Covid 19 Vaccine Moderna: ಕೊವಿಡ್ 19 ವಿರುದ್ಧ ಹೋರಾಡಲು ಭಾರತಕ್ಕೆ ಇನ್ನೊಂದು ಲಸಿಕೆ ಬಲ; ವಿದೇಶೀ ವ್ಯಾಕ್ಸಿನ್​ಗೆ ಕೇಂದ್ರದ ಒಪ್ಪಿಗೆ

ಭಾರತಕ್ಕೆ ಮಾಡೆರ್ನಾ ಲಸಿಕೆಯ ಸ್ವಲ್ಪ ಪ್ರಮಾಣದ ಡೋಸ್​ಗಳನ್ನು ಕಳಿಸಲು ಅಮೆರಿಕ ಸರ್ಕಾರ ಸಮ್ಮತಿ ನೀಡಿದ್ದಾಗಿ ಕಂಪನಿಯು ಜೂ.27ರಂದು ಡಿಸಿಜಿಐ (ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ)ಗೆ ತಿಳಿಸಿತ್ತು.

Covid 19 Vaccine Moderna: ಕೊವಿಡ್ 19 ವಿರುದ್ಧ ಹೋರಾಡಲು ಭಾರತಕ್ಕೆ ಇನ್ನೊಂದು ಲಸಿಕೆ ಬಲ; ವಿದೇಶೀ ವ್ಯಾಕ್ಸಿನ್​ಗೆ ಕೇಂದ್ರದ ಒಪ್ಪಿಗೆ
ಮಾಡೆರ್ನಾ ಲಸಿಕೆ
Follow us
TV9 Web
| Updated By: Lakshmi Hegde

Updated on:Jun 30, 2021 | 12:11 PM

ದೆಹಲಿ: ಭಾರತದಲ್ಲಿ ಸದ್ಯ ಬಳಕೆಯಾಗುತ್ತಿರುವ ಮೂರು ಲಸಿಕೆಗಳೊಂದಿಗೆ ನಾಲ್ಕನೇ ಲಸಿಕೆಗೆ ಅನುಮೋದನೆ ಸಿಕ್ಕಿದೆ..ಯುಎಸ್​​ನ ಲಸಿಕೆ ಮಾಡೆರ್ನಾವನ್ನು ಭಾರತದಲ್ಲಿ ನಿಯಂತ್ರಿತ ತುರ್ತು ಬಳಕೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹಾಗೇ ಮಾಡೆರ್ನಾ ಲಸಿಕೆಯನ್ನು ಆಮದು ಮಾಡಿಕೊಳ್ಳಲು ಮುಂಬೈನ ಬಹುದೊಡ್ಡ ಔಷಧೀಯ ಕಂಪನಿ ಸಿಪ್ಲಾಕ್ಕೆ ಅನುಮತಿ ನೀಡಿದೆ. ದೇಶದಲ್ಲಿ ಈಗ ಸೀರಂ ಇನ್​ಸ್ಟಿಟ್ಯೂಟ್​​ನ ಕೊವಿಶೀಲ್ಡ್​, ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಮತ್ತು ರಷ್ಯಾದ ಸ್ಪುಟ್ನಿಕ್​ ವಿ ಲಸಿಕೆ ನೀಡಲಾಗುತ್ತಿದೆ. ಸ್ಪುಟ್ನಿಕ್​ ವಿ ಕೆಲವೇ ನಗರಗಳಲ್ಲಿ ಸಿಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಾನಗರಗಳಲ್ಲಿ ಲಭ್ಯವಾಗಲಿದೆ. ಹಾಗೇ, ಇದೀಗ ಮತ್ತೊಂದು ಲಸಿಕೆ ತುರ್ತು ಬಳಕೆಗೆ ಸಿಗುತ್ತಿರುವುದು ದೇಶದ ಲಸಿಕಾ ಅಭಿಯಾನಕ್ಕೆ ಬಲ ಕೊಟ್ಟಿದೆ.

ಮಾಡೆರ್ನಾ ಲಸಿಕೆ ಯಾವಾಗ ಭಾರತಕ್ಕೆ ಬರಲಿದೆ? ಎಷ್ಟು ಡೋಸ್​ ಲಭ್ಯವಾಗಲಿದೆ? ಅದನ್ನು ಯಾವಾಗಿನಿಂದ ಬಳಕೆ ಮಾಡಲಾಗುತ್ತದೆ ಎಂಬಿತ್ಯಾದಿ ವಿವರಗಳು ಇನ್ನೂ ತಿಳಿದಿಲ್ಲ. ನಮಗೆ ನೀಡುವ ಲಸಿಕೆಗಳನ್ನು ಸ್ವೀಕರಿಸಲು ನಾವು ಮುಂದಾಗಿದ್ದೇವೆ. ಆದರೆ ವಾಣಿಜ್ಯಾತ್ಮಕ ಒಪ್ಪಂದಗಳ ಬಗ್ಗೆ ಇನ್ನೂ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಿಪ್ಲಾ ಔಷಧೀಯ ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ.

