Modi ka Parivar: ಮೋದಿ ಹಿಂದೂ ಅಲ್ಲ, ಪರಿವಾರವಿಲ್ಲ ಎನ್ನುವ ಲಾಲೂ ಹೇಳಿಕೆಗೆ ತಿರುಗೇಟು ಕೊಟ್ಟ ಬಿಜೆಪಿ ನಾಯಕರು

|

Updated on: Mar 04, 2024 | 3:05 PM

ಮೋದಿಗೆ ಪರಿವಾರವಿಲ್ಲ ಎಂದ ಲಾಲೂ ಪ್ರಸಾದ್ ಯಾದವ್​ಗೆ ಬಿಜೆಪಿ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಲಾಲೂ ಪ್ರಸಾದ್ ಯಾದವ್ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ನಾಯಕರು ತಮ್ಮ ಎಕ್ಸ್​ ಖಾತೆಗಳಲ್ಲಿ ಹೆಸರಿನ ಮುಂದೆ ‘ಮೋದಿ ಕಾ ಪರಿವಾರ್’ ಎಂದು ಬರೆದುಕೊಂಡಿದ್ದಾರೆ

Modi ka Parivar: ಮೋದಿ ಹಿಂದೂ ಅಲ್ಲ, ಪರಿವಾರವಿಲ್ಲ ಎನ್ನುವ ಲಾಲೂ ಹೇಳಿಕೆಗೆ ತಿರುಗೇಟು ಕೊಟ್ಟ ಬಿಜೆಪಿ ನಾಯಕರು
ಅಮಿತ್ ಶಾ-ಜೆಪಿ ನಡ್ಡಾ
Image Credit source: Hindustan Times
Follow us on

ಮೋದಿ ಹಿಂದೂ ಅಲ್ಲ ಅವರಿಗೆ ಪರಿವಾರವಿಲ್ಲ ಎನ್ನುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್(Lalu Prasad Yadav) ಹೇಳಿಕೆಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಲಾಲೂ ಪ್ರಸಾದ್ ಯಾದವ್ ಹೇಳಿಕೆಯನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ನಾಯಕರು ತಮ್ಮ ಎಕ್ಸ್​ ಖಾತೆಗಳಲ್ಲಿ ಹೆಸರಿನ ಮುಂದೆ ‘ಮೋದಿ ಕಾ ಪರಿವಾರ್’ (ಅಂದರೆ ಮೋದಿಯ ಪರಿವಾರದವರು ಎಂದರ್ಥ( ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಹೀಗೆ ಬರೆದುಕೊಂಡಿದ್ದಾರೆ. ಲಾಲೂ ಪ್ರಸಾದ್ ಯಾದವ್, ಮೋದಿ ಬಗ್ಗೆ ಮಾತನಾಡಿ, ಪ್ರಧಾನಿ ಮೋದಿ ನಿಜವಾದ ಹಿಂದೂ ಅಲ್ಲ ಅವರಿಗೆ ಪರಿವಾರವಿಲ್ಲ, ಹಿಂದೂಗಳು ತಾಯಿ ತೀರಿಕೊಂಡಾಗ ಕೇಶಮುಂಡನ ಮಾಡಿಕೊಳ್ಳುತ್ತಾರೆ, ಆದರೆ ನಿಮ್ಮ ತಾಯಿ ಸತ್ತಾಗ ಯಾಕೆ ಮಾಡಿಸಿಕೊಂಡಿಲ್ಲ, ಪರಿವಾರವಾದ, ಕುಟುಂಬ ರಾಜಕಾರಣವನ್ನು ಮೋದಿ ಟೀಕಿಸುತ್ತಾರೆ ಯಾಕೆಂದರೆ ಮೋದಿಗೆ ಮಕ್ಕಳಿಲ್ಲ, ನಿಮ್ಮ ಬಳಿ ಪರಿವಾರವಿಲ್ಲ ಯಾಕೆಂದರೆ ನೀವು ಹಿಂದುವೇ ಅಲ್ಲ ಎಂದು ಹೇಳಿದ್ದರು.

ನೀವು ನನ್ನವರು, ಮೋದಿ ನಿಮ್ಮವ ಎಂದ ಪ್ರಧಾನಿ
ನೀವು ನನ್ನವರು ಮೋದಿ ನಿಮ್ಮವ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ತೆಲಂಗಾಣದ ಆದಿಲಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ನನ್ನ ಜೀವನವು ತೆರೆದ ಪುಸ್ತಕವಾಗಿದೆ, ನಾನು ಬಾಲ್ಯದಲ್ಲಿ ನನ್ನ ಮನೆಯನ್ನು ತೊರೆದಿದ್ದೇನೆ, ನಾನು ದೇಶವಾಸಿಗಳಿಗಾಗಿ ಬದುಕುವ ಕನಸನ್ನು ಹೊಂದಿದ್ದೇನೆ. ನನಗೆ ಯಾವುದೇ ವೈಯಕ್ತಿಕ ಕನಸುಗಳಿಲ್ಲ, ಆದರೆ ನಿಮ್ಮ ಕನಸುಗಳು ನನ್ನ ನಿರ್ಣಯವಾಗಿರುತ್ತದೆ ಎಂದು ಪ್ರಧಾನಿ ಹೇಳಿದರು.

ಮತ್ತಷ್ಟು ಓದಿ: ನೀವು ನನ್ನವರು, ಮೋದಿ ನಿಮ್ಮವ ಎಂದ ಪ್ರಧಾನಿ

ದೇಶದ ಕೋಟ್ಯಂತರ ಜನರು ನನ್ನನ್ನು ತಮ್ಮ ಕುಟುಂಬದ ಸದಸ್ಯನೆಂದು ಪರಿಗಣಿಸುತ್ತಾರೆ ಎಂದು ಅವರು ಹೇಳಿದರು. ದೇಶದ 140 ಕೋಟಿ ಜನರಿಗೆ ನಾನು ಇದನ್ನು ಹೇಳುತ್ತೇನೆ, ಇದು ನನ್ನ ಕುಟುಂಬ, ಯಾರೂ ಇಲ್ಲದವರಿಗೂ ಮೋದಿ ಇದ್ದಾನೆ ಎಂದರು.

ಎರಡು ದಿನಗಳ ದಕ್ಷಿಣ ಭಾರತದ ಪ್ರಯಾಣದ ಮೊದಲ ದಿನವಾಗಿದೆ. 56,000 ಕೋಟಿ ರೂ.ಗೂ ಹೆಚ್ಚು ಮೊತ್ತದ 30 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನೂ ನೆರವೇರಿಸಿದರು. ಕಳೆದ 15 ದಿನಗಳಲ್ಲಿ, ಹಲವಾರು ಅಭಿವೃದ್ಧಿ ಯೋಜನೆಗಳು ಪ್ರಾರಂಭವಾಗಿವೆ, ನಾವು ಆತ್ಮನಿರ್ಭರ ಭಾರತದಿಂದ ವಿಕಸಿತ ಭಾರತಕ್ಕೆ ಹೋಗುತ್ತಿದ್ದೇವೆ. ಚುನಾವಣೆಗಳು ಮುಖ್ಯವಲ್ಲ, ಆದರೆ ಅಭಿವೃದ್ಧಿ ಮುಖ್ಯ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 3:02 pm, Mon, 4 March 24