ಕೊವಿಡ್ ಚಿಕಿತ್ಸೆಗೆ ನೆರವಾಗಲು ಮೇಘಾ ಇಂಜಿನಿಯರಿಂಗ್ ಹಾಗೂ ಇನ್ಫ್ರಾಸ್ಟ್ರಕ್ಚರ್ ಕಂಪನಿಯಿಂದ ಉಚಿತ ಆಕ್ಸಿಜಿನ್ ಪೂರೈಕೆ ಆರಂಭ

| Updated By: ganapathi bhat

Updated on: Aug 23, 2021 | 12:43 PM

ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಪ್ರಯತ್ನಕ್ಕೆ ಅನುಗುಣವಾಗಿ, ಹೆಚ್ಚುತ್ತಿರುವ ಕೋವಿಡ್ -19 ರೋಗಿಗಳಿಗೆ ಸರಿಹೊಂದುವಂತೆ ವೈದ್ಯಕೀಯ ಆಮ್ಲಜನಕ ಬಿ ಮಾದರಿಯ ಸಿಲಿಂಡರ್‌ಗಳನ್ನು MEIL ಉಚಿತವಾಗಿ ನೀಡುತ್ತಿದೆ.

ಕೊವಿಡ್ ಚಿಕಿತ್ಸೆಗೆ ನೆರವಾಗಲು ಮೇಘಾ ಇಂಜಿನಿಯರಿಂಗ್ ಹಾಗೂ ಇನ್ಫ್ರಾಸ್ಟ್ರಕ್ಚರ್ ಕಂಪನಿಯಿಂದ ಉಚಿತ ಆಕ್ಸಿಜಿನ್ ಪೂರೈಕೆ ಆರಂಭ
ವೈದ್ಯಕೀಯ ಆಮ್ಲಜನಕ (ಸಂಗ್ರಹ ಚಿತ್ರ)
Follow us on

ಹೈದರಾಬಾದ್: ಕೊವಿಡ್ ಚಿಕಿತ್ಸೆಗೆ ನೆರವಾಗಲು ಹೈದರಾಬಾದ್‌ನ ಮೇಘಾ ಇಂಜಿನಿಯರಿಂಗ್ ಹಾಗೂ ಇನ್ಫ್ರಾಸ್ಟ್ರಕ್ಚರ್ ಕಂಪನಿ ಉಚಿತ ಆಕ್ಸಿಜಿನ್ ಪೂರೈಕೆ ಆರಂಭಿಸಿದೆ. ಮೇಘಾ ಇಂಜಿನಿಯರಿಂಗ್ (MEIL) ವತಿಯಿಂದ ಆಂಧ್ರ ಹಾಗೂ ತೆಲಂಗಾಣದಲ್ಲಿ ಪ್ರತಿ ದಿನ 35 ಲಕ್ಷ ಲೀಟರ್ ಆಕ್ಸಿಜನ್ ಸಪ್ಲೈ ಮಾಡಲಾಗುತ್ತಿದೆ. ಇದರ ಜೊತೆಗೆ ತುರ್ತು ಆಕ್ಸಿಜನ್ ಉತ್ಪಾದನೆಗೆ ಶೀಘ್ರವೇ DRDO ಜೊತೆ ಸೇರಿ 30ರಿಂದ 40 ಆಕ್ಸಿಜನ್ ಘಟಕ ತೆರೆಯಲು ಕೂಡ ಮುಂದಾಗಿದ್ದು, ಮೇಘಾ ಇಂಜಿನಿಯರಿಂಗ್ ಕಂಪನಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಎರಡೂ ತೆಲುಗು ರಾಜ್ಯಗಳ ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕವನ್ನು ಉಚಿತವಾಗಿ ಪೂರೈಸಲು ಸಿದ್ಧವಾಗುತ್ತಿದೆ. ವಿವಿಧ ಆಸ್ಪತ್ರೆಗಳಲ್ಲಿನ ರೋಗಿಗಳ ಅಗತ್ಯಗಳನ್ನು ಪೂರೈಸಲು 5 ಲಕ್ಷ ಲೀಟರ್ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸಲು ಕಂಪನಿಯು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿ ಸಿಲಿಂಡರ್ ಸಾಮರ್ಥ್ಯವು 7,000 ಲೀಟರ್‌ನೊಂದಿಗೆ ದಿನಕ್ಕೆ 500 ರಿಂದ 600 ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸಲು MEIL ಯೋಜನೆ ಹಾಕಿಕೊಂಡಿದೆ. ಇದು ಸಂಪೂರ್ಣವಾಗಿ ಉಚಿತವಾಗಿದೆ. ಒಟ್ಟು ಆಮ್ಲಜನಕದ ಪೂರೈಕೆಯು ಸುಮಾರು 35 ಲಕ್ಷ ಲೀಟರ್ ಆಗಿರುತ್ತದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಪ್ರಯತ್ನಕ್ಕೆ ಅನುಗುಣವಾಗಿ, ಹೆಚ್ಚುತ್ತಿರುವ ಕೋವಿಡ್ -19 ರೋಗಿಗಳಿಗೆ ಸರಿಹೊಂದುವಂತೆ ವೈದ್ಯಕೀಯ ಆಮ್ಲಜನಕ ಬಿ ಮಾದರಿಯ ಸಿಲಿಂಡರ್‌ಗಳನ್ನು MEIL ಉಚಿತವಾಗಿ ನೀಡುತ್ತಿದೆ. ಎಂಇಐಲ್ ತನ್ನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ನಿಜಾಮ್ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (50 ಸಿಲಿಂಡರ್), ಸರೋಜಿನಿ ದೇವಿ ಕಣ್ಣಿನ ಆಸ್ಪತ್ರೆ (200), ಅಪೊಲೊ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (100) ಮತ್ತು ಹೈದರಾಬಾದ್ ಕೇರ್ ಹೈಟೆಕ್ ಆಸ್ಪತ್ರೆ (50) ನಿಂದ ಆಮ್ಲಜನಕ ಸಿಲಿಂಡರ್​ಗಳನ್ನು ಮರುಪೂರಣ ಮಾಡಲು ಎಂಇಐಲ್ ವಿನಂತಿಯನ್ನು ಸ್ವೀಕರಿಸಿದೆ. ಈ ಆಸ್ಪತ್ರೆಗಳು ತಮ್ಮ ಕೋವಿಡ್ ಹಾಸಿಗೆಯ ಬಲವನ್ನು ಹೆಚ್ಚಿಸಿವೆ.

