AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿ.18ಕ್ಕೆ ಮೋದಿ ಮೇಘಾಲಯ ಮತ್ತು ತ್ರಿಪುರಾಕ್ಕೆ ಭೇಟಿ, 6,800 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ

ಡಿಸೆಂಬರ್ 18 ರಂದು ಪ್ರಧಾನಿ ಮೋದಿ ಮೇಘಾಲಯ ಮತ್ತು ತ್ರಿಪುರಾಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು 6,800 ಕೋಟಿ ರೂ.ಗಳ ಯೋಜನೆಗಳನ್ನು ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಡಿ.18ಕ್ಕೆ ಮೋದಿ ಮೇಘಾಲಯ ಮತ್ತು ತ್ರಿಪುರಾಕ್ಕೆ ಭೇಟಿ, 6,800 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ
ನರೇಂದ್ರ ಮೋದಿ
ಅಕ್ಷಯ್​ ಪಲ್ಲಮಜಲು​​
| Edited By: |

Updated on:Dec 17, 2022 | 4:50 PM

Share

ಡಿಸೆಂಬರ್ 18 ರಂದು ಪ್ರಧಾನಿ ಮೋದಿ(PM Narendra Modi) ಮೇಘಾಲಯ (Meghalaya) ಮತ್ತು ತ್ರಿಪುರಾಕ್ಕೆ (Tripura) ಭೇಟಿ ನೀಡಲಿದ್ದಾರೆ. ಡಿಸೆಂಬರ್ 18 ರಂದು ಪ್ರಧಾನಿ ಮೋದಿ ಮೇಘಾಲಯ ಮತ್ತು ತ್ರಿಪುರಾಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು 6,800 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಹಾಗೂ ಕೆಲವು ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಯೋಜನೆಗಳಲ್ಲಿ ವಸತಿ, ರಸ್ತೆ, ಕೃಷಿ, ಟೆಲಿಕಾಂ, ಐಟಿ, ಪ್ರವಾಸೋದ್ಯಮ ಮತ್ತು ಅತಿಥ್ಯ ಹೀಗೆ ವಿವಿಧ ಕ್ಷೇತ್ರಗಳಿಗೆ  ಸೇರಿದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಸುವರ್ಣ ಮಹೋತ್ಸವ ಆಚರಿಸುತ್ತಿರುವ ದೇಶದ ಈಶಾನ್ಯ ಕೌನ್ಸಿಲ್​ನ ಸಭೆಯಲ್ಲಿ ಭಾಗವಹಿಸಲಿದ್ದಾರೆ  ಮತ್ತು ಅಗರ್ತಲಾದಲ್ಲಿ PMAY ನಗರ ಮತ್ತು ಗ್ರಾಮೀಣ ಯೋಜನೆಗಳ ಅಡಿಯಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಡಿ,17ರಂದು ಭಾಗವಹಿಸಿದರು.

ಮೋದಿ ಅವರು ಡಿಸೆಂಬರ್ 18 ರಂದು ಮೇಘಾಲಯ ಮತ್ತು ತ್ರಿಪುರಾಕ್ಕೆ ಭೇಟಿ ನೀಡಲಿದ್ದಾರೆ. ಶಿಲ್ಲಾಂಗ್‌ನಲ್ಲಿ ಪ್ರಧಾನಿ ಈಶಾನ್ಯ ಮಂಡಳಿಯ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಲಿದ್ದು. ಬೆಳಗ್ಗೆ 10:30ರ ಸುಮಾರಿಗೆ, ಪ್ರಧಾನಮಂತ್ರಿ ಅವರು ಶಿಲ್ಲಾಂಗ್‌ನ ಸ್ಟೇಟ್ ಕನ್ವೆನ್ಷನ್ ಸೆಂಟರ್‌ನಲ್ಲಿ ಈಶಾನ್ಯ ಕೌನ್ಸಿಲ್‌ನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ, ಸುಮಾರು 11:30ರ ಹೊತ್ತಿಗೆ ಅವರು ಶಿಲ್ಲಾಂಗ್‌ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ನಂತರ ಅವರು ಅಗರ್ತಲಾಗೆ ಪ್ರಯಾಣಿಸಲಿದ್ದು, ಮಧ್ಯಾಹ್ನ 2:45 ಕ್ಕೆ ಸಾರ್ವಜನಿಕ ಸಮಾರಂಭದಲ್ಲಿ ವಿವಿಧ ಪ್ರಮುಖ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.

