ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಭಾರತದಲ್ಲಿ ‘ಕುಟುಂಬ ಶಾಖಾ’ಗಳನ್ನು ರೂಪಿಸುತ್ತಿದೆ. ಇದನ್ನು ವಿದೇಶಗಳಲ್ಲಿ ವಾಸಿಸುವ ಹಿಂದೂಗಳಿಗಾಗಿ (Hindus) ವಿನ್ಯಾಸಗೊಳಿಸಲಾಗಿದೆ. ಕೌಟುಂಬಿಕ ಶಾಖೆಗಳನ್ನು ಆರಂಭಿಸುವ ಕುರಿತು ಚರ್ಚೆ ನಡೆಯುತ್ತಿದ್ದು, ಎಲ್ಲ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹಿರಿಯ ಪದಾಧಿಕಾರಿಗಳು ಹೇಳುತ್ತಿದ್ದರೂ ಈ ಆಲೋಚನೆ ಕಾರ್ಯರೂಪಕ್ಕೆ ಬರಲು 1 ಅಥವಾ 2 ವರ್ಷ ಬೇಕಾಗಬಹುದು.
ವಿದೇಶಗಳಲ್ಲಿನ ಸಾಂಸ್ಕೃತಿಕ ಮತ್ತು ಭೌಗೋಳಿಕ ಪರಿಸ್ಥಿತಿಯನ್ನು ಗಮನಿಸಿ ಆರ್ಎಸ್ಎಸ್ ಕುಟುಂಬ ಶಾಖೆಗಳ ಪರಿಕಲ್ಪನೆಯನ್ನು ಹುಟ್ಟುಹಾಕಿತು. ಜನಸಂಖ್ಯೆಯು ಚದುರಿಹೋಗಿದೆ. ಆರ್ಎಸ್ಎಸ್ ಸದಸ್ಯರು ಶಾಖಾಗಳಿಗೆ ಹೋಗುವಾಗ ಅವರು ಪ್ರತ್ಯೇಕವಾಗಿ ಸಮಯ ಕಳೆಯಲು ಬಯಸುವುದಿಲ್ಲ. ಆದ್ದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಒಂದು ಶಾಖಾವನ್ನು ಹೊಂದಲು ಸಂಘವು ನಿರ್ಧರಿಸಿತು. ಒಂದೇ ಆವರಣದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ವಿವಿಧ ಕಾರ್ಯಕ್ರಮಗಳಿವೆ. ಮಕ್ಕಳಿಗಾಗಿ ಕೂಡ ಒಂದು ವಿಭಾಗವಿದೆ. ಹೀಗಾಗಿ, ಕುಟುಂಬದ ಎಲ್ಲ ಸದಸ್ಯರು ಒಂದೇ ಸ್ಥಳಕ್ಕೆ ಬಂದು ತಮ್ಮದೇ ಆದ ಗುಂಪುಗಳಲ್ಲಿ ಚಟುವಟಿಕೆಗಳನ್ನು ನಡೆಸಬಹುದು ಎಂದು ಆರ್ಎಸ್ಎಸ್ ಮೂಲ ತಿಳಿಸಿದೆ.
ಇದನ್ನೂ ಓದಿ: RSS: ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಬಂದಿದ್ದಾರೆ 72 ಸಾವಿರ ಯುವಕರು! ಊಟ-ವಸತಿ ವ್ಯವಸ್ಥೆ ಮಾಡ್ತಿದೆ ಆರ್ಎಸ್ಎಸ್
ಭಾರತವೂ ಬಹುತೇಕ ಇದೇ ರೀತಿಯ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಇಲ್ಲಿ ವಿಭಕ್ತ ಕುಟುಂಬಗಳು ಬೆಳೆದಿವೆ ಮತ್ತು ಇಬ್ಬರೂ ಪೋಷಕರು ಕೆಲಸ ಮಾಡುತ್ತಾರೆ. ಇದರಿಂದ ಕುಟುಂಬಕ್ಕೆ ಸಮಯ ನೀಡುವುದೇ ಕಡಿಮೆಯಾಗಿದೆ. ಆರ್ಎಸ್ಎಸ್ನ ಕೌಟುಂಬಿಕ ಶಾಖೆಯ ಪರಿಕಲ್ಪನೆ ಬಗ್ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಭಾರತದಲ್ಲಿ ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಗಂಡ-ಹೆಂಡತಿ ಇಬ್ಬರೂ ತಮ್ಮ ಮಕ್ಕಳಿಗಾಗಿ ದುಡಿಯುವ ಅನಿವಾರ್ಯತೆ ಹೆಚ್ಚಾಗಿದ್ದು, ಅವರಿಬ್ಬರೂ ಒಟ್ಟಿಗೇ ಸೇರುವ ಸಂದರ್ಭಗಳೇ ವಿರಳ ಎನಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಶಾಖೆಗಳನ್ನು ಪರಿಚಯಿಸಲು ಆರ್ಎಸ್ಎಸ್ ಚಿಂತನೆ ನಡೆಸಿದೆ.
Published On - 12:41 pm, Mon, 26 December 22