AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gudivada: ಅಪ್ರಾಪ್ತ ವಯಸ್ಸಿನ ಬಾಲಕ ನಾಪತ್ತೆ, ಜೊತೆಗೆ ಎದುರು ಮನೆ ಆಂಟಿ ಸಹ ನಾಪತ್ತೆ! ಪ್ರಕರಣ ನಿಗೂಢ

ಗಂಡ ಮತ್ತು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಬ್ಬರು ಹುಡುಗನನ್ನು ದೂರ ಮಾಡಿದ್ದರಿಂದ ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸ ಒದಗಿಸಿದೆ.

Gudivada: ಅಪ್ರಾಪ್ತ ವಯಸ್ಸಿನ ಬಾಲಕ ನಾಪತ್ತೆ, ಜೊತೆಗೆ ಎದುರು ಮನೆ ಆಂಟಿ ಸಹ ನಾಪತ್ತೆ! ಪ್ರಕರಣ ನಿಗೂಢ
Gudivada: ಅಪ್ರಾಪ್ತ ವಯಸ್ಸಿನ ಬಾಲಕ ನಾಪತ್ತೆ, ಜೊತೆಗೆ ಎದುರು ಮನೆ ಆಂಟಿ ಸಹ ನಾಪತ್ತೆ! ಪ್ರಕರಣ ನಿಗೂಢ
TV9 Web
| Edited By: |

Updated on: Jul 25, 2022 | 8:54 PM

Share

ಅದು ಆಂಧ್ರಪ್ರದೇಶದ ಗುಡಿವಾಡ ಪಟ್ಟಣ. ಆ ಊರಿನಲ್ಲಿ ಗುಡ್‌ಮೆನ್ ಪೇಟ ಎಂಬ ಕಾಲೋನಿ ಇದೆ. ಆ ಕಾಲೋನಿಯಿಂದ ಇತ್ತೀಚೆಗೆ 15 ವರ್ಷದ ಬಾಲಕ ನಾಪತ್ತೆಯಾಗಿದ್ದ. ಪೋಷಕರು ಸುತ್ತಮುತ್ತ ಹುಡುಕಾಡಿದರೂ ಎಲ್ಲೂ ಪತ್ತೆಯಾಗಲಿಲ್ಲ. ಆದರೆ ಕುತೂಹಲಕಾರಿ ಬೆಳವಣಿಗೆಯಲ್ಲಿ… ಎದುರು ಮನೆಯ ಆಂಟಿ ಸಹ…

ಗುಡಿವಾಡ (ಆಂಧ್ರಪ್ರದೇಶ): ಇದು ಆಂಧ್ರಪ್ರದೇಶದ ಗುಡಿವಾಡ ಪಟ್ಟಣ. ಆ ಊರಿನಲ್ಲಿ ಗುಡ್‌ಮೆನ್ ಪೇಟ ಎಂಬ ಕಾಲೋನಿ ಇದೆ. ಆ ಕಾಲೋನಿಯಿಂದ ಇತ್ತೀಚೆಗೆ 15 ವರ್ಷದ ಬಾಲಕ ನಾಪತ್ತೆಯಾಗಿದ್ದ. ಇದರಿಂದ ಪೋಷಕರು ಸುತ್ತಮುತ್ತ ಹುಡುಕಾಡುವಂತಾಯಿತು. ಸ್ನೇಹಿತರ ಮನೆಯಲ್ಲಿ ಇದ್ದಾರಾ ಎಂದೂ ವಿಚಾರಿಸಿದರು. ಆದರೆ ಎಲ್ಲೂ ಪತ್ತೆಯಾಗಲಿಲ್ಲ. ಆದರೆ ಕುತೂಹಲಕಾರಿ ಬೆಳವಣಿಗೆಯಲ್ಲಿ ಬಾಲಕನ ಮನೆಯ ಎದುರು ವಾಸವಿದ್ದ 29 ವರ್ಷದ ವಿವಾಹಿತ ಯುವ ಮಹಿಳೆ ಕೂಡ ನಾಪತ್ತೆಯಾಗಿದ್ದಾರೆ ಎಂಬ ಸಂಗತಿ ಬಹಿರಂಗವಾಯಿತು. ಇದರಿಂದ ಬಾಲಕನ ಪೋಷಕರಲ್ಲಿ ಟೆನ್ಷನ್ ಶುರುವಾಗಿದೆ. ಆಕೆ ತಮ್ಮ ಹುಡುಗನನ್ನು ಕಿಡ್ನಾಪ್ ಮಾಡಿದ್ದಾಳೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಂಡ ಮತ್ತು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆ ಸೂತ್ರಧಾರಿ:

ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಣಕ್ಕಾಗಿ ಬಾಲಕನನ್ನು ಅಪಹರಿಸಲಾಗಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಡ ಮತ್ತು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಬ್ಬರು ಹುಡುಗನನ್ನು ದೂರ ಮಾಡಿದ್ದರಿಂದ ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸ ಒದಗಿಸಿದೆ.

ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಪ್ರಕರಣದ ನಿಗೂಢತೆಯನ್ನು ಭೇದಿಸಲು ಯತ್ನಿಸುತ್ತಿದ್ದಾರೆ. ಮದುವೆ ನೆಪದಲ್ಲಿ ಬಾಲಕನನ್ನು ಕರೆದುಕೊಂಡು ಹೋಗಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಟು ಟೌನ್ ಸಿಐ ದುರ್ಗಾರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೇಲಾಗಿ ಬಾಲಕನ ಬಗ್ಗೆ ಮಾಹಿತಿ ತಿಳಿಸುವವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಬಾಲಕನ ಪೋಷಕರು ತಿಳಿಸಿದ್ದಾರೆ.

To read in Telugu click here