Milk Price Hike: ಭಾನುವಾರದಿಂದ ಮದರ್ ಡೈರಿ ಹಾಲಿನ ಬೆಲೆ 1 ಲೀಟರ್​ಗೆ 2 ರೂ. ಏರಿಕೆ

| Updated By: ಸುಷ್ಮಾ ಚಕ್ರೆ

Updated on: Mar 05, 2022 | 4:45 PM

Mother Dairy: ದೆಹಲಿ, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮದರ್ ಡೈರಿ ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸಲಾಗಿದೆ. ಈ ಆಯ್ದ ಪ್ರದೇಶಗಳನ್ನು ಮೀರಿದ ಮಾರುಕಟ್ಟೆಗಳನ್ನು ಹಂತಹಂತವಾಗಿ ಪರಿಷ್ಕರಿಸಲಾಗುವುದು.

Milk Price Hike: ಭಾನುವಾರದಿಂದ ಮದರ್ ಡೈರಿ ಹಾಲಿನ ಬೆಲೆ 1 ಲೀಟರ್​ಗೆ 2 ರೂ. ಏರಿಕೆ
ಮದರ್ ಡೈರಿ
Follow us on

ನವದೆಹಲಿ: ಸಂಗ್ರಹಣೆ ವೆಚ್ಚದ ಏರಿಕೆಯಿಂದಾಗಿ ಮದರ್ ಡೈರಿ (Mother Dairy) ಹಾಲಿನ ಬೆಲೆಯನ್ನು ದೆಹಲಿಯಲ್ಲಿ ಭಾನುವಾರದಿಂದ 1 ಲೀಟರ್‌ಗೆ 2 ರೂ. ಹೆಚ್ಚಿಸಲಾಗುವುದು. ಅಮುಲ್ ಮತ್ತು ಪರಾಗ್ ಮಿಲ್ಕ್ ಫುಡ್ಸ್ ಪ್ರತಿ ಲೀಟರ್‌ಗೆ 2 ರೂ. ಬೆಲೆಯನ್ನು ಹೆಚ್ಚಿಸಿದ ಬೆನ್ನಲ್ಲೇ ಮದರ್ ಡೈರಿ ಹಾಲಿನ ದರವನ್ನೂ ಹೆಚ್ಚಿಸಲಾಗಿದೆ. ಇದು ದೆಹಲಿ- ಎನ್​ಸಿಆರ್​​ ವ್ಯಾಪ್ತಿಗೆ ಮಾತ್ರ ಅನ್ವಯವಾಗಲಿದೆ. ಭಾನುವಾರದಿಂದ ದೆಹಲಿ-ಎನ್‌ಸಿಆರ್‌ನಲ್ಲಿ ಮದರ್ ಡೈರಿ ಪ್ರತಿ ಲೀಟರ್ ಹಾಲಿನ ದರವನ್ನು 2 ರೂಪಾಯಿಗಳಷ್ಟು ಹೆಚ್ಚಿಸಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ. ಅದರಂತೆ, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಮದರ್ ಡೈರಿ ಹಾಲು (Milk Price) ನಾಳೆಯಿಂದ ದುಬಾರಿಯಾಗಲಿದೆ. ಮದರ್ ಡೈರಿಯು ಈ ಹಿಂದೆ ಜುಲೈ 2021ರಲ್ಲಿ ಹಾಲಿನ ದರವನ್ನು ಹೆಚ್ಚಿಸಿತ್ತು. ಭಾರತದಲ್ಲಿನ ಮತ್ತೊಂದು ಪ್ರಮುಖ ಡೈರಿ ಉತ್ಪಾದಕರಾದ ಅಮುಲ್, ಮಾರ್ಚ್ 1ರಂದು ಎಲ್ಲಾ ರೀತಿಯ ಹಾಲಿನ ದರವನ್ನು ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಿಸಿತ್ತು.

ಹೆಚ್ಚುತ್ತಿರುವ ಸಂಗ್ರಹಣೆ ಬೆಲೆಗಳು (ರೈತರಿಗೆ ನೀಡಿದ ಮೊತ್ತ), ಇಂಧನ ವೆಚ್ಚಗಳು ಮತ್ತು ಪ್ಯಾಕೇಜಿಂಗ್ ವಸ್ತುಗಳ ವೆಚ್ಚಗಳ ಕಾರಣದಿಂದ 2022ರ ಮಾರ್ಚ್ 6ರಿಂದ ದೆಹಲಿ ಎನ್‌ಸಿಆರ್‌ನಲ್ಲಿ ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸುವುದಾಗಿ ಮದರ್ ಡೈರಿ ಘೋಷಿಸಿದೆ.

