AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೈಲರ್ ಮಗ, ಪೈಲಟ್ ಟ್ರೈನಿಂಗ್ ಮತ್ತು 9/11 ದಾಳಿ ನಂಟು: ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಮುಂಬೈ ಯುವಕನ ಕಥೆ

ಮುಂಬೈನ ಟೈಲರ್ ಮಗ ಮೊಹಮ್ಮದ್ ಅಫ್ರೋಜ್, 9/11 ದಾಳಿ ಬಳಿಕ ಜಗತ್ತನ್ನು ಬೆಚ್ಚಿಬೀಳಿಸಿದ್ದ. ಪೈಲಟ್ ತರಬೇತಿ ಪಡೆದಿದ್ದ ಅಫ್ರೋಜ್, ಅಲ್-ಖೈದಾ ಲಂಡನ್, ಮೆಲ್ಬೋರ್ನ್ ಮೇಲೂ ದಾಳಿಗೆ ಸಂಚು ರೂಪಿಸಿತ್ತು ಎಂದು ಹೇಳಿದ್ದ. ಬಂಧನ, POTA ಕೇಸ್, ಅಂತಾರಾಷ್ಟ್ರೀಯ ತನಿಖೆ ಎದುರಿಸಿದರೂ, ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಯಾದ. ಈ ಪ್ರಕರಣ 9/11 ಇತಿಹಾಸದ ನಿಗೂಢ ಅಧ್ಯಾಯವಾಗಿ ಉಳಿದಿದೆ.

ಟೈಲರ್ ಮಗ, ಪೈಲಟ್ ಟ್ರೈನಿಂಗ್ ಮತ್ತು 9/11 ದಾಳಿ ನಂಟು: ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಮುಂಬೈ ಯುವಕನ ಕಥೆ
ದಾಳಿImage Credit source: Reuters
ನಯನಾ ರಾಜೀವ್
|

Updated on:Sep 11, 2026 | 12:50 PM

Share

ಮುಂಬೈ, ಸೆಪ್ಟೆಂಬರ್ 11: ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಸೆಪ್ಟೆಂಬರ್ 11, 2001 ರಂದು ನಡೆದ ಭೀಕರ ಉಗ್ರ ದಾಳಿ ನಡೆದು 25 ವರ್ಷಗಳಾಗಿವೆ. ಈ ದಾಳಿ ನಡೆದ ಕೇವಲ ಒಂದು ತಿಂಗಳಲ್ಲೇ ಭಾರತದಲ್ಲಿ ಕೇಳಿಬಂದ ಒಂದು ಹೇಳಿಕೆ ಇಡೀ ವಿಶ್ವದ ಭದ್ರತಾ ಪಡೆಗಳನ್ನು ನಡುಗಿಸಿತ್ತು. ಮುಂಬೈನ ಬಡ ಟೈಲರ್ ಒಬ್ಬರ ಮಗ ಮೊಹಮ್ಮದ್ ಅಫ್ರೋಜ್, ಅಮೆರಿಕ ಮಾತ್ರವಲ್ಲದೆ ಬ್ರಿಟನ್ ಸಂಸತ್ತು ಮತ್ತು ಆಸ್ಟ್ರೇಲಿಯಾದ ಗಗನಚುಂಬಿ ಕಟ್ಟಡದ ಮೇಲೂ 9/11 ಮಾದರಿಯಲ್ಲೇ ವಿಮಾನ ದಾಳಿಗೆ ಅಲ್ ಖೈದಾ ಸಂಚು ರೂಪಿಸಿತ್ತು ಎಂದು ಹೇಳಿಕೊಂಡಿದ್ದ.

ಕೊಳೆಗೇರಿಯಿಂದ ಪೈಲಟ್ ತರಬೇತಿವರೆಗೆ: ಮುಂಬೈನ ಟ್ರಾಂಬೆ ಬಳಿಯ ಚೀತಾ ಕ್ಯಾಂಪ್ ಕೊಳೆಗೇರಿ ನಿವಾಸಿಯಾಗಿದ್ದ ಅಫ್ರೋಜ್‌ನ ತಂದೆ ಹೊಲಿಗೆ ಕೆಲಸ ಮಾಡುತ್ತಿದ್ದರು. ಇಂತಹ ಬಡ ಕುಟುಂಬದ ಯುವಕ ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಾದಂತಹ ದುಬಾರಿ ದೇಶಗಳಿಗೆ ತೆರಳಿ ವಾಣಿಜ್ಯ ಪೈಲಟ್ ತರಬೇತಿ ಪಡೆದದ್ದು ಪೊಲೀಸರಲ್ಲಿ ಭಾರೀ ಅನುಮಾನ ಹುಟ್ಟಿಸಿತ್ತು.

ಹೋಟೆಲ್ ಮೇಲೆ ರಹಸ್ಯ ದಾಳಿ: ಭಾರತಕ್ಕೆ ಮರಳಿ ಕುಟುಂಬದಿಂದ ದೂರವಾಗಿ ನವಿ ಮುಂಬೈನ ವಾಶಿ ಹೋಟೆಲ್‌ನಲ್ಲಿ ತಂಗಿದ್ದ ಅಫ್ರೋಜ್‌ನನ್ನು ಅಕ್ಟೋಬರ್ 2001ರಲ್ಲಿ ಮುಂಬೈ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಧಿಸಿದರು.

