Monsoon 2021: ನಾಳೆ ಭಾರತದ ದಕ್ಷಿಣ ಕರಾವಳಿ ಪ್ರವೇಶಿಸಲಿದೆ ನೈಋತ್ಯ ಮುಂಗಾರು; ಹವಾಮಾನ ಇಲಾಖೆ ವರದಿ

ದೇಶದಲ್ಲಿ ಅರ್ಧದಷ್ಟು ಕೃಷಿಭೂಮಿಗೆ ನೀರಾವರಿ ಸೌಕರ್ಯ ಇಲ್ಲ. ಭತ್ತ, ಕಬ್ಬು, ಜೋಳ, ಹತ್ತಿ ಮತ್ತು ಸೋಯಾಬಿನ್ ಬೆಳೆಗಾರರು ಈ ಜೂನ್​ ಮತ್ತು ಸೆಪ್ಟೆಂಬರ್​ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ.

Monsoon 2021: ನಾಳೆ ಭಾರತದ ದಕ್ಷಿಣ ಕರಾವಳಿ ಪ್ರವೇಶಿಸಲಿದೆ ನೈಋತ್ಯ ಮುಂಗಾರು; ಹವಾಮಾನ ಇಲಾಖೆ ವರದಿ
ಮುಂಗಾರು ಪ್ರವೇಶದ ಪ್ರಾತಿನಿಧಿಕ ಚಿತ್ರ

Updated on: May 30, 2021 | 4:09 PM

ದೆಹಲಿ: ನೈಋತ್ವ ಮಾನ್ಸೂನ್​​ ನಾಳೆ (ಮೇ 31) ದೇಶದ ದಕ್ಷಿಣ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈಋತ್ವ ಮುಂಗಾರು ಪ್ರಾರಂಭಕ್ಕೆ ನಾಳೆ ಕೇರಳದಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಬಹುದು ಎಂದು ವರದಿ ನೀಡಿದೆ. ಹಾಗೇ ದಕ್ಷಿಣದಿಂದ ಬೀಸುವ ಬಲವಾದ ಗಾಳಿಯಿಂದ ದೆಹಲಿ ಸೇರಿ.. ಈಶಾನ್ಯ ರಾಜ್ಯಗಳಲ್ಲಿ ಸಿಕ್ಕಾಪಟೆ ಮಳೆಯಾಗುವ ಸಾಧ್ಯತೆ ಇರುವುದಾಗಿಯೂ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರೈತರ ಪಾಲಿಗೆ ಈ ನೈಋತ್ಯ ಮುಂಗಾರು ಮಳೆ ಜೀವನಾಡಿಯಾಗಿದೆ. ದೇಶದಲ್ಲಿ ಅರ್ಧದಷ್ಟು ಕೃಷಿಭೂಮಿಗೆ ನೀರಾವರಿ ಸೌಕರ್ಯ ಇಲ್ಲ. ಭತ್ತ, ಕಬ್ಬು, ಜೋಳ, ಹತ್ತಿ ಮತ್ತು ಸೋಯಾಬಿನ್ ಬೆಳೆಗಾರರು ಈ ಜೂನ್​ ಮತ್ತು ಸೆಪ್ಟೆಂಬರ್​ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ. ಮುಂಗಾರು ವಿಳಂಬವಾದಷ್ಟೂ ಅವರಿಗೆ ತೊಂದರೆ ತಪ್ಪಿದ್ದಲ್ಲ.

ಈ ವರ್ಷ ವಾಡಿಕೆಯಂತೆ ಸಾಮಾನ್ಯ ಮುಂಗಾರು ಮಳೆ ಆಗಲಿದೆ ಎಂಬ ನಿರೀಕ್ಷೆ ಇರುವುದಾಗಿ ಕಳೆದ ತಿಂಗಳು ಹವಾಮಾನ ಇಲಾಖೆ ಹೇಳಿತ್ತು. ಇದು ಭಾರತದ ಆರ್ಥಿಕತೆ ಪ್ರಮುಖ ಮೂಲವಾಗಿರುವ ಕೃಷಿಗೆ ಪೂರಕವಾಗಿದೆ. ಇನ್ನು ಈ ವರ್ಷ ಪ್ರಾರಂಭವಾದ ಮೇಲೆ ಈಗಾಗಲೇ 2 ಚಂಡಮಾರುತಗಳು ಎದ್ದಿದ್ದು, ಅವುಗಳ ಪ್ರಭಾವದಿಂದ ದೇಶದ ಬಹುತೇಕ ಕಡೆ ಪ್ರತಿದಿನ ಮಳೆಯಾಗುತ್ತಲೇ ಇದೆ.

ಇದನ್ನೂ ಓದಿ: ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣ; ಆರೋಪಿಗಳಿಂದ ತಪ್ಪೊಪ್ಪಿಗೆ