಿದ್ದಾರೆ.

ಇದನ್ನೂ ಓದಿ: ಮೀರತ್: ಸೌರಭ್​ನನ್ನು ಕೊಲೆ ಮಾಡಿ ಹಿಮಾಚಲಕ್ಕೆ ಟ್ರಿಪ್​ಗೆ ಹೋಗಿ ಸಾಹಿಲ್, ಮುಸ್ಕಾನ್ ಮಾಡಿದ್ದೇನು?

ಇದನ್ನೂ ಓದಿ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ

ಮಾರ್ಚ್ ತಿಂಗಳಲ್ಲಿ ಈ ಕೊಲೆ ನಡೆದಿತ್ತು. ಕೊಲೆಯ ನಂತರ, ಮುಸ್ಕಾನ್ ಮತ್ತು ಸಾಹಿಲ್ ಹಿಮಾಚಲ ಪ್ರದೇಶದ ಕಸೋಲ್‌ಗೆ ಓಡಿಹೋದರು. ಅಲ್ಲಿ ಅವರು 6 ದಿನಗಳ ಕಾಲ ಇದ್ದರು. ಮುಸ್ಕಾನ್ ಮತ್ತು ಸಾಹಿಲ್ ಇಬ್ಬರೂ ವಿವಾಹಿತ ದಂಪತಿಗಳೆಂದು ನಟಿಸಿ ಹೋಟೆಲ್‌ನಲ್ಲಿ ರೂಂ ಮಾಡಿದ್ದರು. ಹೋಟೆಲ್ ರಿಜಿಸ್ಟರ್‌ನಲ್ಲಿ ತಮ್ಮನ್ನು ಪತಿ ಮತ್ತು ಪತ್ನಿ ಎಂದು ನೋಂದಾಯಿಸಿಕೊಂಡಿದ್ದರು. ಅವರು ಮಾರ್ಚ್ 10ರಿಂದ ಮಾರ್ಚ್ 16ರವರೆಗೆ ಅಲ್ಲಿಯೇ ಇದ್ದು, ನಂತರ ಮೀರತ್‌ಗೆ ಮರಳಿದ್ದರು.

ಪೊಲೀಸರು ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ಕೊಲೆ ಆರೋಪದ ಮೇಲೆ ಬಂಧಿಸಿದರು. ಈ ವಿಚಾರಣೆಯ ಸಮಯದಲ್ಲಿ, ಮುಸ್ಕಾನ್ ಈ ಕೊಲೆಯಲ್ಲಿ ತಾನು ಭಾಗಿಯಾಗಿರುವುದಾಗಿ ಒಪ್ಪಿಕೊಂಡಳು. ಆಕೆಯ ಮಾಹಿತಿ ಮೇರೆಗೆ ಪೊಲೀಸ್ ಅಧಿಕಾರಿಗಳು ಸಿಮೆಂಟ್ ತುಂಬಿದ ಡ್ರಮ್‌ನಲ್ಲಿ ಸೌರಭ್‌ನ ದೇಹದ ಭಾಗಗಳನ್ನು ಪತ್ತೆಹಚ್ಚಿದ್ದರು. ಇಂದು ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಜೈಲಿನಲ್ಲಿರುವ ಮುಸ್ಕಾನ್ ಗರ್ಭಿಣಿ ಎಂಬುದು ದೃಢಪಟ್ಟಿದೆ. ಆದರೆ, ಆಕೆಯ ಹೊಟ್ಟೆಯಲ್ಲಿರುವ ಮಗು ಆಕೆಯ ಗಂಡನದ್ದಾ ಅಥವಾ ಪ್ರಿಯಕರದ್ದಾ ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ: ಮೀರತ್​ ಕೊಲೆ ಪ್ರಕರಣ: ಮುಸ್ಕಾನ್, ಪತಿ​ ಸೌರಭ್​ನನ್ನು ತುಂಡು ತುಂಡಾಗಿ ಕತ್ತರಿಸಿದ್ದೇಕೆ?

ಮೀರತ್ ಜೈಲಿನಲ್ಲಿರುವ ಮುಸ್ಕಾನ್ ಅವರಿಗೆ ಋತುಚಕ್ರ ತಪ್ಪಿತ್ತು ಎಂದು ವರದಿಯಾಗಿದೆ. ಇದಾದ ನಂತರ ಅವರ ಆರೋಗ್ಯ ಹದಗೆಟ್ಟಿತು. ಅವರ ಸ್ಥಿತಿಯನ್ನು ನೋಡಿ, ಜೈಲು ಅಧಿಕಾರಿಗಳು ಅವರ ಆರೋಗ್ಯ ತಪಾಸಣೆ ನಡೆಸಿದರು. ಈ ವೇಳೆ ಆಕೆ ಗರ್ಭಿಣಿ ಎಂಬುದು ಬಯಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