AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shiv Sena: ಚುನಾವಣಾ ಆಯೋಗ ಶಿವಸೇನೆಯ ಹೆಸರು, ಚಿಹ್ನೆಯನ್ನು ಕಿತ್ತುಕೊಂಡಿರಬಹುದು ಆದರೆ ಪಕ್ಷವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ: ಉದ್ಧವ್ ಠಾಕ್ರೆ

ಚುನಾವಣಾ ಆಯೋಗವು ಶಿವಸೇನೆಯ ಹೆಸರು, ಚಿಹ್ನೆಯನ್ನು ಕಿತ್ತುಕೊಂಡಿರಬಹುದು ಆದರೆ ಪಕ್ಷವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಚುನಾವಣಾ ಆಯೋಗವನ್ನು ಗುರಿಯಾಗಿಸಿ ಮಾತನಾಡಿದ್ದಾರೆ.

Shiv Sena: ಚುನಾವಣಾ ಆಯೋಗ ಶಿವಸೇನೆಯ ಹೆಸರು, ಚಿಹ್ನೆಯನ್ನು ಕಿತ್ತುಕೊಂಡಿರಬಹುದು ಆದರೆ ಪಕ್ಷವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us
ನಯನಾ ರಾಜೀವ್
|

Updated on: Mar 06, 2023 | 9:45 AM

ಚುನಾವಣಾ ಆಯೋಗವು ಶಿವಸೇನೆಯ ಹೆಸರು, ಚಿಹ್ನೆಯನ್ನು ಕಿತ್ತುಕೊಂಡಿರಬಹುದು ಆದರೆ ಪಕ್ಷವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಚುನಾವಣಾ ಆಯೋಗವನ್ನು ಗುರಿಯಾಗಿಸಿ ಮಾತನಾಡಿದ್ದಾರೆ. ಆಯೋಗವು ತನ್ನಿಂದ ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನು ಕಸಿದುಕೊಂಡು ಬಂಡಾಯ ಬಣಕ್ಕೆ (ಶಿಂಧೆ ಬಣ) ಹಂಚಿಕೆ ಮಾಡಿದೆ, ಆದರೆ ಎಂದಿಗೂ ನಮ್ಮ ಪಕ್ಷವನ್ನು ಅವರಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಶಿವಸೇನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ಧಾರದ ನಂತರ ಉದ್ಧವ್ ಠಾಕ್ರೆ ಮೊದಲ ಬಾರಿಗೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಆಯೋಗವಿದೆ ಮತ್ತು ಅದು ಅಧಿಕಾರದಲ್ಲಿರುವ ಜನರ ಗುಲಾಮ. ಚುನಾವಣಾ ಆಯೋಗ ಯಾವ ತತ್ವದ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಚುನಾವಣಾ ಆಯೋಗದ ತೀರ್ಪನ್ನು ನಾನು ಒಪ್ಪಿಕೊಂಡಿಲ್ಲ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದೇನೆ. ಬಿಜೆಪಿ ಶಿವಸೇನೆಯನ್ನು ಮುಗಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಮತ್ತಷ್ಟು ಓದಿ: ಇಲ್ಲಿರುವುದು ಒಂದೇ ಒಂದು ಶಿವಸೇನಾ, ಇದು ಎಲ್ಲರನ್ನೂ ಪ್ರತಿನಿಧಿಸುತ್ತದೆ ಎಂದ ಶಿಂಧೆ ಬಣ

ಮೋದಿ ಹೆಸರಿನಲ್ಲಿ ಮತ ಕೇಳಿ, ಶಿವಸೇನೆ ಹೆಸರಿನಲ್ಲಿ ಅಲ್ಲ ಶಿವಸೇನೆ ಹೆಸರಿನಲ್ಲಿ ಮತ ಕೇಳದೆ ಮೋದಿ ಹೆಸರಿನಲ್ಲಿ ಮತ ಕೇಳುವಂತೆ ನಾನು ಸವಾಲು ಹಾಕುತ್ತೇನೆ. ಬಾಳಾಸಾಹೇಬ್ ಠಾಕ್ರೆ ಅವರ ಫೋಟೋ ಇಲ್ಲದೆ ಶಿವಸೇನೆ ಹೆಸರಿನಲ್ಲಿ ಮತ ಕೇಳದೆ ಮೋದಿ ಹೆಸರಿನಲ್ಲಿ ಮತ ಕೇಳುವಂತೆ ನಾನು ಸವಾಲು ಹಾಕುತ್ತೇನೆ.

ನಿಮಗೆ ನೀಡಲು ನನ್ನ ಬಳಿ ಏನೂ ಇಲ್ಲ, ನಾನು ನಿಮ್ಮ ಆಶೀರ್ವಾದ ಮತ್ತು ಬೆಂಬಲವನ್ನು ಪಡೆಯಲು ಬಂದಿದ್ದೇನೆ ಎಂದರು. ಶಿವಸೇನೆಯನ್ನು ನಾಶಪಡಿಸುವ ಕ್ರಮವು ಮರಾಠಿಗರು ಮತ್ತು ಹಿಂದೂಗಳ ಐಕ್ಯತೆಯ ಮೇಲಿನ ದಾಳಿಯಂತಿದೆ ಎಂದು ಅವರು ಹೇಳಿದರು.

ಮೊದಲು ಬಿಜೆಪಿಯ ವೇದಿಕೆಯು ಸಾಧುಗಳು ಮತ್ತು ಸಂತರಿಂದ ತುಂಬಿತ್ತು ಆದರೆ ಈಗ ಅದು ಅವಕಾಶವಾದಿಗಳಿಂದ ತುಂಬಿದೆ. ನಾನು ಬಿಜೆಪಿಗೆ ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮತ ಕೇಳುವಂತೆ ಸವಾಲು ಹಾಕುತ್ತಿದ್ದೇನೆ ಎಂದು ಹೇಳಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