ಬ್ರಿಟನ್, ಆಸ್ಟ್ರೇಲಿಯಾ ಟಾರ್ಗೆಟ್ ಸಂಚು?: ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನವನ್ನು ಅಪಹರಿಸಿ ಬ್ರಿಟಿಷ್ ಸಂಸತ್ತಿಗೆ ಅಪ್ಪಳಿಸುವುದು ತನ್ನ ಗುರಿಯಾಗಿತ್ತು ಎಂದು ವಿಚಾರಣೆ ವೇಳೆ ಆತ ಹೇಳಿಕೊಂಡಿದ್ದ. ಆದರೆ ಅಮೆರಿಕದಲ್ಲಿ ದಾಳಿ ನಡೆದ ತಕ್ಷಣ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದ್ದರಿಂದ ಈ ಪ್ಲ್ಯಾನ್ ಕೈಬಿಡಲಾಯಿತು ಹಾಗೂ ಮೆಲ್ಬೋರ್ನ್‌ನ ‘ರಿಯಾಲ್ಟೊ ಟವರ್ಸ್’ ಮೇಲೆ ದಾಳಿಗೆ ಮತ್ತೊಂದು ತಂಡ ಸಿದ್ಧವಾಗಿತ್ತು ಎಂದು ಆತ ಮಾಹಿತಿ ನೀಡಿದ್ದ.

ಮತ್ತಷ್ಟು ಓದಿ:

ಕೆಂಪು ಕೋಟೆ ಸ್ಫೋಟ ಆತ್ಮಾಹುತಿ ಬಾಂಬ್ ದಾಳಿ, ಕಾರಿನಿಂದಲೇ ಐಇಡಿ ಸ್ಫೋಟಿಸಿದ್ದ ಉಮರ್ ನಬಿ; ಎನ್‌ಐಎ ಚಾರ್ಜ್​ಶೀಟ್​​ನಲ್ಲಿ ಬಹಿರಂಗ

3 ದೇಶಗಳಲ್ಲಿ ಅಂತರರಾಷ್ಟ್ರೀಯ ತನಿಖೆ: ಈ ಹೇಳಿಕೆಗಳಿಂದ ಬೆಚ್ಚಿಬಿದ್ದ ಮುಂಬೈ ಪೊಲೀಸ್ ಇಲಾಖೆ, ಅಂದಿನ ಕಮಿಷನರ್ ಎಂ.ಎನ್. ಸಿಂಗ್ ನೇತೃತ್ವದಲ್ಲಿ ಅಮೆರಿಕ, ಯುಕೆ ಮತ್ತು ಆಸ್ಟ್ರೇಲಿಯಾಗಳಿಗೆ ವಿಶೇಷ ತಂಡಗಳನ್ನು ಕಳುಹಿಸಿ ಜಾಗತಿಕ ತನಿಖೆ ನಡೆಸಿತ್ತು.

ಭಾರತದ ಮೊದಲ ‘ಪೋಟಾ’ (POTA) ಕೇಸ್: ಈ ಪ್ರಕರಣದ ಗಂಭೀರತೆ ಪರಿಗಣಿಸಿ, ಆಗಷ್ಟೇ ಜಾರಿಗೆ ಬಂದಿದ್ದ ಭಯೋತ್ಪಾದನಾ ತಡೆ ಕಾಯ್ದೆ (POTA) ಅಡಿಯಲ್ಲಿ ಅಫ್ರೋಜ್ ವಿರುದ್ಧ ದೇಶದಲ್ಲೇ ಮೊದಲ ಬಾರಿಗೆ ಪ್ರಕರಣ ದಾಖಲಿಸಲಾಯಿತು.

ಸಾಕ್ಷ್ಯಾಧಾರಗಳ ಕೊರತೆ ಮತ್ತು ಖುಲಾಸೆ: ಇಷ್ಟೆಲ್ಲಾ ಸದ್ದು ಮಾಡಿದರೂ, ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದಾಗಲಿ ಅಥವಾ ಮುಂಬೈ ಪೊಲೀಸರಿಂದಾಗಲಿ ಅಫ್ರೋಜ್ ನಿಜಕ್ಕೂ ಅಲ್ ಖೈದಾ ಸಂಚಿನಲ್ಲಿ ಭಾಗಿಯಾಗಿದ್ದ ಎಂಬುದನ್ನು ಸಾಬೀತುಪಡಿಸುವ ಯಾವುದೇ ಅಧಿಕೃತ ದಾಖಲೆಗಳು ನ್ಯಾಯಾಲಯಕ್ಕೆ ಸಿಗಲಿಲ್ಲ. ಅಂತಿಮವಾಗಿ ಪ್ರಾಸಿಕ್ಯೂಷನ್ ಪೋಟಾ ಆರೋಪಗಳನ್ನು ಕೈಬಿಟ್ಟಿದ್ದರಿಂದ ಆತ ಜೈಲಿನಿಂದ ಬಿಡುಗಡೆಯಾದ.

ಚುನಾವಣಾ ಕಣಕ್ಕೆ ಎಂಟ್ರಿ: ಪೊಲೀಸರು ಪ್ರಚಾರಕ್ಕಾಗಿ ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದರು ಎಂದು ಸಮರ್ಥಿಸಿಕೊಂಡ ಅಫ್ರೋಜ್, ಬಿಡುಗಡೆಯ ನಂತರ ಮುಂಬೈನ ಅನುಶಕ್ತಿ ನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದ. ಇಂದಿಗೂ ಇದು 9/11 ತನಿಖಾ ಇತಿಹಾಸದಲ್ಲೇ ಅತ್ಯಂತ ನಿಗೂಢ ಹಾಗೂ ಚರ್ಚಿತ ಅಧ್ಯಾಯವಾಗಿ ಉಳಿದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:49 pm, Fri, 11 September 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