ಪಂಚತಾರಾ ಹೋಟೆಲ್‌ನಲ್ಲಿ ರಾಜಸ್ಥಾನ ಶಾಸಕರು ಏನು ಮಾಡ್ತಿದಾರೆ ಗೊತ್ತಾ?

| Updated By: ಸಾಧು ಶ್ರೀನಾಥ್​

Updated on: Jul 21, 2020 | 12:52 PM

ಜೈಪುರ: ರಾಜಸ್ತಾನದ ರಾಜಕೀಯ ಚಟುವಟಿಕೆ ದಿನೇ ದಿನೇ ಗರಿಗೆದುರುತ್ತಿದೆ. ಸಚಿನ್ ಪೈಲಟ್ ಬಂಡಾಯದ ನಂತರ ತಮ್ಮ ಸರ್ಕಾರವನ್ನು ರಕ್ಷಿಸಲು ಹೋರಾಡುತ್ತಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಮ್ಮ ಬೆಂಬಲಿಗರನ್ನು ಫೈವ್ ಸ್ಟಾರ್ ಹೋಟೆಲೊಂದರಲ್ಲಿ ಕೂಡಿಟ್ಟುಕೊಂಡಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ಹೋಟೆಲ್ ಒಳಗೆನೇ ಇರುವ ಈ ಶಾಸಕರು ಸಮಯ ಕಳೆಯಲು ವಿವಿಧ ಕಸರತ್ತು ಮಾಡುತ್ತಿದ್ದಾರೆ. ಇವತ್ತು ಬೆಳಗ್ಗೆ ರಾಜಸ್ಥಾನದ ಈ ಶಾಸಕರು ಜೈಪುರದ ಫೈವ್ ಸ್ಟಾರ್ ಹೋಟೆಲ್ ಫೈರ್ ಮೌಂಟ್ ನಲ್ಲಿ ಯೋಗ ಮಾಡಿ ತಮ್ಮ ಫಿಟ್ನೆೆಸ್ ಕಾಯ್ದುಕೊಳ್ಳಲು […]

ಪಂಚತಾರಾ ಹೋಟೆಲ್‌ನಲ್ಲಿ ರಾಜಸ್ಥಾನ ಶಾಸಕರು ಏನು ಮಾಡ್ತಿದಾರೆ ಗೊತ್ತಾ?
Follow us on

ಜೈಪುರ: ರಾಜಸ್ತಾನದ ರಾಜಕೀಯ ಚಟುವಟಿಕೆ ದಿನೇ ದಿನೇ ಗರಿಗೆದುರುತ್ತಿದೆ. ಸಚಿನ್ ಪೈಲಟ್ ಬಂಡಾಯದ ನಂತರ ತಮ್ಮ ಸರ್ಕಾರವನ್ನು ರಕ್ಷಿಸಲು ಹೋರಾಡುತ್ತಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಮ್ಮ ಬೆಂಬಲಿಗರನ್ನು ಫೈವ್ ಸ್ಟಾರ್ ಹೋಟೆಲೊಂದರಲ್ಲಿ ಕೂಡಿಟ್ಟುಕೊಂಡಿದ್ದಾರೆ. ಹೀಗಾಗಿ ಕಳೆದ ಒಂದು ವಾರದಿಂದ ಹೋಟೆಲ್ ಒಳಗೆನೇ ಇರುವ ಈ ಶಾಸಕರು ಸಮಯ ಕಳೆಯಲು ವಿವಿಧ ಕಸರತ್ತು ಮಾಡುತ್ತಿದ್ದಾರೆ.

ಇವತ್ತು ಬೆಳಗ್ಗೆ ರಾಜಸ್ಥಾನದ ಈ ಶಾಸಕರು ಜೈಪುರದ ಫೈವ್ ಸ್ಟಾರ್ ಹೋಟೆಲ್ ಫೈರ್ ಮೌಂಟ್ ನಲ್ಲಿ ಯೋಗ ಮಾಡಿ ತಮ್ಮ ಫಿಟ್ನೆೆಸ್ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಇಷ್ಟೇ ಅಲ್ಲ ಯೋಗದ ನಂತರ ಕೆಲವರು ಬ್ಯಾಡ್ಮಿಂಟನ್ ಕೂಡಾ ಆಡಿದ್ದಾರೆ. ಈ ಮೂಲಕ ಸತತವಾಗಿ ಒಂದೇ ಸ್ಥಳದಲ್ಲಿದ್ದರೂ ತಮ್ಮ ಆರೋಗ್ಯವನ್ನ ಕಾಯ್ದುಕೊಳ್ಳುತ್ತಿದ್ದಾರೆ.

 

Published On - 12:52 pm, Tue, 21 July 20