Indore: ಕೆಲಸದ ಅವಧಿ ಮುಗಿದಿದೆ ದಯವಿಟ್ಟು ಮನೆಗೆ ಹೋಗಿ: ಉದ್ಯೋಗಿಗಳಿಗೆ ಸಂದೇಶ ನೀಡುತ್ತೆ ಈ ಕಂಪನಿಯ ಲ್ಯಾಪ್ ಟಾಪ್
ಮಧ್ಯಪ್ರದೇಶದ "ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್" ಕಂಪನಿಯೊಂದು ಉದ್ಯೋಗಿಗಳಿಗಾಗಿ ವಿನೂತನ ಮಾರ್ಗವೊಂದನ್ನು ಅನುಸರಿಸಿದೆ. ಅದು ಕಚೇರಿಯ ಸಿಸ್ಟಮ್ ಮೇಲೆ "ನಿಮ್ಮ ಕೆಲಸದ ಅವಧಿ ಮುಗಿದಿದೆ 10 ನಿಮಿಷಗಳಲ್ಲಿ ಸಿಸ್ಟಮ್ ಶೆಟ್ಡೌನ್ ಆಗುತ್ತೆ ದಯವಿಟ್ಟು ಮನೆಗೆ ಹೋಗಿ" ಎಂಬ ಸಂದೇಶ ಲ್ಯಾಪ್ಟಾಪ್ನ ಸ್ಕ್ರೀನ್ ಮೇಲೆ ಕಾಣುತ್ತದೆ.
ಇಂದೋರ್: ಕೆಲವೊಂದು ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸದಾ ಕೆಲಸ ಕೆಲಸ ಅಂತ ಕೆಲಸದ ಗುಂಗಲ್ಲೇ ಇದ್ದು, ತಮ್ಮ ವೈಯಕ್ತಿಕ ಬದುಕಿಗೆ ಸಮಯ ಕೊಡುವುದಿಲ್ಲ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಇದನ್ನು ತಪ್ಪಿಸಲು ಮಧ್ಯಪ್ರದೇಶದ (Madhya Pradesh) “ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್” ಸ್ಟಾರ್ಟ್ ಅಪ್ ಕಂಪನಿಯೊಂದು ಉದ್ಯೋಗಿಗಳಿಗಾಗಿ ವಿನೂತನ ಮಾರ್ಗವೊಂದನ್ನು ಅನುಸರಿಸಿದೆ. ಅದು ಕಚೇರಿಯ ಸಿಸ್ಟಮ್ ಮೇಲೆ “ನಿಮ್ಮ ಕೆಲಸದ ಅವಧಿ ಮುಗಿದಿದೆ 10 ನಿಮಿಷಗಳಲ್ಲಿ ಸಿಸ್ಟಮ್ ಶೆಟ್ಡೌನ್ ಆಗುತ್ತೆ ದಯವಿಟ್ಟು ಮನೆಗೆ ಹೋಗಿ” (Your Shift time is over. The office System will shutdown in 10 mins. PLEASE GO HOME!!) ಎಂಬ ಸಂದೇಶ ಲ್ಯಾಪ್ಟಾಪ್ನ ಸ್ಕ್ರೀನ್ ಮೇಲೆ ಕಾಣುವಂತೆ ವ್ಯವಸ್ಥೆ ಮಾಡಿದೆ.
ಈ ಬಗ್ಗೆ ಮೊಬೈಲ್ ಅಪ್ಲಿಕೇಶನ್ ಡೆವಲಪ್ಮೆಂಟ್ ಕಂಪನಿಯ ಸಿಇಒ, ಅಜೆಯ ಗೊಲನಿ ಮಾತನಾಡಿ ಉದ್ಯೋಗಿಗಳು ಹೆಚ್ಚು ಕೆಲಸ ಮಾಡುವುದರೊಂದಿಗೆ, ಸಮಯ ನಿರ್ವಹಣೆ ಮಾಡುವುದು ಬಹಳ ಮುಖ್ಯ. ಈ ಕಾರಣದಿಂದ, ಅವರ ಹಿತದೃಷ್ಟಿಯಿಂದ ಈ ಮಾರ್ಗವನ್ನು ಅನುಸರಿಸಿದ್ದೇವೆ ಎಂದು ಹೇಳಿದರು.
