AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shiva Sena: ಶಿವಸೇನೆ ಚಿಹ್ನೆಯ ಗದ್ದಲದ ನಡುವೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲಿರುವ ಸಿಎಂ ಏಕನಾಥ್ ಶಿಂದೆ

ಶಿವಸೇನೆಯ ಚಿಹ್ನೆಯ ಗದ್ದಲದ ನಡುವೆಯೇ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಲು ಸಿಎಂ ಏಕನಾಥ್ ಶಿಂದೆ ಮುಂದಾಗಿದ್ದಾರೆ. ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ಭಾರತ ಚುನಾವಣಾ ಆಯೋಗವು (ಇಸಿಐ) ಮಂಜೂರು ಮಾಡಿದ ನಂತರ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಮೊದಲ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇಂದು (ಫೆಬ್ರವರಿ 21) ನಡೆಯಲಿದೆ.

Shiva Sena: ಶಿವಸೇನೆ ಚಿಹ್ನೆಯ ಗದ್ದಲದ ನಡುವೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲಿರುವ ಸಿಎಂ ಏಕನಾಥ್ ಶಿಂದೆ
ಏಕನಾಥ್ ಶಿಂದೆ
ನಯನಾ ರಾಜೀವ್
|

Updated on: Feb 21, 2023 | 10:13 AM

Share

ಶಿವಸೇನೆಯ ಚಿಹ್ನೆಯ ಗದ್ದಲದ ನಡುವೆಯೇ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಲು ಸಿಎಂ ಏಕನಾಥ್ ಶಿಂದೆ ಮುಂದಾಗಿದ್ದಾರೆ. ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ಭಾರತ ಚುನಾವಣಾ ಆಯೋಗವು (ಇಸಿಐ) ಮಂಜೂರು ಮಾಡಿದ ನಂತರ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ ಮೊದಲ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇಂದು (ಫೆಬ್ರವರಿ 21) ನಡೆಯಲಿದೆ.

ಸಭೆಯಲ್ಲಿ ಇಂದು ಕೆಲವು ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಬಹುದು ಅಥವಾ ನೇಮಕ ಮಾಡಬಹುದು ಎಂದು ಮಹಾರಾಷ್ಟ್ರದ ಶಾಲಾ ಶಿಕ್ಷಣ ಮತ್ತು ಮರಾಠಿ ಭಾಷಾ ಸಚಿವ ದೀಪಕ್ ಕೇಸರ್ಕರ್ ಹೇಳಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ (ಫೆಬ್ರವರಿ 17) ಚುನಾವಣಾ ಸಮಿತಿಯು ಏಕನಾಥ್ ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿ, ದಿವಂಗತ ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಅವಿಭಜಿತ ಪಕ್ಷದ ಬಿಲ್ಲು ಮತ್ತು ಬಾಣದ ಚುನಾವಣಾ ಚಿಹ್ನೆಯನ್ನು ಅದಕ್ಕೆ ನಿಯೋಜಿಸಲು ಆದೇಶಿಸಿತ್ತು. ಸಂಘಟನೆಯ ನಿಯಂತ್ರಣಕ್ಕಾಗಿ ಸುದೀರ್ಘ ಹೋರಾಟದ ಕುರಿತು 78 ಪುಟಗಳ ಆದೇಶದಲ್ಲಿ, ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣೆ ಮುಗಿಯುವವರೆಗೆ ಉದ್ಧವ್ ಠಾಕ್ರೆ ಬಣಕ್ಕೆ ನೀಡಲಾದ ಜ್ವಾಲೆಯ ಟಾರ್ಚ್ ಪೋಲ್ ಚಿಹ್ನೆಯನ್ನು ಇರಿಸಿಕೊಳ್ಳಲು ಆಯೋಗವು ಅನುಮತಿ ನೀಡಿದೆ.

ಮತ್ತಷ್ಟು ಓದಿ: Shiv Sena Symbol ಏಕನಾಥ್ ಶಿಂಧೆ ಬಣ ಪಾಲಾದ ‘ಬಿಲ್ಲು ಬಾಣ’ ಚಿಹ್ನೆ, ಉದ್ಧವ್ ಠಾಕ್ರಗೆ ಶಾಕ್ ಕೊಟ್ಟ ಚುನಾವಣಾ ಆಯೋಗ

2019 ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 55 ವಿಜೇತ ಶಿವಸೇನಾ ಅಭ್ಯರ್ಥಿಗಳ ಪರವಾಗಿ ಶಿಂದೆ ಅವರನ್ನು ಬೆಂಬಲಿಸುವ ಶಾಸಕರು ಸುಮಾರು ಶೇಕಡಾ 76 ರಷ್ಟು ಮತಗಳನ್ನು ಪಡೆದರು ಎಂದು ಆಯೋಗ ಹೇಳಿದೆ. ಉದ್ಧವ್ ಠಾಕ್ರೆ ಪಾಳಯದಲ್ಲಿರುವ ಶಾಸಕರು ಗೆದ್ದ ಶಿವಸೇನಾ ಅಭ್ಯರ್ಥಿಗಳ ಪರವಾಗಿ ಶೇ.23.5ರಷ್ಟು ಮತಗಳನ್ನು ಪಡೆದಿದ್ದಾರೆ ಎಂದು ತ್ರಿಸದಸ್ಯ ಆಯೋಗ ತಿಳಿಸಿದೆ.

ಶಿವಸೇನೆ ಹೆಸರು ಮತ್ತು ಅದರ ಚುನಾವಣಾ ಚಿಹ್ನೆಯನ್ನು ಮಳಿಗೆಯಿಂದ ಕಡಲೆಕಾಯಿಯನ್ನು ಖರೀದಿಸಿದಂತೆ ಖರೀದಿಸಲಾಗಿದೆ ಎಂಬುದು ಇನ್ನು ರಹಸ್ಯವಾಗಿ ಉಳಿದಿಲ್ಲ ಎಂದು ಸೇನೆಯ (ಯುಬಿಟಿ) ಮುಖವಾಣಿ ಸಾಮ್ನಾ ಸಂಪಾದಕೀಯ ಹೇಳಿದೆ.

ಚುನಾವಣಾ ಆಯೋಗವು ಇಡೀ ವಿಷಯವನ್ನು ಆಸ್ತಿ ವ್ಯವಹಾರದಂತೆ ಪರಿಗಣಿಸಿದೆ ಮತ್ತು ಠಾಕ್ರೆಯಿಂದ ಪೋಷಿಸಲ್ಪಟ್ಟ ಶಿವಸೇನೆಯನ್ನು ದೆಹಲಿಯ ಬೂಟುಗಳನ್ನು ನೆಕ್ಕುವವರಿಗೆ ಹಸ್ತಾಂತರಿಸಿದೆ ಎಂದು ಮರಾಠಿ ಪ್ರಕಟಣೆಯು ಹೇಳಿಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