ಈಗ ಭಾರತದಲ್ಲಿ ನೀಡಲಾಗುತ್ತಿರುವ ಕೊವಿಶೀಲ್ಡ್​ ಲಸಿಕೆ ಕೊರೊನಾ ಸೋಂಕಿನ ವಿರುದ್ಧ ಶೇ.74ರಷ್ಟು ಪರಿಣಾಮಕಾರಿಯಾಗಿದ್ದು, ಕೊವ್ಯಾಕ್ಸಿನ್​ ಶೇ.778ರಷ್ಟು ಪರಿಣಾಮಕಾರಿ. ಸ್ಪುಟ್ನಿಕ್ ವಿ ಲಸಿಕೆ ಸೋಂಕಿನ ವಿರುದ್ಧ ಶೇ.91ರಷ್ಟು ಹೋರಾಡುತ್ತದೆ ಎಂದು ಕ್ಲಿನಿಕಲ್ ಟ್ರಯಲ್​ನಲ್ಲಿ ಗೊತ್ತಾಗಿದೆ. ಆದರೆ ಮಾಡೆರ್ನಾ ಈ ಎಲ್ಲ ಲಸಿಕೆಗಳಿಗಿಂತಲೂ ಹೆಚ್ಚು ಅಂದರೆ ಶೇ.94ರಷ್ಟು ಪರಿಣಾಮಕಾರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊವಿಡ್​ 19 ಟಾಸ್ಕ್​ ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್​, ಮಾಡರ್ನಾ ಕಂಪನಿ ತನ್ನ ಪಾಲುದಾರ ಕಂಪನಿ ಸಿಪ್ಲಾ ಮೂಲಕ ನೀಡಲಾದ ಅರ್ಜಿಯನ್ನು ಸ್ವೀಕರಿಸಲಾಗಿದೆ. ಪರವಾನಗಿಯನ್ನೂ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಲಸಿಕೆಯ ಆಮದು ಶುರುವಾಗಲಿದ್ದು, ಉಳಿದ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಅಲ್ಲದೆ, ಮಾಡೆರ್ನಾ ಲಸಿಕೆಗೆ ಸದ್ಯ ನಿಯಂತ್ರಿತ ತುರ್ತು ಬಳಕೆ ಅನುಮತಿಯನ್ನು ಮಾತ್ರ ನೀಡಲಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಭಾರತಕ್ಕೆ ಮಾಡೆರ್ನಾ ಲಸಿಕೆಯ ಸ್ವಲ್ಪ ಪ್ರಮಾಣದ ಡೋಸ್​ಗಳನ್ನು ಕಳಿಸಲು ಅಮೆರಿಕ ಸರ್ಕಾರ ಸಮ್ಮತಿ ನೀಡಿದ್ದಾಗಿ ಕಂಪನಿಯು ಜೂ.27ರಂದು ಡಿಸಿಜಿಐ (ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ)ಗೆ ತಿಳಿಸಿತ್ತು. ಭಾರತದಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಕೊವಿಡ್​ 19 ಇನ್ನೊಂದು ಅಲೆ ಪ್ರಾರಂಭಕ್ಕೂ ಮೊದಲು ಹೆಚ್ಚಿನ ಜನರಿಗೆ ಕೊರೊನಾ ಲಸಿಕೆ ಕೊಟ್ಟಿರಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಹಾಗೇ, ಜೂನ್​ 21ರಿಂದ ಉಚಿತವಾಗಿ ಲಸಿಕೆ ನೀಡುತ್ತಿದೆ. ಹೆಚ್ಚೆಚ್ಚು ಲಸಿಕೆ ಲಭ್ಯವಾದಷ್ಟು ಅನುಕೂಲವಾಗಲಿದೆ.

ಇದನ್ನೂ ಓದಿ: Happy Birthday CNR Rao: ವಿಜ್ಞಾನಿ ಸಿಎನ್​ಆರ್​ ರಾವ್​ಗೆ ಇಂದು 86ನೇ ಜನುಮ ದಿನ, ವಿಜ್ಞಾನದೆಡೆಗೆ ಅದೇ ಕೌತುಕ-ಮುಗ್ಧತೆ!

(Moderna Covid 19 Vaccine Approved For Emergency Use In India)

Published On - 11:36 am, Wed, 30 June 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