RSS: ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಬಂದಿದ್ದಾರೆ 72 ಸಾವಿರ ಯುವಕರು! ಊಟ-ವಸತಿ ವ್ಯವಸ್ಥೆ ಮಾಡ್ತಿದೆ ಆರ್​ಎಸ್​ಎಸ್​

ಜಿಲ್ಲಾಡಳಿತ ಯುವಕರಿಗೆ ಎಲ್ಲಾ ರೀತಿಯಿಂದ ಸೌಲಭ್ಯ ಕೊಡಲಾಗುವುದು ಎಂದು ಹೇಳಿಯೂ ಕೈಚೆಲ್ಲಿದಾಗ ಆರ್ ಎಸ್ ಎಸ್ ನವರು ಯುವಕರಿಗೆ ಊಟ, ವಸತಿ, ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯನ್ನ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಈ ವ್ಯವಸ್ಥೆಯನ್ನ ನೋಡಿ ಯುವಕರು ಕೂಡಾ ಖುಷಿಯಾಗಿದ್ದಾರೆ.

RSS: ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಬಂದಿದ್ದಾರೆ 72 ಸಾವಿರ ಯುವಕರು! ಊಟ-ವಸತಿ ವ್ಯವಸ್ಥೆ ಮಾಡ್ತಿದೆ ಆರ್​ಎಸ್​ಎಸ್​
ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಬಂದಿದ್ದಾರೆ 72 ಸಾವಿರ ಯುವಕರು! ಅಭ್ಯರ್ಥಿಗಳಿಗೆ ಊಟ-ವಸತಿ ವ್ಯವಸ್ಥೆ ಮಾಡ್ತಿದೆ ಆರ್​ಎಸ್​ಎಸ್​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 14, 2022 | 5:14 PM

ಬೀದರ್ ಜಿಲ್ಲೆಯಲ್ಲಿ ರಾಜ್ಯದ ಮೊದಲ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ ನಡೆಯುತ್ತಿದೆ. ಈ ಸೇನಾ ನೇಮಕಾತಿಗೆ ಆರು ಜಿಲ್ಲೆಯಿಂದ 72 ಸಾವಿರ ಯುವಕರು ಭಾಗವಹಿಸಿದ್ದು ಪ್ರತಿದಿನವು ಐದು ಸಾವಿರ ಯುವಕರು ಭಾಗಿಯಾಗುತ್ತಿದ್ದಾರೆ. ಇಲ್ಲಿಗೆ ಬರುವ ಬಡ ಯುವಕರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನ ರಾಷ್ಟ್ರೀಯ ಸ್ವಯಂ ಸಂಘ (ಆರ್​ಎಸ್​ಎಸ್​ –RSS) ಮಾಡುತ್ತಿದ್ದು ಎಲ್ಲರ ಮೆಚ್ಚುಗೆಗೆ ವ್ಯಕ್ತವಾಗಿದೆ. ಅಗ್ನಿಪಥ್ ಸೇನಾ ನೇಮಕಾತಿಗೆ ಬರುವ ಯುವಕರಿಗೆ ಆರ್​ಎಸ್​ಎಸ್​ ಹಾಗೂ ಎಬಿವಿಪಿ ವತಿಯಿಂದ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ. ರಸ್ತೆಯಲ್ಲಿಯೋ ಅಥವಾ ಬಸ್ ನಿಲ್ದಾಣದ ಬದಿಯಲ್ಲಿ ರಾತ್ರಿ ಕಳೆಯುತ್ತಿದ್ದ ಸೇನಾ ನೇಮಕಾತಿಗೆ ಬಂದಿದ್ದಾರೆ ಯುವಕರು. ಡಿಸೆಂಬರ್ 5 ರಿಂದ ಡಿಸೆಂಬರ್ 22 ವರೆಗೆ ಪ್ರತಿದಿನವೂ 5 ಸಾವಿರ ಯುವಕರಿಗೆ ವಸತಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಗಡಿ ಜಿಲ್ಲೆ ಬೀದರ್ ನಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ (Agnipath Recruitment Rally Bidar 2022 ) ಆಯೋಜಿಸಲಾಗಿದೆ. ಡಿಸೆಂಬರ್ 5 ರಿಂದ 22ರವರೆಗೆ ನಗರದ ನೆಹರು ಕ್ರೀಡಾಂಗಣದಲ್ಲಿ ಈ ರ‍್ಯಾಲಿ ನಡೆಯುತ್ತಿದೆ. ಈ ರ‍್ಯಾಲಿಯಲ್ಲಿ ಒಟ್ಟು 6 ಜಿಲ್ಲೆಗಳ 70,375 ಅಭ್ಯರ್ಥಿಗಳು ಭಾಗವಹಿಸುತ್ತಿದ್ದಾರೆ. ಸಾಮಾನ್ಯ ಕೆಡರ್, ಟೆಕ್ನಿಕಲ್, ಕ್ಲರ್ಕ್, ಹೌಸ್ ಕೀಪರ್, ಬಾರಬರ್, ಕುಕ್ ಸೈನಿಕ (Soldiers) ಹುದ್ದೆಗಳ ನೇಮಕಾತಿಗಾಗಿ (Recruitment) ಈ ರ‍್ಯಾಲಿ (Agnipath Rally) ನಡೆಯುತ್ತಿದೆ. ಬೀದರ ಸೇರಿದಂತೆ ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಿದ್ದಾರೆ.