ಮೋದಿ ಮೇಘಾಲಯಕ್ಕೆ ಭೇಟಿ

1972 ನ.7ರಂದು ಕೌನ್ಸಿಲ್​ನ್ನು ಔಪಚಾರಿಕವಾಗಿ ಉದ್ಘಾಟಿಸಲಾಗಿತ್ತು. ಈಗಾಗಿ ಈಶಾನ್ಯ ಕೌನ್ಸಿಲ್ (ಎನ್‌ಇಸಿ) ಸಭೆಯಲ್ಲಿ ಪ್ರಧಾನಿ ಭಾಗವಹಿಸಿ ಭಾಷಣ ಮಾಡಲಿದ್ದಾರೆ. NEC ಈಶಾನ್ಯ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಮತ್ತು ರಾಜ್ಯಗಳಾದ್ಯಂತ ವಿವಿಧ ಮೂಲಸೌಕರ್ಯ ಯೋಜನೆಗಳು ಮತ್ತು ಇತರ ಅಭಿವೃದ್ಧಿ ಉಪಕ್ರಮಗಳಿಗೆ ಬೆಂಬಲವನ್ನು ನೀಡಿದ್ದು. ಇದು ಮೌಲ್ಯಯುತವಾದ ಬಂಡವಾಳ ಮತ್ತು ಸಾಮಾಜಿಕ ಮೂಲಸೌಕರ್ಯವನ್ನು ರಚಿಸಲು ಸಹಾಯ ಮಾಡಿದೆ, ವಿಶೇಷವಾಗಿ ಶಿಕ್ಷಣ, ಆರೋಗ್ಯ, ಕ್ರೀಡೆ, ಜಲಸಂಪನ್ಮೂಲಗಳು, ಕೃಷಿ, ಪ್ರವಾಸೋದ್ಯಮ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನಿರ್ಣಾಯಕ ಅಭಿವೃದ್ಧಿಗಳಿಗೆ ಚಾಲನೆ ನೀಡಲಾಗಿದೆ.

ಇದನ್ನು ಓದಿ:ಸೂರತ್​​ನಲ್ಲಿ ಪ್ರಧಾನಿ ರೋಡ್​​ ಶೋ; ರಸ್ತೆಯುದ್ದಕ್ಕೂ ಮೋದಿಗೆ ಜೈಕಾರ ಹಾಕಿ ಸ್ವಾಗತ

ಪ್ರಧಾನಿ ಮೋದಿ 2450 ಕೋಟಿ ರೂ, ವೆಚ್ಚದ ಯೋಜನೆಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಪ್ರದೇಶದಲ್ಲಿ ಟೆಲಿಕಾಂ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ. ಪ್ರಧಾನಮಂತ್ರಿ ಅವರು ದೇಶಕ್ಕೆ 4G ಮೊಬೈಲ್ ಟವರ್‌ಗಳನ್ನು ಅರ್ಪಿಸಿದ್ದಾರೆ, ಆಗಾಗಿ ಈ ಭಾಗದಲ್ಲೂ 4G ಮೊಬೈಲ್ ಟವರ್​ಗಳನ್ನು ನೀಡಿದ್ದಾರೆ. ಇದೀಗ ಇದರಲ್ಲಿ 320ಕ್ಕೂ ಹೆಚ್ಚು ಯೋಜನೆಗಳು ಪೂರ್ಣಗೊಂಡಿದೆ ಮತ್ತು ಸುಮಾರು 890 ನಿರ್ಮಾಣ ಹಂತದಲ್ಲಿದೆ. ಪ್ರಧಾನಿ ಮೋದಿ ಉಮ್ಸಾವ್ಲಿಯಲ್ಲಿ IIM ಶಿಲ್ಲಾಂಗ್‌ನ ಹೊಸ ಕ್ಯಾಂಪಸ್​​ನ್ನು ಉದ್ಘಾಟಿಸಲಿದ್ದಾರೆ. ಅವರು ಶಿಲ್ಲಾಂಗ್ – ಡೀಂಗ್‌ಪಾಸೋಹ್ ರಸ್ತೆಯನ್ನು ಉದ್ಘಾಟಿಸಲಿದ್ದು, ಇದು ಹೊಸ ಶಿಲ್ಲಾಂಗ್ ಉಪಗ್ರಹ ಟೌನ್‌ಶಿಪ್‌ಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ. ರಾಜ್ಯಕ್ಕೆ ಸಂಪರ್ಕಿಸುವ ಮೇಘಾಲಯ, ಮಣಿಪುರ ಮತ್ತು ಅರುಣಾಚಲ ಪ್ರದೇಶದ ನಾಲ್ಕು ರಸ್ತೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಅಣಬೆ ಉತ್ಪಾದನೆಯನ್ನು ಹೆಚ್ಚಿಸಲು ಮೇಘಾಲಯದ ಅಣಬೆ ಅಭಿವೃದ್ಧಿ ಕೇಂದ್ರದಲ್ಲಿ ಸ್ಪಾನ್ ಪ್ರಯೋಗಾಲಯವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದರಲ್ಲಿ ರೈತರು , ಉದ್ಯಮಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಲಿದ್ದಾರೆ. ಸಾಮರ್ಥ್ಯ ವೃದ್ಧಿ ಮತ್ತು ತಂತ್ರಜ್ಞಾನದ ಉನ್ನತೀಕರಣದ ಮೂಲಕ ಜೇನುಸಾಕಣೆ ಮಾಡುವ ರೈತರ ಜೀವನೋಪಾಯವನ್ನು ಸುಧಾರಿಸಲು ಮೇಘಾಲಯದಲ್ಲಿ ಸಮಗ್ರ ಜೇನುಸಾಕಣೆ ಅಭಿವೃದ್ಧಿ ಕೇಂದ್ರವನ್ನು ಅವರು ಉದ್ಘಾಟಿಸಲಿದ್ದಾರೆ. ಇದಲ್ಲದೆ, ಅವರು ಮಿಜೋರಾಂ, ಮಣಿಪುರ, ತ್ರಿಪುರ ಮತ್ತು ಅಸ್ಸಾಂನಲ್ಲಿ 21 ಹಿಂದಿ ಗ್ರಂಥಾಲಯಗಳನ್ನು ಉದ್ಘಾಟಿಸಲಿದ್ದಾರೆ.

