Sanitary Pads: ಜನೌಷಧಿ ಮಳಿಗೆಗಳಲ್ಲಿ ಇದೂವರೆಗೆ ಮಾರಾಟವಾದ ಸ್ಯಾನಿಟರಿ ಪ್ಯಾಡ್ ಎಷ್ಟು?
Jan Aushadhi Sanitary Napkins Sale: 2018ರಿಂದ ಇಲ್ಲಿಯವರೆಗೆ ಜನೌಷಧಿ ಮಳಿಗೆಗಳಲ್ಲಿ ಒಟ್ಟು 34.71 ಕೋಟಿ ಪರಿಸರಸ್ನೇಹಿ ಸ್ಯಾನಿಟರಿ ನ್ಯಾಪ್ಕಿನ್ಗಳು ಮಾರಾಟವಾಗಿವೆ ಎಂದು ಕೇಂದ್ರ ಸಚಿವ ಮನ್ಸುಕ್ ಮಾಂಡವೀಯ ತಿಳಿಸಿದ್ದಾರೆ. ಜನೌಷಧಿ ಕೇಂದ್ರಗಳಲ್ಲಿ ಈ ಪ್ಯಾಡ್ಗಳು ಕೇವಲ 1 ರೂಗೆ ಮಾರಾಟವಾಗುತ್ತಿವೆ.
ನವದೆಹಲಿ: ಜನೌಷಧಿ ಮಳಿಗೆಗಳಲ್ಲಿ (Jan Aushadhi Centers) ಇದೂವರೆಗೆ 34.71 ಕೋಟಿ ಸ್ಯಾನಿಟರಿ ಪ್ಯಾಡ್ಗಳು (Sanitary napkins) ಮಾರಾಟವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮಾಡಿದ್ದಾರೆ. 2018 ಜೂನ್ 4ರಿಂದ ಇಲ್ಲಿಯವರೆಗೆ ಹೆಚ್ಚೂಕಡಿಮೆ 5 ವರ್ಷಗಳಲ್ಲಿ ಮಾರಾಟವಾದ ಸ್ಯಾನಿಟರಿ ಪ್ಯಾಡ್ಗಳ ಸಂಖ್ಯೆ ಇದು. “ಪ್ಯಾಡ್ಗೆ ಒಂದು ರೂನಂತೆ 34.71 ಕೋಟಿ ಜನೌಷಧಿ ಸುವಿಧಾ ಸ್ಯಾನಿಟರಿ ಪ್ಯಾಡ್ಗಳನ್ನು ಮಾರಲಾಗಿದೆ. ಇದರಿಂದ 218.45 ಕೋಟಿ ರೂ ಉಳಿತಾಯಕ್ಕೆ ಕಾರಣವಾಗಿದೆ. ಈ ಪ್ಯಾಡ್ಗಳು ಹದಿಹರೆಯದ ಯುವತಿಯರು ಮತ್ತು ಮಹಿಳೆಯರ ಬಾಳನ್ನು ಸುಗಮಗೊಳಿಸಿದೆ” ಎಂದು ಸಚಿವರು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ದೇಶಾದ್ಯಂತ 8,700ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳು ನಿರ್ವಹಿಸುತ್ತಿದ್ದು, ಅಲ್ಲಿ ಸ್ಯಾನಿಟರಿ ಪ್ಯಾಡ್ ಕೇವಲ 1 ರೂಪಾಯಿಗೆ ಸಿಗುತ್ತದೆ. ಇಂಥದ್ದೇ ಸ್ಯಾನಿಟರಿ ಪ್ಯಾಡಿನ ಮಾರುಕಟ್ಟೆ ದರ 5ರಿಂದ 8 ರೂ ಇದೆ ಎಂದು ಹೇಳಲಾಗುತ್ತದೆ. ಮಹಿಳೆಯರ ಸ್ವಾಸ್ಥ್ಯದ ದೃಷ್ಟಿಯಿಂದ ತೀರಾ ಕಡಿಮೆ ಬೆಲೆಗೆ ಜನೌಷಧಿ ಕೇಂದ್ರಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳ ಮಾರಾಟ ಮಾಡಲಾಗುತ್ತಿದೆ.
Ensuring ‘Swachhta, Swasthya and Suvidha’ For ? ?
Over 34.71 Crore Jan Aushadhi Suvidha Sanitary Pads sold, at ₹ 1 Per Pad.
This has led to total savings of ₹ 218.45 Crores.
Suvidha Sanitary Pads are furthering ‘Ease of Living’ for adolescent girls & women. pic.twitter.com/jLPsMUgUp3
— Dr Mansukh Mandaviya (@mansukhmandviya) February 20, 2023
ಭಾರತದ ಕೆಲ ಗ್ರಾಮೀಣ ಭಾಗಗಳಲ್ಲಿ ಸ್ಯಾನಿಟರಿ ಪ್ಯಾಡ್ಗಳು ತುಸು ದುಬಾರಿಯಾಗಿರುವುದರಿಂದ ಅಲ್ಲಿನ ಮಹಿಳೆಯರು ಋತುವಿನ ವೇಳೆ ಬಳಸುವುದಿಲ್ಲ. ಹೀಗಾಗಿ, ಕೈಗೆಟುಕುವ ದರದಲ್ಲಿ ಸ್ಯಾನಿಟರಿ ಪ್ಯಾಡ್ಗಳನ್ನು ಸರ್ಕಾರ ಜನೌಷಧಿ ಮಳಿಗೆಗಳ ಮೂಲಕ ವ್ಯವಸ್ಥೆ ಮಾಡಿದೆ.
ಇದನ್ನೂ ಓದಿ: Nirav Modi: ದೇಶ ತೊರೆದ ನೀರವ್ ಮೋದಿಯ ಚಿನ್ನ, ವಜ್ರ, ಆಭರಣಗಳ ಹರಾಜು ಮುಂದಿನ ತಿಂಗಳು
2018 ಜೂನ್ 4, ವಿಶ್ವ ಪರಿಸರ ದಿನದಂದು ಜನೌಷಧಿ ಸುವಿಧಾ ಸ್ಯಾನಿಟರಿ ನ್ಯಾಪ್ಕಿನ್ ಅನ್ನು ಸರ್ಕಾರ ಅನಾವರಣಗೊಳಿಸಿತ್ತು. ಈ ಸ್ಯಾನಿಟರಿ ಪ್ಯಾಡ್ಗಳು ಪರಿಸರಸ್ನೇಹಿ ಆಗಿವೆ. ಅಲ್ಲಿಂದ ಇಲ್ಲಿಯವರೆಗೆ 34 ಕೋಟಿಗೂ ಹೆಚ್ಚು ನ್ಯಾಪ್ಕಿನ್ ಮಾರಾಟವಾಗಿರುವುದು ಗಮನಾರ್ಹ.
ಸ್ಟಾಟಿಸ್ಟಿಯಾ ಎಂಬ ವೆಬ್ಸೈಟ್ ಮಾಹಿತಿ ಪ್ರಕಾರ ಭಾರತದಲ್ಲಿ 2021ರಲ್ಲಿ ಮಾರಾಟವಾದ ಒಟ್ಟು ಸ್ಯಾನಿಟರಿ ನ್ಯಾಪ್ಕಿನ್ಗಳ ಸಂಖ್ಯೆ ಸುಮಾರು ಒಂದು ಸಾವಿರ ಕೋಟಿಗೂ ಹೆಚ್ಚು ಎನ್ನಲಾಗಿದೆ.
ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ
Published On - 11:19 am, Tue, 21 February 23