ಅಗ್ನಿಪಥ್ ಯೋಜನೆಯಡಿ ನಡೆಯುತ್ತಿರುವ ಮೊದಲ ರ‍್ಯಾಲಿ ಇದಾಗಿದ್ದು, ಸಾಮಾನ್ಯ ಕೆಡರ್‌ನ 63,825 ಮತ್ತು ಇತರೆ ಕೆಡರ್‌ಗಳ 6550 ಅಭ್ಯರ್ಥಿಗಳ ರ‍್ಯಾಲಿ ನಡೆಯುತ್ತಿದೆ. ಅಗ್ನಿಪಥ್ ನೇಮಕಾತಿ ರ‍್ಯಾಲಿಯಲ್ಲಿ ಅತಿ ಹೆಚ್ಚು ಬೆಳಗಾವಿ ಜಿಲ್ಲೆಯಿಂದ 50,646 ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಇಲ್ಲಿಗೆ ಬರುವ ಯುವಕರಿಗೆ ವಸತಿ, ಊಟದ ವ್ಯವಸ್ಥೆಯನ್ನ ರಾಷ್ಟ್ರೀಯ ಸ್ವಯಂ ಸಂಘ ವಹಿಸಿಕೊಂಡಿದೆ ಎಂದು ಆರ್ ಎಸ್ ಎಸ್ ಸದಸ್ಯ ಚಂದ್ರಶೇಖರ್ ಪಾಟೀಲ್ ಮಾಹಿತಿ ನೀಡಿದ್ದಾರೆ.

RSS serves food to future soldiers during Agnipath Recruitment Rally 2022 held at Bidar by Belgaum unit