ನಾವು ಟೈಮ್ ಟ್ರ್ಯಾಕರ್ಸ್ಗಳನ್ನು ನಮ್ಮ ಕಂಪನೀಯ ಸಿಸ್ಟಮ್ಗಳಲ್ಲಿ ಅಳವಡಿಸಿದ್ದೇವೆ. ಇದರಿಂದ ಉದ್ಯೂಗಿಗಳ ಶಿಫ್ಟ್ ಮುಗಿದ ನಂತರ, ಅವರ ಸಿಸ್ಟಮ್ಗಳ ಮೇಲೆ “ನಿಮ್ಮ ಕೆಲಸದ ಅವಧಿ ಮುಗಿದಿದೆ 10 ನಿಮಿಷಗಳಲ್ಲಿ ಶೆಡ್ಡೌನ್ ಆಗುತ್ತೆ ದಯವಿಟ್ಟು ಮನೆಗೆ ಹೋಗಿ” ಎಂದು ಕಾಣಿಸಲು ಪ್ರಾರಂಭಿಸುತ್ತದೆ. ಇದರಿಂದ ಉದ್ಯೋಗಿ ಸರಿಯಾದ ಸಮಯಕ್ಕೆ ಮನೆಗೆ ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಕಾರು ಗಿಫ್ಟ್ ನೀಡಿದ್ದ ಕಂಪನಿ
ಮತ್ತು ಈ ರೀತಿಯಾಗಿ ಉದ್ಯೋಗಿಗಳ ಹಿತ ದೃಷ್ಟಿಯಿಂದ ವಿನೂತನ ಮಾರ್ಗವನ್ನು ಅನುಸರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಗುಜರಾತ್ನ ಟೆಕ್ ಕಂಪನಿಯೊಂದರ ಸಿಇಒ, ಆರಂಭದಿಂದಲೂ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಟೊಯೊಟಾ ಪ್ರೀಮಿಯಂ ಕಾರು ಉಡುಗೊರೆ ನೀಡಿ ಗಮನ ಸೆಳೆದಿದ್ದರು. ಗುಜರಾತ್ನ ಅಹಮದಾಬಾದ್ನಲ್ಲಿ ಪ್ರಧಾನ ಕಚೇರಿ ಹೊಂದಿರುವ ತ್ರಿದ್ಯಾ ಇನ್ಫೋಟೆಕ್ ಕಂಪನಿಯ ಸಿಇಒ ರಮೇಶ್ ಮರಂದ್ ಕಂಪನಿಯಲ್ಲಿ ಆರಂಭದಿಂದಲೂ ಇರುವ 13 ಮಂದಿ ಉದ್ಯೋಗಿಗಳಿಗೆ ಕಾರು ಉಡುಗೊರೆ ನೀಡಿದ್ದರು. ಉಳಿದ ಎಲ್ಲ ಉದ್ಯೋಗಿಗಳಿಗೂ ಉಡುಗೊರೆ ನೀಡುವ ಬಗ್ಗೆ ಯೋಚಿಸುತ್ತಿರುವುದಾಗಿ ತಿಳಿಸಿದ್ದರು.
ಕಾರು ಉಡುಗೊರೆ ಪಡೆದ ಉದ್ಯೋಗಿಗಳು ಕಂಪನಿಯ ಆರಂಭದಿಂದಲೂ ನಮ್ಮ ಜತೆಗಿದ್ದಾರೆ. ಸ್ಥಿರವಾದ ಉದ್ಯೋಗವನ್ನು ಬಿಟ್ಟು ನಮ್ಮ ಸ್ಟಾರ್ಟಪ್ ಸೇರಿದ ಇವರೆಲ್ಲ ಕಂಪನಿಯ ಯಶಸ್ಸಿಗಾಗಿ ಕಠಿಣ ಪರಿಶ್ರಮ ವಹಿಸಿದ್ದಾರೆ ಮತ್ತು ಕಂಪನಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಮೇಶ್ ಮರಂದ್ ತಿಳಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:00 am, Tue, 21 February 23