ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್(Bill Gates), ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ (Mann Ki Baat) ನ 100 ಸಂಚಿಕೆಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಅಭಿನಂದಿಸಿದ್ದಾರೆ. ಮನ್ ಕಿ ಬಾತ್ ನೈರ್ಮಲ್ಯ, ಆರೋಗ್ಯ, ಮಹಿಳಾ ಆರ್ಥಿಕ ಸಬಲೀಕರಣ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಇತರ ವಿಷಯಗಳ ಮೇಲೆ ಸಮುದಾಯ ನೇತೃತ್ವದ ಕ್ರಮವನ್ನು ವೇಗಗೊಳಿಸಿದೆ ಎಂದು ಗೇಟ್ಸ್ ಟ್ವಿಟರ್‌ನಲ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ನ 100 ನೇ ಸಂಚಿಕೆಗೆ ಮುಂಚಿತವಾಗಿ, ಇನ್ಸ್ಟಿಟ್ಯೂಟ್ ಫಾರ್ ಕಾಂಪಿಟೀಟಿವ್ನೆಸ್ (IFC) ಆಕ್ಸಿಸ್ ಮೈ ಇಂಡಿಯಾ ಮತ್ತು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಪ್ರಾರಂಭವಾದ ಮಾಸಿಕ ರೇಡಿಯೊ ಕಾರ್ಯಕ್ರಮದ ಪರಿಣಾಮದ ಕುರಿತು ವಿವರವಾದ ವರದಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ಕಾರ್ಯಕ್ರಮದಲ್ಲಿ ಪ್ರಸಾರ ಭಾರತಿಯ ಸಿಇಒ ಗೌರವ್ ದ್ವಿವೇದಿ, MyGov ಸಿಇಒ ಆಕಾಶ್ ತ್ರಿಪಾಠಿ ಮತ್ತು ಐಎಫ್ ಸಿ ಅಧ್ಯಕ್ಷ ಅಮಿತ್ ಕಪೂರ್ ಉಪಸ್ಥಿತರಿದ್ದರು.
Mann ki Baat has catalyzed community led action on sanitation, health, women’s economic empowerment and other issues linked to the Sustainable Development Goals. Congratulations @narendramodi on the 100th episode. https://t.co/yg1Di2srjE
— Bill Gates (@BillGates) April 29, 2023
ನೈಸರ್ಗಿಕ ಭಾಷಾ ಸಂಸ್ಕರಣಾ ಸಾಧನಗಳನ್ನು ಬಳಸಿಕೊಂಡು 2014-2023 ರಿಂದ ಪ್ರಕಟವಾದ ಮನ್ ಕಿ ಬಾತ್‌ನ 99-ಕಂತುಗಳ ಪ್ರತಿಗಳ ವಿಸ್ತೃತ ಅಧ್ಯಯನ ನಡೆಸಿ ಈ ವರದಿ ಪ್ರಕಟಿಸಲಾಗಿದೆ.
ಪ್ರಮುಖ ವಿಷಯಾಧಾರಿತ ಕ್ಷೇತ್ರಗಳಾದ ಸ್ವಚ್ಛತೆ ಮತ್ತು ನೈರ್ಮಲ್ಯ, ಆರೋಗ್ಯ, ಕ್ಷೇಮ, ನೀರಿನ ಸಂರಕ್ಷಣೆ, ಮತ್ತು ಸುಸ್ಥಿರತೆಯ ಕುರಿತು ಆಕ್ಸಿಸ್ ಮೈ ಇಂಡಿಯಾದಿಂದ ಕ್ಯುರೇಟ್ ಮಾಡಲಾದ ಕೇಸ್ ಸ್ಟಡಿಗಳು ಇಲ್ಲಿವೆ. ಪಂಚಾಯತ್ ನಾಯಕರು, ಸ್ಟಾರ್ಟ್‌ಅಪ್‌ಗಳು ಮತ್ತು ಯುವಕರು ಸೇರಿದಂತೆ ವಿವಿಧ ಹಂತದಲ್ಲಿನ ಚೇಂಜ್ ಮೇಕರ್ಗಳ ಕತೆಗಳು ಇಲ್ಲಿವೆ. ಈ ವಿಷಯಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸಲು ಮತ್ತು ಭಾರತ ಮತ್ತು ಜಗತ್ತಿಗೆ ಹೊಸ, ನವೀನ ಮತ್ತು ದೀರ್ಘಾವಧಿಯ ಪರಿಹಾರಗಳನ್ನು ಪ್ರಯೋಗಿಸಲು ಜನರನ್ನು ಉತ್ತೇಜಿಸಲು ಸಹಾಯ ಮಾಡಿದೆ.
ನಾಗರಿಕರೊಂದಿಗೆ ಸಂಪರ್ಕ ಸಾಧಿಸುವುದು, ಕ್ರಿಯೆಯನ್ನು ವೇಗಗೊಳಿಸುವುದು, ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸಲು ಬದಲಾವಣೆ ಮಾಡುವವರನ್ನು ಪ್ರೇರೇಪಿಸುವುದು, ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಆವಿಷ್ಕಾರಗಳಿಗಾಗಿ ಸ್ಥಳೀಯ ಸಾಮರ್ಥ್ಯಗಳನ್ನು ಬಳಸಿದ್ದನ್ನು ವರದಿಯಲ್ಲಿ ಹೈಲೈಟ್ ಮಾಡಲಾಗಿದೆ.