ಹೊಸ ಬೆಲೆಗಳ ವಿವರಗಳು ಇಲ್ಲಿವೆ:
ಭಾನುವಾರದಿಂದ ಮದರ್ ಡೈರಿಯ ಫುಲ್ ಕೆನೆ ಹಾಲಿನ ದರ ಲೀಟರ್​ಗೆ 57 ರೂ. ಇದ್ದುದು 59 ರೂ.ಗೆ ಏರಿಕೆಯಾಗಲಿದೆ. ಟೋನ್ಡ್ ಹಾಲಿನ ಬೆಲೆ ಲೀಟರ್‌ಗೆ 49 ರೂ.ಗೆ ಏರಿದರೆ, ಡಬಲ್ ಟೋನ್ಡ್ ಹಾಲಿನ ಬೆಲೆ ಲೀಟರ್‌ಗೆ 43 ರೂ., ಹಸುವಿನ ಹಾಲಿನ ದರ ಲೀಟರ್‌ಗೆ 49 ರೂ.ನಿಂದ 51 ರೂ.ಗೆ ಏರಿಕೆಯಾಗಲಿದೆ. ಬಲ್ಕ್ ವೆಂಡೆಡ್ ಹಾಲಿನ (ಟೋಕನ್ ಹಾಲು) ಪ್ರತಿ ಲೀಟರ್ ಗೆ 44 ರೂ.ನಿಂದ 46 ರೂ.ಗೆ ಏರಿಕೆಯಾಗಲಿದೆ.

“ಹೆಚ್ಚುತ್ತಿರುವ ಸಂಗ್ರಹಣೆ ಬೆಲೆಗಳು (ರೈತರಿಗೆ ಪಾವತಿಸಿದ ಮೊತ್ತ), ಇಂಧನ ವೆಚ್ಚಗಳು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ವೆಚ್ಚಗಳ ದೃಷ್ಟಿಯಿಂದ ಮಾರ್ಚ್ 6ರಿಂದ ಜಾರಿಗೆ ಬರುವಂತೆ ದೆಹಲಿ NCRನಲ್ಲಿ ಮದರ್ ಡೈರಿಯು ಹಾಲಿನ ಬೆಲೆಯನ್ನು 2 ರೂ.ಗೆ ಹೆಚ್ಚಿಸಲಾಗಿದೆ. ಫುಲ್ ಕ್ರೀಮ್ ಹಾಲಿನ ದರ ಭಾನುವಾರದಿಂದ ಲೀಟರ್‌ಗೆ 59 ರೂ. ಆಗಲಿದ್ದು, ಶನಿವಾರ ಲೀಟರ್‌ಗೆ 57ಕ್ಕೆ ಏರಿಕೆಯಾಗಲಿದೆ.

ದೆಹಲಿ, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಹಾಲಿನ ಬೆಲೆಯನ್ನು 2 ರೂ. ಹೆಚ್ಚಿಸಲಾಗಿದೆ. ಈ ಆಯ್ದ ಪ್ರದೇಶಗಳನ್ನು ಮೀರಿದ ಮಾರುಕಟ್ಟೆಗಳನ್ನು ಹಂತಹಂತವಾಗಿ ಪರಿಷ್ಕರಿಸಲಾಗುವುದು. ಮದರ್ ಡೈರಿ ಮಿಲ್ಕ್ ದೇಶಾದ್ಯಂತ 100ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: ಹಾಲಿನಲ್ಲಿರುವಷ್ಟೇ ಕ್ಯಾಲ್ಸಿಯಂ ಎಲೆಕೋಸಿನಲ್ಲಿದೆ; ಇದರ ಆರೋಗ್ಯ ಪ್ರಯೋಜನಗಳು ಇಲ್ಲಿದೆ ಗಮನಿಸಿ

ರಾಜ್ಯದ ಜನತೆಗೆ ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ಶಾಕ್? ಸಿಎಂ ಚರ್ಚೆ ಬಳಿಕ ಘೋಷಣೆ