ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ರಾಮನ ಹೆಸರಿಡಲು ಉತ್ತರ ಪ್ರದೇಶ ಸಚಿವ ಸಂಪುಟ ನಿರ್ಧಾರ
ಮಂತ್ರಿಗಳ ಪರಿಷತ್ತು ಅಂಗೀಕರಿಸಿದ ಈ ನಿರ್ಣಯವನ್ನು ರಾಜ್ಯದ ವಿಧಾನಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲೂ ಸಂಪುಟ ಸಭೆ ನಿರ್ಧರಿಸಿದೆ.
ಲಖನೌ: ಅಯೋಧ್ಯೆ ವಿಮಾನ ನಿಲ್ದಾಣದ ಹೆಸರನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡುವ ಪ್ರಸ್ತಾಪವನ್ನು ಉತ್ತರಪ್ರದೇಶ ಸಚಿವ ಸಂಪುಟ ಸಭೆ ಅಂಗೀಕರಿಸಿದೆ.
ಮಂತ್ರಿಗಳ ಪರಿಷತ್ತು ಅಂಗೀಕರಿಸಿದ ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯಲೂ ಸಂಪುಟ ಸಭೆ ನಿರ್ಧರಿಸಿದೆ. ಈ ಪ್ರಸ್ತಾವಕ್ಕೆ ವಿಧಾನಸಭೆಯ ಅನುಮೋದನೆ ದೊರೆತ ನಂತರ ಅದನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕಳಿಸಲು ಸಂಪುಟ ಸಭೆ ಒಪ್ಪಿಗೆ ನೀಡಿತು.
ಅಯೋಧ್ಯೆಯಲ್ಲಿ ಮಂದಿರದ ಶಿಲಾನ್ಯಾಸ ನಡೆದ ನಂತರದ ಮೊದಲ ದೀಪಾವಳಿಯನ್ನು ಈ ತಿಂಗಳ ಆರಂಭದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಅಕ್ಟೋಬರ್ 5ರಂದು ಪ್ರಧಾನಿ ನರೇಂದ್ರ ಮೋದಿ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.
ಇನ್ನಷ್ಟು…
ರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಮೊದಲ ದೀಪಾವಳಿ.. ಗಿನ್ನಿಸ್ ದಾಖಲೆಯತ್ತ! Photos
ಅಯೋಧ್ಯೆ ಜಗಮಗಿಸುತ್ತಿದೆ.. ನೋಡಲೆರಡು ಕಣ್ಣುಗಳು ಸಾಲದಪ್ಪಾ ಅನ್ತಿದ್ದಾರೆ ರಾಮಭಕ್ತರು!
Published On - 12:26 pm, Wed, 25 November 20