Corona Vaccine Adverse Effect ಲಸಿಕೆಯಿಂದ ಅಡ್ಡಪರಿಣಾಮ ಆಗಬಹುದು, ಎಚ್ಚರವಿರಲಿ: ಪ್ರಧಾನಿ ನರೇಂದ್ರ ಮೋದಿ ಕಿವಿಮಾತು

| Updated By: ಸಾಧು ಶ್ರೀನಾಥ್​

Updated on: Nov 25, 2020 | 2:36 PM

ಕೋವಿಡ್ ​19 ತಡೆಯುವ ಲಸಿಕೆಯು ಕೆಲವರ ಮೇಲೆ ಅಡ್ಡಪರಿಣಾಮ ಬೀರಬಹುದು, ಈ ವಿಚಾರದಲ್ಲಿ ಎಚ್ಚರಿಕೆ ಅಗತ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

Corona Vaccine Adverse Effect ಲಸಿಕೆಯಿಂದ ಅಡ್ಡಪರಿಣಾಮ ಆಗಬಹುದು, ಎಚ್ಚರವಿರಲಿ: ಪ್ರಧಾನಿ ನರೇಂದ್ರ ಮೋದಿ ಕಿವಿಮಾತು
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ಕೋವಿಡ್ ​19 ತಡೆಯುವ ಲಸಿಕೆಯು ಕೆಲವರ ಮೇಲೆ ಅಡ್ಡಪರಿಣಾಮ ಬೀರಬಹುದು, ಈ ವಿಚಾರದಲ್ಲಿ ಎಚ್ಚರಿಕೆ ಅಗತ್ಯ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ವೈಜ್ಞಾನಿಕವಾಗಿ ಎಲ್ಲಾ ರೀತಿಯ ಪರೀಕ್ಷೆಗಳನ್ನು ನಡೆಸದ ಹೊರತು ಭಾರತದಲ್ಲಿ ಲಸಿಕೆಯನ್ನು ಮಾರುಕಟ್ಟೆಗೆ ಬಿಡುವುದಿಲ್ಲ. ಒಂದು ವೇಳೆ ಅದು ಉಂಟು ಮಾಡುವ ಅಡ್ಡಪರಿಣಾಮ ಗಂಭೀರವಾದರೆ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದಂತೆ ಎಂದಿದ್ದಾರೆ.

ಮಂಗಳವಾರದಂದು ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತದ ಮುಖ್ಯಸ್ಥರಿಗೆ ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಲಸಿಕೆಯ ಕುರಿತು ನಿಗಾ ವಹಿಸುವಂತೆ ಸೂಚಿಸಿದ್ದಾರೆ. ಕೋವಿಡ್​ 19 ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾದರೆ ಅದನ್ನು ತಕ್ಷಣವೇ ನಿರ್ವಹಿಸಲು ಸಿದ್ಧರಾಗಿರಿ ಎಂದಿದ್ದಾರೆ.

ಕೇಂದ್ರ ಸರ್ಕಾರವು AEFI (Adverse Events Following Immunization) ಅನುಸಾರ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದು, ಮಧುಮೇಹ, ಹೃದಯ ಸಂಬಂಧಿ ಖಾಯಿಲೆಗಳು ಇರುವವರಿಗೆ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗದಂತೆ ನೋಡಲು ಸೂಚಿಸಿದೆ. ಜೊತೆಗೆ ಶ್ವಾಸಕೋಶ ತಜ್ಞರು, ಹೃದ್ರೋಗ ತಜ್ಞರು, ನರಶಾಸ್ತ್ರಜ್ಞರನ್ನು ರಾಜ್ಯ AEFI ಕೇಂದ್ರದಲ್ಲಿ ಇರುವಂತೆ ಹೇಳಿದೆ. ಇದಕ್ಕಾಗಿ ಪ್ರತಿ ರಾಜ್ಯದಲ್ಲಿ ಒಂದು ವೈದ್ಯಕೀಯ ಕಾಲೇಜನ್ನು ಗುರುತಿಸಿ ಕಾರ್ಯನಿರ್ವಹಿಸುವಂತೆ ಹೇಳಲಾಗಿದೆ. ಜಿಲ್ಲಾ ಕೇಂದ್ರಗಳಿಗೂ ಈ ಸೂಚನೆ ಬರುವ ನಿರೀಕ್ಷೆ ಇದ್ದು, ಕೊವಿಡ್ ಲಸಿಕೆ ಅಡ್ಡಪರಿಣಾಮಗಳ ವಿರುದ್ಧ ಕೆಲಸ ಮಾಡುವ ಸಿಬ್ಬಂದಿಗಳಿಗೆ DIO ತರಬೇತಿ ನೀಡಬೇಕು ಎಂದೂ ತಿಳಿಸಲಾಗಿದೆ.

ಔಷಧದ ಅಡ್ಡಪರಿಣಾಮಗಳ ಅಧ್ಯಯನ ನಡೆಸಲು, ದೇಶದಲ್ಲಿ ಒಟ್ಟು 300 ವೈದ್ಯಕೀಯ ಕಾಲೇಜುಗಳಿವೆ ಎಂದಿರುವ ಆರೋಗ್ಯ ಸಚಿವಾಲಯ ಸಮಸ್ಯೆಗಳು ಕಂಡುಬಂದರೆ ಕೂಡಲೇ ವರದಿ ನೀಡುವಂತೆ ಸೂಚನೆ ನೀಡಿದೆ. ಜಿಲ್ಲಾ ಔಷಧಾಧಿಕಾರಿಯು, ಜಿಲ್ಲಾ AEFIಯ ಸದಸ್ಯನಾಗಿರಬೇಕು ಮತ್ತು AEFI ಸಂಶೋಧನೆಗಳಲ್ಲಿ ಭಾಗವಹಿಸಬಹುದು ಎಂದಿದೆ. ಕೊರೊನಾ ಲಸಿಕೆಯ ಬಗ್ಗೆ ಬರಬಹುದಾದ ಸುಳ್ಳು ಅಥವಾ ಗಾಳಿ ಸುದ್ದಿಯನ್ನು ತಡೆಗಟ್ಟಲು ಆದೇಶ ನೀಡಿರುವ ಸಚಿವಾಲಯ ಸೂಕ್ತ ಸಂವಹನ ಏರ್ಪಡುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲೆಗಳಿಗೆ ಹೇಳಿದೆ.

ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಆರೋಗ್ಯಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಲು ಸಿದ್ಧತೆ ನಡೆಯುತ್ತಿದೆ. ಮೊದಲ ಹಂತದಲ್ಲಿ ನಿರ್ದಿಷ್ಟ ಗುಂಪಿನವರಿಗೆ ಮಾತ್ರ ಲಸಿಕೆ ನೀಡಲಾಗುವುದು ಮತ್ತು ಈ ಹಂತದಲ್ಲಿಯೇ ಲಸಿಕೆಯ ಸಾಧಕ, ಬಾಧಕಗಳ ಕುರಿತು ಮಾಹಿತಿ ನೀಡಬೇಕು ಎಂದಿದ್ದಾರೆ.

Published On - 2:06 pm, Wed, 25 November 20