
ದೆಹಲಿ: ಎಲ್ಲಾ ವಲಸೆ ಕಾರ್ಮಿಕರನ್ನು ಇನ್ನು 15 ದಿನದಲ್ಲಿ ತವರು ರಾಜ್ಯಕ್ಕೆ ಕಳುಹಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ವಲಸೆ ಕಾರ್ಮಿಕರಿಗೆ ಕೌನ್ಸೆಲಿಂಗ್ ಸೆಂಟರ್ ತೆರೆಯಬೇಕು. 24 ಗಂಟೆಯಲ್ಲಿ ಶ್ರಮಿಕ ಸ್ಪೆಷಲ್ ರೈಲು ಒದಗಿಸಬೇಕೆಂದು ಇದೇ ವೇಳೆ ಸುಪ್ರೀಂಕೋರ್ಟ್ ಸೂಚಿಸಿದೆ.
ವಲಸೆ ಕಾರ್ಮಿಕರ ಮೇಲೆ ದಾಖಲಾಗಿರುವ ಕೇಸ್ಗಳನ್ನು ಹಿಂತೆಗೆದುಕೊಳ್ಳಿ. ಕಾರ್ಮಿಕರಿಗೆ ಸಹಾಯವಾಗುವ ಯೋಜನೆ ಜಾರಿಗೆ ತನ್ನಿ. ಎಲ್ಲ ವಲಸಿಗರ ಹೆಸರು ನೋಂದಣಿ ಮಾಡಿಕೊಳ್ಳಿ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.