Quit India Movement: ಕ್ವಿಟ್ ಇಂಡಿಯಾ ಚಳುವಳಿ ನೆನಪಿಗಾಗಿ ಮಹಾತ್ಮ ಗಾಂಧಿ ಫೋಟೋ ಹಂಚಿಕೊಂಡ ಮೋದಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 09, 2022 | 2:46 PM

ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್​ನಲ್ಲಿ ಚಳವಳಿಯ ಬಗ್ಗೆ ನೆನಪಿಸಿದ್ದಾರೆ. ಆಂದೋಲನದಲ್ಲಿ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿತು ಎಂದರು. ಕ್ವಿಟ್ ಇಂಡಿಯಾ ಚಳವಳಿಯ ಆರಂಭದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

Quit India Movement: ಕ್ವಿಟ್ ಇಂಡಿಯಾ ಚಳುವಳಿ ನೆನಪಿಗಾಗಿ ಮಹಾತ್ಮ ಗಾಂಧಿ ಫೋಟೋ ಹಂಚಿಕೊಂಡ ಮೋದಿ
Quit India movement
Follow us on

ಕ್ವಿಟ್ ಇಂಡಿಯಾ ಚಳವಳಿಯ ನಡೆದ ಈ ದಿನದಂದು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್​ನಲ್ಲಿ ಚಳವಳಿಯ ಬಗ್ಗೆ ನೆನಪಿಸಿದ್ದಾರೆ. ಆಂದೋಲನದಲ್ಲಿ ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿತು ಎಂದರು. ಕ್ವಿಟ್ ಇಂಡಿಯಾ ಚಳವಳಿಯ ಆರಂಭದಲ್ಲಿ ಮಹಾತ್ಮ ಗಾಂಧಿಯವರ ಚಿತ್ರವನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ. ಬಾಪು ಅವರ ನೇತೃತ್ವದಲ್ಲಿ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗವಹಿಸಿ ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿದ ಎಲ್ಲರನ್ನು ಸ್ಮರಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಆಗಸ್ಟ್ 8, 1942 ರಂದು ಬಾಂಬೆ ಅಧಿವೇಶನದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಲಾಯಿತು. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸುವುದು ಚಳವಳಿಯ ಉದ್ದೇಶವಾಗಿತ್ತು. ಬಾಂಬೆಯಲ್ಲಿ ಮಾಡಿದ ಕ್ವಿಟ್ ಇಂಡಿಯಾ ಭಾಷಣದಲ್ಲಿ ಗಾಂಧಿಯವರು “ಮಾಡು ಇಲ್ಲವೇ ಮಡಿ” ಎಂಬ ಘೋಷಣೆಯನ್ನು ನೀಡಿದರು. ಆಗಿನ ಬ್ರಿಟಿಷ್ ಸರ್ಕಾರವು ಕಾಂಗ್ರೆಸ್‌ನ ಉನ್ನತ ನಾಯಕರನ್ನು ಜೈಲಿಗೆ ಹಾಕುವ ಮೂಲಕ ಚಳವಳಿಯನ್ನು ಹತ್ತಿಕ್ಕಿಲ್ಲೂ ಪ್ರಯತ್ನಿಸಿದರೂ, ಆದರೆ ಅದಕ್ಕೆ ಬಲವಾದ ಪ್ರತಿರೋಧವಿತ್ತು.

ಆಗಸ್ಟ್ 9 ನಮ್ಮ ರಾಷ್ಟ್ರೀಯ ಕ್ರಾಂತಿಯ ಜ್ವಲಂತ ಸಂಕೇತವಾಗಿದೆ ಎಂಬ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ ಅವರ ಹೇಳಿಕೆಯನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಬಾಪು ಅವರಿಂದ ಪ್ರೇರಿತವಾದ ಕ್ವಿಟ್ ಇಂಡಿಯಾ ಚಳುವಳಿಯು ಜೆಪಿ ಮತ್ತು ಡಾ. ಲೋಹಿಯಾ ಅವರಂತಹ ಶ್ರೇಷ್ಠರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಜನರ ಗಮನಾರ್ಹ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

Published On - 2:46 pm, Tue, 9 August 22