MK Stalin: ವಾಕಿಂಗ್ ವೇಳೆ ಎಂ.ಕೆ ಸ್ಟಾಲಿನ್​ಗೆ ನಿಮ್ಮ ಸೌಂದರ್ಯದ ಗುಟ್ಟೇನು? ಎಂದ ಮಹಿಳೆ; ನಾಚಿ ನಿಂತ ಸಿಎಂ

MK Stalin Fitness Video | ವಾಕಿಂಗ್ ಹೋಗುತ್ತಿದ್ದ ಮುಖ್ಯಮಂತ್ರಿ ಸ್ಟಾಲಿನ್ ಅವರ ಬಳಿ ಕೆಲವು ಮಹಿಳೆಯರು ರಸ್ತೆಯಲ್ಲಿ ಮಾತನಾಡಿದ್ದು, 'ನೀವು ಸದಾ ಯುವಕರಂತೆ ಕಾಣುತ್ತೀರಲ್ಲ, ನಿಮ್ಮ ಸೌಂದರ್ಯ, ಉತ್ಸಾಹದ ಗುಟ್ಟೇನು?' ಎಂದು ಕೇಳಿದ್ದಾರೆ. ಇದನ್ನು ಕೇಳಿ ಸಿಎಂ ಸ್ಟಾಲಿನ್ ನಾಚಿಕೊಂಡಿದ್ದಾರೆ.

MK Stalin: ವಾಕಿಂಗ್ ವೇಳೆ ಎಂ.ಕೆ ಸ್ಟಾಲಿನ್​ಗೆ ನಿಮ್ಮ ಸೌಂದರ್ಯದ ಗುಟ್ಟೇನು? ಎಂದ ಮಹಿಳೆ; ನಾಚಿ ನಿಂತ ಸಿಎಂ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
Updated By: ಸುಷ್ಮಾ ಚಕ್ರೆ

Updated on: Sep 21, 2021 | 3:37 PM

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ಮುಂಜಾನೆ ವಾಕಿಂಗ್​ಗೆ ಹೋಗಿದ್ದಾಗ ಎದುರಲ್ಲಿ ಸಿಕ್ಕ ಜನರು ಕೇಳಿದ ಪ್ರಶ್ನೆಗೆ ನಾಚಿ ನೀರಾಗಿದ್ದಾರೆ. ಟ್ರಾಕ್ ಪ್ಯಾಂಟ್ ಹಾಕಿಕೊಂಡು ವಾಕಿಂಗ್ ಹೋಗುತ್ತಿದ್ದ ಸಿಎಂ ಸ್ಟಾಲಿನ್ (MK Stalin) ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾಕಿಂಗ್ ಹೋಗುತ್ತಿದ್ದ ಮುಖ್ಯಮಂತ್ರಿ ಸ್ಟಾಲಿನ್ ಅವರ ಬಳಿ ಕೆಲವು ಮಹಿಳೆಯರು ರಸ್ತೆಯಲ್ಲಿ ಮಾತನಾಡಿದ್ದು, ‘ನೀವು ಸದಾ ಯುವಕರಂತೆ ಕಾಣುತ್ತೀರಲ್ಲ, ನಿಮ್ಮ ಸೌಂದರ್ಯ, ಉತ್ಸಾಹದ ಗುಟ್ಟೇನು?’ ಎಂದು ಕೇಳಿದ್ದಾರೆ. ಇದನ್ನು ಕೇಳಿ ಸಿಎಂ ಸ್ಟಾಲಿನ್ ನಾಚಿಕೊಂಡಿದ್ದಾರೆ.

ಮಹಿಳೆ ಆ ಪ್ರಶ್ನೆ ಕೇಳುತ್ತಿದ್ದಂತೆ ಜೋರಾಗಿ ನಕ್ಕ 68 ವರ್ಷದ ಎಂ.ಕೆ. ಸ್ಟಾಲಿನ್ ‘ನಾನು ಡಯಟ್ ಕಂಟ್ರೋಲ್ ಮಾಡುತ್ತೇನೆ. ಅದರಿಂದಲೇ ನಾನಿನ್ನೂ ಫಿಟ್ ಆಗಿದ್ದೇನೆ’ ಎಂದಿದ್ದಾರೆ. ಈ ವಿಡಿಯೋವನ್ನು ಡಿಎಂಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.