ಪ್ರಧಾನಮಂತ್ರಿಯವರು ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳಾದ್ಯಂತ ಆರು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜತೆಗೆ ತುರಾ ಮತ್ತು ಶಿಲ್ಲಾಂಗ್ ಟೆಕ್ನಾಲಜಿ ಪಾರ್ಕ್ ಹಂತ-II ನಲ್ಲಿ ಇಂಟಿಗ್ರೇಟೆಡ್ ಹಾಸ್ಪಿಟಾಲಿಟಿ ಮತ್ತು ಕನ್ವೆನ್ಷನ್ ಸೆಂಟರ್‌ನ ಶಂಕುಸ್ಥಾಪನೆ ಮಾಡಲಿದ್ದಾರೆ.

ಟೆಕ್ನಾಲಜಿ ಪಾರ್ಕ್ ಹಂತ-II ಸುಮಾರು 1.5 ಲಕ್ಷ ಚದರ ಅಡಿಗಳಷ್ಟು ಬಿಲ್ಟ್-ಅಪ್ ಪ್ರದೇಶವನ್ನು ಹೊಂದಿರುತ್ತದೆ. ಇದು ವೃತ್ತಿಪರರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ ಮತ್ತು 3000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇಂಟಿಗ್ರೇಟೆಡ್ ಹಾಸ್ಪಿಟಾಲಿಟಿ ಮತ್ತು ಕನ್ವೆನ್ಷನ್ ಸೆಂಟರ್ ಕನ್ವೆನ್ಶನ್ ಹಬ್, ಅತಿಥಿ ಕೊಠಡಿಗಳು, ಫುಡ್ ಕೋರ್ಟ್ ಇತ್ಯಾದಿಗಳನ್ನು ಹೊಂದಿರುತ್ತದೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಈ ಪ್ರದೇಶದಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ಅಗತ್ಯವಾದ ಮೂಲಸೌಕರ್ಯವನ್ನು ಒದಗಿಸುತ್ತದೆ.

ತ್ರಿಪುರಾದಲ್ಲಿ ಹಲವು ಯೋಜನೆಗೆ ಮೋದಿ ಚಾಲನೆ

ಪ್ರಧಾನ ಮಂತ್ರಿ ಮೋದಿ ಅವರು 4350 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಪ್ರಮುಖ ಯೋಜನೆಗಳಿಗೆ ಉದ್ಘಾಟನೆ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರತಿಯೊಬ್ಬರಿಗೂ ಸ್ವಂತ ಮನೆ ನೀಡುವ ಬಗ್ಗೆ ಪ್ರಧಾನಿ ಮಂತ್ರಿ ಖಾತ್ರಿಪಡಿಸಿಕೊಳ್ಳುವತ್ತ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ನಗರ – ಗ್ರಾಮೀಣ ಫಲಾನುಭವಿಗಳಿಗಾಗಿ ಪ್ರಧಾನ ಮಂತ್ರಿ ಗೃಹ ಪ್ರವೇಶ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. 3400 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾದ ಈ ಮನೆಗಳು 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನೀಡಲಿದೆ.

ರಸ್ತೆ ಸಂಪರ್ಕವನ್ನು ಸುಧಾರಿಸುವತ್ತ ಗಮನಹರಿಸುವುದರೊಂದಿಗೆ, ಅಗರ್ತಲಾ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಅಗರ್ತಲಾ ಬೈಪಾಸ್ (ಖಯೇರ್‌ಪುರ್ – ಅಮ್ತಾಲಿ) NH-08 ನ ಅಗಲೀಕರಣದ ಯೋಜನೆಯನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಅವರು PMGSY III (ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ) ಅಡಿಯಲ್ಲಿ 230 ಕಿಮೀ ಉದ್ದದ 32 ರಸ್ತೆಗಳಿಗೆ ಮತ್ತು 540 ಕಿಮೀ ದೂರದ 112 ರಸ್ತೆಗಳ ಸುಧಾರಣೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪ್ರಧಾನಮಂತ್ರಿ ಅವರು ಆನಂದನಗರ ಮತ್ತು ಅಗರ್ತಲಾ ಸರ್ಕಾರಿ ದಂತ ಕಾಲೇಜಿನಲ್ಲಿ ಸ್ಟೇಟ್ ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಅನ್ನು ಉದ್ಘಾಟಿಸಲಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Sat, 17 December 22

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