ಮನ್ ಕಿ ಬಾತ್ ದೇಶದ ಅತ್ಯಂತ ಜನಪ್ರಿಯ ರೇಡಿಯೋ ಕಾರ್ಯಕ್ರಮವಾಗಿದೆ ಎಂದ ಪ್ರಸಾರ ಭಾರತಿಯ ಸಿಇಒ ಗೌರವ್ ದ್ವಿವೇದಿ ಅವರು ಪ್ರಧಾನಿಯವರ ದೂರದೃಷ್ಟಿ ಮತ್ತು ನಾಯಕತ್ವವನ್ನು ಶ್ಲಾಘಿಸಿದರು. ಕೋಟ್ಯಂತರ ಜನರನ್ನು ಸಂಪರ್ಕಿಸುವ ಸ್ಪೂರ್ತಿದಾಯಕ ಮತ್ತು ದೂರಗಾಮಿ ವೇದಿಕೆಯನ್ನು ರಚಿಸಿದ್ದಕ್ಕಾಗಿ ಮನ್ ಕಿ ಬಾತ್ ಕಾರ್ಯಕ್ರಮದೊಂದಿಗೆ ಸಂಬಂಧ ಹೊಂದಿರುವ ಪ್ರತಿಯೊಬ್ಬರನ್ನೂ ಅವರು ಅಭಿನಂದಿಸಿದ್ದಾರೆ.
ಇತ್ತೀಚಿನ ಅಧ್ಯಯನದ ಪ್ರಕಾರ ಮನ್ ಕಿ ಬಾತ್ ಕನಿಷ್ಠ 100 ಕೋಟಿ ಕೇಳುಗರನ್ನು ತಲುಪಿದೆ. ಮನ್ ಕಿ ಬಾತ್ ಅನ್ನು ಆಲ್ ಇಂಡಿಯಾ ರೇಡಿಯೊದಿಂದ 22 ಭಾರತೀಯ ಭಾಷೆಗಳು, 29 ಉಪಭಾಷೆಗಳು ಮತ್ತು 11 ವಿದೇಶಿ ಭಾಷೆಗಳಿಗೆ ಅನುವಾದಿಸಲಾಗಿದೆ. ಇಂಗ್ಲಿಷ್ ಜೊತೆಗೆ ಕಾರ್ಯಕ್ರಮವನ್ನು ಫ್ರೆಂಚ್, ಚೈನೀಸ್, ಇಂಡೋನೇಷಿಯನ್, ಟಿಬೆಟಿಯನ್, ಬರ್ಮೀಸ್, ಬಲೂಚಿ, ಅರೇಬಿಕ್, ಪಶ್ತು, ಪರ್ಷಿಯನ್, ಡಾರಿ ಮತ್ತು ಸ್ವಾಹಿಲಿ ಮುಂತಾದ 11 ವಿದೇಶಿ ಭಾಷೆಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಪ್ರಸ್ತುತ ಆಲ್ ಇಂಡಿಯಾ ರೇಡಿಯೋದ 500 ಕ್ಕೂ ಹೆಚ್ಚು ಪ್ರಸಾರ ಕೇಂದ್ರಗಳು ಪ್ರಸಾರ ಮಾಡುತ್ತಿವೆ.
ಇದನ್ನೂ ಓದಿ: Mann Ki Baat: ಮನ್ ಕಿ ಬಾತ್‌ನ 100ನೇ ಸಂಚಿಕೆ, 9 ಸಾವಿರ ಕಡೆಗಳಲ್ಲಿ ಸಾಕ್ಷಿಯಾಗಲಿರುವ ಹರಿಯಾಣದ 9 ಲಕ್ಷ ಜನ
ಐಎಫ್ ಸಿ ಅಧ್ಯಕ್ಷ ಅಮಿತ್ ಕಪೂರ್, ನಾಗರಿಕರ ತೊಡಗಿಸಿಕೊಳ್ಳುವಿಕೆಯನ್ನು ಉತ್ತೇಜಿಸುವ ಕಾರ್ಯಕ್ರಮದ ಸಾಮರ್ಥ್ಯವನ್ನು ಒತ್ತಿಹೇಳಿದರು. ಮನ್ ಕಿ ಬಾತ್ ಅನ್ನು ವಿಶ್ಲೇಷಿಸುವ ವರದಿಯು ವಿಶಿಷ್ಟವಾದ ರೇಡಿಯೊ ಕಾರ್ಯಕ್ರಮದ ವ್ಯಾಪ್ತಿಯನ್ನು ಮತ್ತು ಪ್ರಭಾವವನ್ನು ಅರ್ಥಮಾಡಿಕೊಳ್ಳಲು ಅಮೂಲ್ಯ ಕೊಡುಗೆಯಾಗಿದೆ. ಪ್ರಧಾನಿ ಮೋದಿಯವರು ಕಾರ್ಯಕ್ರಮದ ಮೂಲಕ ಲಕ್ಷಾಂತರ ಜನರನ್ನು ತಲುಪುತ್ತಿದ್ದಾರೆ. ವರದಿಯು ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು, ನಾಗರಿಕರಿಗೆ ಮುಖ್ಯವಾದ ವಿಷಯಗಳನ್ನು ತಿಳಿಸಲು ರೇಡಿಯೊದ ಶಕ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Sat, 29 April 23