ಡಿಸೆಂಬರ್ 5 ರಿಂದ ಡಿಸೆಂಬರ್ 22 ರವರೆಗೆ ನಡೆಯುವ ಈ ಅಗ್ನಿಪಥ್ ಆರ್ಮಿ ರ‍್ಯಾಲಿಗೆ ಬೀದರ್, ಬೆಳಗಾವಿ, ರಾಯಚೂರು, ಯಾದಗಿರಿ, ಕಲ್ಬರ್ಗಿ, ಕೊಪ್ಪಳ ಜಿಲ್ಲೆಯ ಸುಮಾರು 70 ಸಾವಿರ ಯುವಕರು ಅರ್ಜಿ ಹಾಕಿದ್ದು ಪ್ರತಿ ದಿನವೂ 5 ಸಾವಿರಕ್ಕೂ ಹೆಚ್ಚು ಯುವಕರು ಆರ್ಮಿ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿಗೆ ಬರುವ ಯುವಕರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನ ಕಲ್ಪಸಲಾಗಿದೆ. ಮೂರು ದಿನದಿಂದ ಆರಂಭವಾದ ಉಚಿತ ಊಟ ಹಾಗೂ ಉಪಹಾರ ವ್ಯವಸ್ಥೆ ಡಿಸೆಂಬರ್ 22 ರವರೆಗೆ ನಿರಂತರವಾಗಿ ನಡೆಯಲಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಡೆಸುತ್ತಿರುವ ಈ ಕಾರ್ಯಕ್ಕೆ ಕೆಲವು ದಾನಿಗಳು ಕೂಡಾ ಕೈ ಜೋಡಿಸುತ್ತಿದ್ದು ತಮ್ಮ ಕೈಲಾದಷ್ಟು ಹಣವನ್ನ ತಂದು ಕೊಡುತ್ತಿದ್ದಾರೆ. ಬೀದರ್ ನಿವಾಸಿ ಲಲಿತಮ್ಮ ಅವರು ಕೂಡಾ ತಮ್ಮ ಕೈಲಾದಷ್ಟು ಹಣವನ್ನ ಕೊಟ್ಟು ಪ್ರೋತ್ಸಾಹಿಸಿದ್ದಾರೆ. ದೇಶ ಸೇವೆ ಮಾಡಬೇಕು ಎಂದು ಹುಮ್ಮಸಿನಲ್ಲಿ ಸೇನಾ ನೇಮಕಾತಿ ರ‍್ಯಾಲಿಗೆ ಬರುವ ಯುವಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನ ತಯಾರಿಸಿ ಬಡಿಸಲಾಗುತ್ತಿದೆ.

ಇದನ್ನೂ ಓದಿ: ಪದವೀಧರ ಶಿಕ್ಷಕರ ಆಯ್ಕೆ: ಜಾತಿ, ಆದಾಯ ಪತ್ರ ಗೊಂದಲದಿಂದ ಅರ್ಹತೆಯಿದ್ದರೂ 2 ಸಾವಿರ ಮಹಿಳೆಯರಿಗೆ ಉದ್ಯೋಗ ಭಾಗ್ಯವಿಲ್ಲ!

ಮುಂಜಾನೆ ಉಪಹಾರ, ಮಧ್ಯಾಹ್ನ ಅನ್ನ ಸಾಂಬರ್ ರಾತ್ರಿ ವೇಳೆಯಲ್ಲಿ ಪಲಾವ್ ಮತ್ತು ಸಾಂಬಾರ್ ಕೊಡುತ್ತಿದ್ದು ಯುವಕರಿಗೆ ಕೂಡಾ ಇದು ಇಷ್ಟವಾಗಿದೆ. ಬೇರೆ ಬೇರೆ ಜಿಲ್ಲೆಗೆ ಆರ್ಮಿ ರ‍್ಯಾಲಿಗೆ ಹೋಗಿದ್ದ ಯುವಕರು ಇಲ್ಲಿನ ವ್ಯವಸ್ಥೆಯನ್ನ ನೋಡಿ ಖುಷಿ ಪಡುತ್ತಿದ್ದು ಆರ್ ಎಸ್ ಎಸ್ ಸಂಘಕ್ಕೆ ಧನ್ಯವಾದ ಹೇಳುತ್ತಿದ್ದಾರೆ.

ಜಿಲ್ಲಾಡಳಿತ ಯುವಕರಿಗೆ ಎಲ್ಲಾ ರೀತಿಯಿಂದ ಸೌಲಭ್ಯ ಕೊಡಲಾಗುವುದು ಎಂದು ಹೇಳಿಯೂ ಕೈಚೆಲ್ಲಿದಾಗ ಆರ್ ಎಸ್ ಎಸ್ ನವರು ಯುವಕರಿಗೆ ಊಟ, ವಸತಿ, ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯನ್ನ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಇಲ್ಲಿನ ವ್ಯವಸ್ಥೆಯನ್ನ ನೋಡಿ ಯುವಕರು ಕೂಡಾ ಖುಷಿ ಖುಷಿಯಿಂದಲೇ ರ‍್ಯಾಲಿ ಮುಗುಸಿಕೊಂಡು ತಮ್ಮ ತಮ್ಮ ಜಿಲ್ಲೆಗೆ ವಾಪಸ್ಸಾಗುತ್ತಿದ್ದಾರೆ.

ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್

ಉದ್ಯೋಗ/ ನೇಮಕಾತಿ ಸಂಬಂಧ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Wed, 14 December 22

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್