ಬಿಹಾರ ಗಡಿಯಿಂದ ಹೆಣ್ಣುಮಕ್ಕಳು ಕಣ್ಮರೆ, 100ಕ್ಕೂ ಹೆಚ್ಚು ಹುಡುಗಿಯರು ಎಲ್ಲಿಗೆ ಹೋದ್ರು?
ಭಾರತ-ನೇಪಾಳ ಗಡಿ ಪ್ರದೇಶದಿಂದ ಕಳೆದ ಆರು ತಿಂಗಳಲ್ಲಿ 100ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ. ನೇಪಾಳ, ಚೀನಾ, ಬ್ರೆಜಿಲ್, ಸೌದಿ ಅರೇಬಿಯಾ ಸೇರಿದಂತೆ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವ ಕಳ್ಳಸಾಗಣೆ ಸಿಂಡಿಕೇಟ್‌ಗಳು ಈ ಹೆಣ್ಣುಮಕ್ಕಳನ್ನು ಅತಿಯಾದ ಬೆಲೆಗೆ ಮಾರಾಟ ಮಾಡುವ ಮೂಲಕ ಕೋಟ್ಯಂತರ ಹಣ ಗಳಿಸುತ್ತಿವೆ.ಈ ಹುಡುಗಿಯರ ಪೈಕಿ ಕೇವಲ 12 ಹುಡುಗಿಯರನ್ನು ಇತ್ತೀಚೆಗೆ ರಕ್ಷಿಸಲಾಗಿದೆ. ಉಳಿದವ ಸುಳಿವು ಇನ್ನೂ ಪತ್ತೆಯಾಗಿಲ್ಲ, ರಕ್ಷಿಸಲಾದ ಹುಡುಗಿಯರಲ್ಲಿ ನಾಲ್ವರು ಒಂದೇ ಕುಟುಂಬದವರು.

ಪಾಟ್ನಾ, ಡಿಸೆಂಬರ್ 01: ಭಾರತ-ನೇಪಾಳ(Nepal) ಗಡಿ ಪ್ರದೇಶದಿಂದ ಕಳೆದ ಆರು ತಿಂಗಳಲ್ಲಿ 100ಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ. ನೇಪಾಳ, ಚೀನಾ, ಬ್ರೆಜಿಲ್, ಸೌದಿ ಅರೇಬಿಯಾ ಸೇರಿದಂತೆ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾನವ ಕಳ್ಳಸಾಗಣೆ ಸಿಂಡಿಕೇಟ್‌ಗಳು ಈ ಹೆಣ್ಣುಮಕ್ಕಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಕೋಟ್ಯಂತರ ಹಣ ಗಳಿಸುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಹುಡುಗಿಯರ ಪೈಕಿ ಕೇವಲ 12 ಹುಡುಗಿಯರನ್ನು ಇತ್ತೀಚೆಗೆ ರಕ್ಷಿಸಲಾಗಿದೆ. ಉಳಿದವರ ಸುಳಿವು ಇನ್ನೂ ಪತ್ತೆಯಾಗಿಲ್ಲ, ರಕ್ಷಿಸಲಾದ ಹುಡುಗಿಯರಲ್ಲಿ ನಾಲ್ವರು ಒಂದೇ ಕುಟುಂಬದವರು. ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುತ್ತಿರುವುದು ಗಡಿ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈಗ ಈ ವಿಚಾರ ಮಾನವ ಹಕ್ಕುಗಳ ಆಯೋಗವನ್ನು ತಲುಪಿದೆ. ಮಾನವ ಹಕ್ಕುಗಳ ವಕೀಲರಾದ ಎಸ್.ಕೆ. ಝಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಬಿಹಾರ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮತ್ತಷ್ಟು ಓದಿ: ಹುಡುಗಿಯರ ಪೂರೈಕೆ ಮಾಡ್ತಾನೆ, ನನ್ನನ್ನೇ ರಾಜಕಾರಣಿ ಜೊತೆ ಮಲಗು ಅಂತಾನೆ: ಮುಸ್ಲಿಂ ಮಹಿಳೆ ಕಣ್ಣೀರ ಮಾತು
ನಮ್ಮ ದೇಶದ ಜೊತೆಗೆ, ನೇಪಾಳ, ಚೀನಾ, ಬ್ರೆಜಿಲ್ ಮತ್ತು ಸೌದಿ ಅರೇಬಿಯಾದಲ್ಲಿ ಹೆಣ್ಣುಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಮೋತಿಹಾರಿಯ ಪಕ್ಕದಲ್ಲಿರುವ ಭಾರತ-ನೇಪಾಳ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಕಳ್ಳಸಾಗಣೆದಾರರು ಸಕ್ರಿಯರಾಗಿದ್ದಾರೆ.
