Mohan Bhagwat: ನಾವು ನಮಗಾಗಿ ಮಾತ್ರ ಬದುಕುವವರಲ್ಲ, ದೇಶದ ಶಿಕ್ಷಣ, ಆರೋಗ್ಯ ವ್ಯವಸ್ಥೆ ನಾಶ ಮಾಡಿದ್ದು ಬ್ರಿಟಿಷರು

ನಮ್ಮ ಶಿಕ್ಷಣ ವ್ಯವಸ್ಥೆಯು ಉದ್ಯೋಗಕ್ಕಾಗಿ ಮಾತ್ರವಲ್ಲ, ಜ್ಞಾನದ ಮಾಧ್ಯಮವೂ ಆಗಿತ್ತು. ಬ್ರಿಟಿಷರು ಬರುವುದಕ್ಕಿಂದ ಮೊದಲು ಶಿಕ್ಷಣಕ್ಕೆ ನೀಡುತ್ತಿದ್ದ ಮೌಲ್ಯ ಹೆಚ್ಚಾಗಿತ್ತು, ಜೊತೆಗೆ ಅದಕ್ಕೆ ನೀಡುತ್ತಿದ್ದ ಹಣವು ಕೂಡ ಕಡಿಮೆ ಇತ್ತು.

Mohan Bhagwat: ನಾವು ನಮಗಾಗಿ ಮಾತ್ರ ಬದುಕುವವರಲ್ಲ, ದೇಶದ ಶಿಕ್ಷಣ, ಆರೋಗ್ಯ ವ್ಯವಸ್ಥೆ ನಾಶ ಮಾಡಿದ್ದು ಬ್ರಿಟಿಷರು
ಮೋಹನ್ ಭಾಗವತ್
Follow us
ಅಕ್ಷಯ್​ ಪಲ್ಲಮಜಲು​​
|

Updated on:Mar 06, 2023 | 11:15 AM

ಭಾರತದ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಿದ್ದು ಬ್ರಿಟಿಷರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಮೊದಲು, 70 ರಿಂದ 80% ರಷ್ಟು ವಿದ್ಯಾವಂತರಾಗಿದ್ದರು ಮತ್ತು ದೇಶದಲ್ಲಿ ನಿರುದ್ಯೋಗ ಇರಲಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯು ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ವಿನ್ಯಾಸಗೊಳಿಸಿರುವುದರಿಂದ ಜಾತಿ ಮತ್ತು ಬಣ್ಣದ ಆಧಾರದ ಮೇಲೆ ಯಾವುದೇ ತಾರತಮ್ಯ ಇರಲಿಲ್ಲ. ಆದರೆ ಬ್ರಿಟಿಷರು ಇಲ್ಲಿ ಇಂಗ್ಲೆಂಡ್‌ನ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು ಮತ್ತು ಇದು ದೇಶದ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಿತು ಎಂದು ಭಾಗವತ್ ಅವರು ಆತ್ಮ ಮನೋಹರ್ ಜೈನ್ ಆರಾಧನಾ ದೇವಾಲಯ ಸಂಕೀರ್ಣದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ನಮ್ಮ ಶಿಕ್ಷಣ ವ್ಯವಸ್ಥೆಯು ಉದ್ಯೋಗಕ್ಕಾಗಿ ಮಾತ್ರವಲ್ಲ, ಜ್ಞಾನದ ಮಾಧ್ಯಮವೂ ಆಗಿತ್ತು. ಬ್ರಿಟಿಷರು ಬರುವುದಕ್ಕಿಂದ ಮೊದಲು ಶಿಕ್ಷಣಕ್ಕೆ ನೀಡುತ್ತಿದ್ದ ಮೌಲ್ಯ ಹೆಚ್ಚಾಗಿತ್ತು, ಜೊತೆಗೆ ಅದಕ್ಕೆ ನೀಡುತ್ತಿದ್ದ ಹಣವು ಕೂಡ ಕಡಿಮೆ ಇತ್ತು. ಇಲ್ಲಿ ಜಾತಿ, ಧರ್ಮ ಎಂಬ ಭೇದವಿಲ್ಲದೆ ಎಲ್ಲರಿಗೂ ಪ್ರವೇಶಿಸಬಹುದು. ಆದ್ದರಿಂದ ಸಮಾಜವು ಶಿಕ್ಷಣದ ಮೌಲ್ಯಗಳನ್ನು ತಿಳಿದುಕೊಂಡಿತ್ತು, ಇತಂಹ ಶಿಕ್ಷಣದಿಂದ ಹೊರಬಂದ ವಿದ್ವಾಂಸರು, ಕಲಾವಿದರು ಮತ್ತು ಕುಶಲಕರ್ಮಿಗಳು ಪ್ರಪಂಚದಾದ್ಯಂತ ಗುರುತಿಸಲ್ಪಟ್ಟರು, ಎಂದು ಅವರು ಹೇಳಿದರು.