ಡಿಆರ್‌ಡಿಒದ ತಾಂತ್ರಿಕ ಬೆಂಬಲದೊಂದಿಗೆ ಎಂಇಐಲ್ 30ರಿಂದ 40 ಆಮ್ಲಜನಕ ಉತ್ಪಾದನಾ ಘಟಕಗಳನ್ನು ನಿರ್ಮಿಸಲು ಕೂಡ ಯೋಜನೆ ಹಾಕಿಕೊಂಡಿದೆ. ಯುದ್ಧ ವಿಮಾನಗಳಲ್ಲಿ ಬಳಸುವ ಆನ್-ಬೋರ್ಡ್ ಆಮ್ಲಜನಕ ಉತ್ಪಾದನೆಯ ತಂತ್ರಜ್ಞಾನದ ಆಧಾರದ ಮೇಲೆ ಪ್ರತಿ ಪ್ಲಾಂಟ್ ನಿಮಿಷಕ್ಕೆ 150-1000 ಲೀಟರ್ ಆಕ್ಸಿಜನ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ. ಡಿಆರ್‌ಡಿಒ ನಿರ್ದೇಶಕ ಕರ್ನಲ್ ಬಿ.ಎಸ್. ರಾವತ್, ಹಿರಿಯ ವಿಜ್ಞಾನಿ ಡಾ.ರಾಘವೇಂದ್ರ ರಾವ್ ಅವರನ್ನು ಈ ಕೆಲಸ ಸಂಘಟಿಸಲು ನೇಮಿಸಿದ್ದಾರೆ.

ಎಂಇಐಎಲ್ ತನ್ನ ಕ್ರಯೋಜೆನಿಕ್ ಆಮ್ಲಜನಕ ದ್ರವೀಕರಣ ಘಟಕದಲ್ಲಿ ದಿನಕ್ಕೆ 30 ಟನ್ ಆಕ್ಸಿಜನ್ ಉತ್ಪಾದಿಸುತ್ತಿದೆ. ಮೇ 13ರ ಒಳಗೆ ಭದ್ರಾಚಲಂನ ಐಟಿಸಿಯಲ್ಲಿ ಇದನ್ನು ನಿಯೋಜಿಸಲಾಗುವುದು. ಅಗತ್ಯವಿದ್ದರೆ, ಸ್ಪೇನ್‌ನಲ್ಲಿನ ತನ್ನದೇ ಘಟಕದಿಂದ ಕ್ರಯೋಜೆನಿಕ್ ಆಮ್ಲಜನಕ ಟ್ಯಾಂಕ್‌ಗಳನ್ನು ಆಮದು ಮಾಡಿಕೊಳ್ಳಲು ಎಂಇಐಲ್ ಸಿದ್ಧವಾಗಿದೆ.

ಇದನ್ನೂ ಓದಿ: ‘ಮೇಕ್ ಇನ್ ಇಂಡಿಯಾ’ಗೆ ಮೆಘಾ ಇಂಜಿನಿಯರಿಂಗ್ & ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆ ಸಹಕಾರ

ಕ್ರಿಕೆಟಿಗ ಸುರೇಶ್ ರೈನಾಗೆ 10 ನಿಮಿಷದಲ್ಲಿ ಆಕ್ಸಿಜನ್ ಕೊಡಿಸಿದ ನಟ ಸೋನು ಸೂದ್! 

(Megha Engineering and Infrastructure Ltd starts Free Medical Oxygen Supply in Telugu States)

Published On - 6:56 pm, Sun, 9 May 21