ಎಂ.ಕೆ. ಸ್ಟಾಲಿನ್ ಜಿಮ್​ನಲ್ಲಿ ಬೆವರಿಳಿಸುತ್ತಿದ್ದ ವಿಡಿಯೋವೊಂದನ್ನು ಇತ್ತೀಚೆಗೆ ಡಿಂಎಕೆ ಹಂಚಿಕೊಂಡಿತ್ತು. ಸ್ಟಾಲಿನ್ ಅಧಿಕಾರಕ್ಕೆ ಬಂದಾಗಿನಿಂದಲೂ ಅವರ ಫಿಟ್​ನೆಸ್​ ವಿಡಿಯೋಗಳನ್ನು ಟ್ವಿಟ್ಟರ್​ನಲ್ಲಿ ಆಗಾಗ ಪೋಸ್ಟ್ ಮಾಡಲಾಗುತ್ತಿದೆ. ಹೀಗಾಗಿಯೇ ಜಿಮ್​ನಲ್ಲಿ ವರ್ಕ್​ಔಟ್ ಮಾಡುತ್ತಿದ್ದ ಸ್ಟಾಲಿನ್ ಅವರ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಇನ್ನೊಂದು ವಿಡಿಯೋದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೈಕ್ಲಿಂಗ್ ಮಾಡಿಕೊಂಡು ರಸ್ತೆಯಲ್ಲಿ ಹೋಗುವಾಗ ರಸ್ತೆ ಬದಿಯ ಚಹಾ ಅಂಗಡಿಯಲ್ಲಿ ಚಹಾ ಕುಡಿದು, ಅಲ್ಲಿದ್ದವರ ಜೊತೆ ಮಾತನಾಡಿ, ಸೆಲ್ಫೀ ಕ್ಲಿಕ್ಕಿಸಿಕೊಂಡ ವಿಡಿಯೋ ಕೂಡ ವೈರಲ್ ಆಗಿತ್ತು.

ನನ್ನ ಬಿಡುವಿಲ್ಲದ ದಿನಚರಿಯ ನಡುವೆಯೇ ನನ್ನ ಆರೋಗ್ಯಕ್ಕೆಂದು ಸ್ವಲ್ಪ ಸಮಯವನ್ನು ಮೀಸಲಿಡುತ್ತೇನೆ. ಹಾಗೇ, ನನ್ನ ಬಿಡುವಿನ ಸಮಯದಲ್ಲಿ ಮೊಮ್ಮಕ್ಕಳೊಂದಿಗೆ ಎಂಜಾಯ್ ಮಾಡಿ, ರಿಲ್ಯಾಕ್ಸ್ ಆಗುತ್ತೇನೆ. ಬೆಳಗ್ಗೆ ಬಹಳ ಬೇಗ ಏಳುವ ನಾನು ದಿನವೂ ವಾಕಿಂಗ್ ಹೋಗುತ್ತೇನೆ. ವಾಕಿಂಗ್ ಬಳಿಕ ಯೋಗ ಮಾಡುತ್ತೇನೆ. 10 ದಿನಗಳಿಗೆ ಒಮ್ಮೆ ಸೈಕ್ಲಿಂಗ್ ಮಾಡುತ್ತೇನೆ. ಇದರಿಂದ ನನ್ನ ದೇಹ ಫಿಟ್ ಆಗಿರುತ್ತದೆ. ಇದರಿಂದಲೇ ನಾನು ಎಷ್ಟೇ ಬ್ಯುಸಿಯಾಗಿದ್ದರೂ ಸುಸ್ತಾಗುವುದಿಲ್ಲ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ಇದನ್ನೂ ಓದಿ: MK Stalin: ಜಿಮ್​ನಲ್ಲಿ ಬೆವರಿಳಿಸಿದ ಎಂಕೆ ಸ್ಟಾಲಿನ್; ತಮಿಳುನಾಡು ಸಿಎಂ ಫಿಟ್​ನೆಸ್ ವಿಡಿಯೋ ವೈರಲ್

ತಮಿಳುನಾಡಿನಲ್ಲಿರುವ ಶ್ರೀಲಂಕಾದ ನಿರಾಶ್ರಿತರಿಗೆ ಮನೆ ಕಟ್ಟಿಸಿಕೊಡಲು ಸ್ಟಾಲಿನ್​ ನಿರ್ಧಾರ; ಶಿಬಿರದ ಹೆಸರೂ ಬದಲಾವಣೆ

(MK Stalin Tamil Nadu Chief Minister MK Stalin Blushes At Woman Question On Fitness Secret on Morning Walk)

Published On - 3:37 pm, Tue, 21 September 21