5G Connectivity ಮದ್ರಾಸ್ ಐಐಟಿಯಲ್ಲಿ 5G ಕರೆ ಪರೀಕ್ಷೆ ನಡೆಸಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್

| Updated By: ರಶ್ಮಿ ಕಲ್ಲಕಟ್ಟ

Updated on: May 19, 2022 | 10:33 PM

ಪರೀಕ್ಷಾ ಕರೆಯ ವಿಡಿಯೊವನ್ನು ಟ್ವೀಟ್ ಮಾಡಿರುವ ಸಚಿವರು ಅದಕ್ಕೆ "ಆತ್ಮನಿರ್ಭರ್ 5G" ಎಂದು ಶೀರ್ಷಿಕೆ ನೀಡಿದ್ದಾರೆ. ವಿಡಿಯೊದಲ್ಲಿ ವೈಷ್ಣವ್ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೊ ಕರೆ ಮಾಡುತ್ತಿರುವುದು ಕಾಣಿಸುತ್ತದೆ

5G Connectivity ಮದ್ರಾಸ್ ಐಐಟಿಯಲ್ಲಿ 5G ಕರೆ ಪರೀಕ್ಷೆ ನಡೆಸಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್
ಅಶ್ವಿನಿ ವೈಷ್ಣವ್
Follow us on

ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಗುರುವಾರ ಐಐಟಿ ಮದ್ರಾಸ್‌ನಲ್ಲಿ (IIT Madras) 5G ಕರೆಯನ್ನು(5G call) ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ. ಸಂಪೂರ್ಣ ಎಂಡ್ ಟು ಎಂಡ್ ನೆಟ್‌ವರ್ಕ್ ಅನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ಹೇಳಿದರು. ಪರೀಕ್ಷಾ ಕರೆಯ ವಿಡಿಯೊವನ್ನು ಟ್ವೀಟ್ ಮಾಡಿರುವ ಸಚಿವರು ಅದಕ್ಕೆ “ಆತ್ಮನಿರ್ಭರ್ 5G” ಎಂದು ಶೀರ್ಷಿಕೆ ನೀಡಿದ್ದಾರೆ. ವಿಡಿಯೊದಲ್ಲಿ ವೈಷ್ಣವ್ ಸ್ಮಾರ್ಟ್‌ಫೋನ್‌ನಲ್ಲಿ ವಿಡಿಯೊ ಕರೆ ಮಾಡುತ್ತಿರುವುದು ಕಾಣಿಸುತ್ತದೆ. ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಯವರ ಕನಸು ಸಾಕಾರವಾಗಿದೆ. ಭಾರತದಲ್ಲಿ 4G ಮತ್ತು 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ಜಗತ್ತಿಗೆ ತಯಾರಿಸುವುದು ಅವರ ಕನಸು. ಈ ಸಂಪೂರ್ಣ ತಂತ್ರಜ್ಞಾನದೊಂದಿದೆ ನಾವು ಜಗತ್ತನ್ನು ಗೆಲ್ಲಬೇಕು ಎಂದು ಸಚಿವರು ಹೇಳಿದ್ದಾರೆ.

ಭಾರತದಲ್ಲಿ 5G
ಈ ಹಿಂದೆ ಟೆಲಿಕಮ್ಯುನಿಕೇಷನ್ ಇಲಾಖೆಯು 2022ರಲ್ಲಿ ಭಾರತದಲ್ಲಿ 5G ಸೇವೆ ಆರಂಭಿಸುವುದಾಗಿ ಹೇಳಿತ್ತು. ಆರಂಭದಲ್ಲಿ ಭಾರತದ 13 ನಗರಗಳಲ್ಲಿ ಈ ಸೇವೆ ಲಭ್ಯವಾಗುವಂತೆ ಮಾಡಲಾಗುವುದು.ಆನಂತರ ಇತರ ನಗರಗಳಲ್ಲಿ ಸೇವೆ ನೀಡಲಾಗುವುದು ಎಂದು ಇಲಾಖೆ ಹೇಳಿತ್ತು. ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಅವರು ಜೂನ್ ಆರಂಭದಲ್ಲಿ ಏರ್‌ವೇವ್ಸ್ ಸೇರಿದಂತೆ 5G ತರಂಗಾಂತರದ ಹರಾಜನ್ನು ಸರ್ಕಾರ ನಡೆಸುವ ನಿರೀಕ್ಷೆಯಿದೆ ಎಂದು ಘೋಷಿಸಿದರು. ಹರಾಜಿನ ನಂತರ, ಸರ್ಕಾರವು ಅಂತಿಮವಾಗಿ ಈ ವರ್ಷದ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ 13 ನಗರಗಳ ಜನರಿಗೆ 5G ಸೇವೆಗಳನ್ನು ಪ್ರಾರಂಭಿಸಬಹುದು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

 

 

Published On - 10:09 pm, Thu, 19 May 22