ಬಿಹಾರದಲ್ಲಿ 6 ತಿಂಗಳಲ್ಲಿ 83 ಹುಡುಗಿಯರು ನಾಪತ್ತೆ ಜುಲೈನಲ್ಲಿ ರಕ್ಸೌಲ್ ನಿಂದ 10 ಹುಡುಗಿಯರು, ರಾಮಗರ್ವಾದಿಂದ 3 ಹುಡುಗಿಯರು, ಆದಾಪುರದಿಂದ 4 ಹುಡುಗಿಯರು, ಆಗಸ್ಟ್ ನಲ್ಲಿ ರಕ್ಸೌಲ್ ಉಪವಿಭಾಗದ ಭೇಲಾಹಿ ಮತ್ತು ಕೌದಿಹಾರ್ ಸೇರಿದಂತೆ ವಿವಿಧ ಸ್ಥಳಗಳಿಂದ 18 ಹುಡುಗಿಯರು, ಸೆಪ್ಟೆಂಬರ್ ನಲ್ಲಿ ಇಡೀ ಉಪವಿಭಾಗದ ವಿವಿಧ ಸ್ಥಳಗಳಿಂದ ವಿವಾಹಿತ ಮಹಿಳೆ ಸೇರಿದಂತೆ 17 ಮಂದಿ, ಅಕ್ಟೋಬರ್ ನಲ್ಲಿ 15 ಹುಡುಗಿಯರು ಮತ್ತು ನವೆಂಬರ್ ನಲ್ಲಿ 15 ಹುಡುಗಿಯರು ಸೇರಿದಂತೆ ಒಟ್ಟು 83 ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂದು ವಕೀಲ ಎಸ್.ಕೆ. ಝಾ ಹೇಳಿದ್ದಾರೆ.
ವಿದೇಶಗಳಿಗೆ ಹೆಣ್ಣು ಮಕ್ಕಳ ಮಾರಾಟ ಹುಡುಗಿಯರನ್ನು ಮದುವೆಯಾಗುವುದಾಗಿ ನಂಬಿಸಿ ಆಮಿಷ ಒಡ್ಡಿ ಜಮ್ಮು ಮತ್ತು ಕಾಶ್ಮೀರ, ಪುದುಚೇರಿ, ಚೀನಾ, ಸೌದಿ ಅರೇಬಿಯಾ, ದುಬೈ, ಗಲ್ಫ್ ರಾಷ್ಟ್ರಗಳು ಮತ್ತು ಅರ್ಜೆಂಟೀನಾದಂತಹ ದೇಶಗಳಿಗೆ ಮಕ್ಕಳನ್ನು ಹೆರವುದಕ್ಕೆ ಮತ್ತು ವೇಶ್ಯಾವಾಟಿಕೆ ಸೇರಿ ಹಲವು ಉದ್ದೇಶಗಳಿಗಾಗಿ ಕಳುಹಿಸಲಾಗುತ್ತಿದೆ. ಮದುವೆ ಮತ್ತು ದೇಹದ ಭಾಗಗಳ ಮಾರಾಟಕ್ಕಾಗಿ ಹುಡುಗಿಯರನ್ನು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೆ ಸಾಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ವಕೀಲ ಎಸ್.ಕೆ. ಝಾ ಅವರು ಈ ಪ್ರಕರಣವು ಅತ್ಯಂತ ಸೂಕ್ಷ್ಮ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ. ಇದು ಪೊಲೀಸರ ಕಾರ್ಯಶೈಲಿ ಮತ್ತು ಆಡಳಿತ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆಯೋಗದಿಂದ ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಝಾ ಒತ್ತಾಯಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