ಇದನ್ನೂ ಓದಿ: Mohan Bhagwat: ಜಾತಿಗಳ ಸೃಷ್ಟಿಯಾಗಿದ್ದು ದೇವರಿಂದಲ್ಲ, ಪುರೋಹಿತರಿಂದ: ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥರು ಶೈಕ್ಷಣಿಕ ವ್ಯವಸ್ಥೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಜತೆಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಸುಧಾರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಸಾರ್ವಜನಿಕರಿಗೆ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಆಸ್ಪತ್ರೆಯನ್ನು ನಿರ್ಮಿಸುವುದು ಸೇರಿದಂತೆ ಆತ್ಮ ಮನೋಹರ ಮುನಿ ಆಶ್ರಮ ಮಾಡಿದ ಕಾರ್ಯವನ್ನು ಭಾಗವತ್ ಶ್ಲಾಘಿಸಿದರು.

ವೈದ್ಯಕೀಯ ಮತ್ತು ಶಿಕ್ಷಣ ಎರಡೂ ದುಬಾರಿಯಾಗುತ್ತಿರುವುದರಿಂದ ಎಲ್ಲರಿಗೂ ಆರೋಗ್ಯ ಮತ್ತು ಶಿಕ್ಷಣವು ನಮ್ಮ ದೇಶದ ಅತಿದೊಡ್ಡ ಅಗತ್ಯವಾಗಿದೆ ಎಂದು ಭಾಗವತ್ ಹೇಳಿದರು ಮತ್ತು ಸಾಮಾನ್ಯ ಜನರಿಗೆ ವೈದ್ಯಕೀಯ ಮತ್ತು ಶಿಕ್ಷಣವನ್ನು ಅಗ್ಗದ ದರದಲ್ಲಿ ಸುಲಭವಾಗಿ ತಲುಪಿಸುವ ಅಗತ್ಯವಿದೆ.

ನಾವು ನಮಗಾಗಿ ಮಾತ್ರ ಬದುಕುವವರಲ್ಲ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಸರ್ವಜನ್ ಹಿತಯ್-ಸರ್ಜನ್ ಸುಖಯ್ (ಎಲ್ಲರ ಕಲ್ಯಾಣ-ಎಲ್ಲರಿಗೂ ಸಂತೋಷ) ಪ್ರಜ್ಞೆಯನ್ನು ಒಳಗೊಂಡಿವೆ ಎಂದು ಅವರು ಹೇಳಿದರು, ಸಮಾಜವನ್ನು ಬಲಪಡಿಸುವ ಮೂಲಕ ಮಾತ್ರ, ಜನರು ದೇಶದಲ್ಲಿ ಒಳ್ಳೆಯದನ್ನು ನೋಡಬಹುದು.ನಾವು ಸಂತೋಷವಾಗಿರಲು ಬಯಸಿದರೆ, ಸಮಾಜವನ್ನು ಸಂತೋಷಪಡಿಸಬೇಕು ಎಂದು ಅವರು ಹೇಳಿದರು.

Published On - 11:15 am, Mon, 6 March 23

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು