ಮೋದಿ ಉಪನಾಮ ಮಾನನಷ್ಟ ಪ್ರಕರಣದಲ್ಲಿ (Modi-surname defamation case) ಶಿಕ್ಷೆಗೆ ತಡೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸೂರತ್‌ನ ಸೆಷನ್ಸ್ ನ್ಯಾಯಾಲಯ ಗುರುವಾರ ಆರಂಭಿಸುತ್ತಿದ್ದಂತೆ ರಾಹುಲ್ ಗಾಂಧಿ ಪರ ವಾದ ಮಾಡಿದ ಹಿರಿಯ ವಕೀಲ ಆರ್.ಎಸ್.ಚೀಮಾ, ರಾಹುಲ್ ಗಾಂಧಿ ಅವರು ವಯನಾಡ್‌ನಿಂದ (Wayanad) ದಾಖಲೆಯ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಶಿಕ್ಷೆಯ ಪರಿಣಾಮವಾಗಿ ಅವರ ಅನರ್ಹತೆಯು ಸರಿಪಡಿಸಲಾಗದ ನಷ್ಟ ಮತ್ತು ಸರಿಪಡಿಸಲಾಗದ ಗಾಯಕ್ಕೆ ಕಾರಣವಾಗುತ್ತದೆ ಎಂದು ಹೇಳಿರುವುದಾಗಿ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.ನೊಂದ ವ್ಯಕ್ತಿ ಮಾತ್ರ ದೂರು ದಾಖಲಿಸಬಹುದು ಎಂಬುದನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಚೀಮಾ, ನನ್ನ ಭಾಷಣವನ್ನು ಮಾನಹಾನಿಯನ್ನುಂಟು ಮಾಡುವಂಥದ್ದಲ್ಲ. ಅದು ಮಾನಹಾನಿಯುಂಟು ಮಾಡುವಂಥದ್ದು ಎಂದು ಹೇಳಲು ಅದನ್ನು ಭೂತಗನ್ನಡಿಯಲ್ಲಿ ನೋಡಲಾಗಿದೆ. ನಿಜವಾಗಿಯೂ ನಮ್ಮ ಪ್ರಧಾನಮಂತ್ರಿಯವರ ಬಗ್ಗೆ ತೀವ್ರವಾಗಿ ಟೀಕಿಸುವ ಧೈರ್ಯಕ್ಕಾಗಿ ನನ್ನ ಮೇಲೆ ದಾವೆ ಹೂಡಲಾಯಿತು. ವಿಚಾರಣೆಯು ನನಗೆ ಕಠಿಣ ಮತ್ತು ಅನ್ಯಾಯವಾಗಿದೆ ಎಂದಿದ್ದಾರೆ.
ದೂರುದಾರರ (ಪೂರ್ಣೇಶ್ ಮೋದಿ ಅವರ) ಭೌಗೋಳಿಕ ವ್ಯಾಪ್ತಿಯ ಸಮಸ್ಯೆಯನ್ನು ಪ್ರಸ್ತಾಪಿಸಿದ ಚೀಮಾ, ಕೋಲಾರದಲ್ಲಿ ಭಾಷಣ ಮಾಡಲಾಗಿದ್ದು, ದೂರುದಾರರು ತಮ್ಮ ವಾಟ್ಸಾಪ್‌ನಲ್ಲಿ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದರು.
ನೀವು ಪಂಜಾಬಿಗಳು ಜಗಳಗಂಟರು ಮತ್ತು ನಿಂದನೀಯರು ಎಂದು ಯಾರಾದರೂ ಹೇಳಿದರೆ, ನಾನು ಹೋಗಿ ಮಾನನಷ್ಟ ಮೊಕದ್ದಮೆ ಹೂಡಬಹುದೇ? ಅಂತಹ ಪದಗಳನ್ನು ಗುಜರಾತಿಗಳು, ಇತರ ಭಾಷಾ ಗುಂಪುಗಳು, ಧಾರ್ಮಿಕ ಘಟಕಗಳು ಇತ್ಯಾದಿಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ ಎಂದು ರಾಹುಲ್ ಗಾಂಧಿ ಪರ ವಕೀಲರು ಹೇಳಿದ್ದಾರೆ.
ಬೆಳಿಗ್ಗೆ 11:51 ಕ್ಕೆ ನನ್ನ ಕಕ್ಷಿದಾರನು ತಪ್ಪಿತಸ್ಥನೆಂದು ಘೋಷಿಸಲ್ಪಟ್ಟಿದ್ದಾನೆ. ಇದಾಗಿ ಅರ್ಧ ಗಂಟೆಯೊಳಗೆ ಅವನಿಗೆ ಕಠಿಣ ಮತ್ತು ಗರಿಷ್ಠ ಶಿಕ್ಷೆಯನ್ನು ನೀಡಲಾಗಿದೆ. ವಿಚಾರಣಾ ನ್ಯಾಯಾಲಯವು ನಿಮಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು, ಭಾರೀ ಉದ್ದಟತ ಆಯ್ತು ನಿಮ್ಮದು. ನಿಮಗೆ ಏನು ಎಂದು ಅರ್ಥವಾಗಲಿಲ್ಲವೇ ಎಂದು ಹೇಳಿದ್ದಕ್ಕಾಗಿ ನಾನು ಆಘಾತವನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಕ್ಷಮಿಸಿ ನಾನು ಕಟುವಾದ ಪದಗಳನ್ನು ಬಳಸುತ್ತಿದ್ದೇನೆ. ಆದರೆ ಹೌದು ನ್ಯಾಯಾಧೀಶರು ತಪ್ಪುದಾರಿಗೆಳೆಯಲ್ಪಟ್ಟರು ಮತ್ತು ಕಠೋರವಾಗಿದ್ದರು ಎಂದಿದ್ದಾರೆ ಚೀಮಾ.
ಇದನ್ನೂ ಓದಿ: PM Modi Kerala Visit: ಪ್ರಧಾನಿ ಮೋದಿ ಏಪ್ರಿಲ್ 24ರಂದು ಕೇರಳಕ್ಕೆ; 2 ವಂದೇ ಭಾರತ್ ರೈಲು ಘೋಷಣೆ
ನವೆಂಬರ್ 2019 ರಲ್ಲಿ ‘ಚೌಕಿದಾರ್ ಚೋರ್’ ಕಾಮೆಂಟ್‌ಗಳಿಗಾಗಿ ತಮ್ಮ ಕಕ್ಷಿದಾರರು ಸುಪ್ರೀಂಕೋರ್ಟ್‌ಗೆ ಕ್ಷಮೆಯಾಚಿಸಿದರು. ಆದರೆ ಈ ‘ಮೋದಿ ಉಪನಾಮ’ ಕಾಮೆಂಟ್ ಏಪ್ರಿಲ್ 2019 ರಲ್ಲಿ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಅವರ ವಕೀಲರು ಹೇಳಿದರು. ಆದ್ದರಿಂದ ನ್ಯಾಯಾಧೀಶರು ದೂರುದಾರರು ಹೇಳಿದ ಪ್ರಕ್ರಿಯೆಗಳ ಮೇಲೆ ಹೇಗೆ ಅವಲಂಬಿತರಾಗುತ್ತಾರೆ. ನನಗೆ ಉನ್ನತ ನ್ಯಾಯಾಲಯವು ಎಚ್ಚರಿಸಿದೆಯೇ ಎಂದು ಚೀಮಾ ಕೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