Corona Virus: ಕೊರೊನಾ ಬಗ್ಗೆ ಜಾಗೃತಿ ಮೂಡಿಸುವಂತೆ ಖಾಸಗಿ ವಾಹಿನಿಗಳಿಗೆ ಸೂಚಿಸಿದ ಕೇಂದ್ರ
ನಾಗರಿಕರ ಅನುಕೂಲಕ್ಕಾಗಿ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳನ್ನು ಸಹ ರಚಿಸಲಾಗಿದೆ ಮತ್ತು ಪ್ರಚಾರ ಮಾಡಿದೆ ಎಂದು ಸರ್ಕಾರದ ಸಲಹೆಯಲ್ಲಿ ತಿಳಿಸಲಾಗಿದೆ.

ದೆಹಲಿ: ಕೊವಿಡ್ -19 ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರದ ಜೊತೆಗೆ ಕೈಜೋಡಿಸುವಂತೆ ಖಾಸಗಿ ಟೆಲಿವಿಷನ್ ಚಾನಲ್ಗಳನ್ನು ಕೇಂದ್ರ ಸರ್ಕಾರ ಕೋರಿದೆ. ಕೇಂದ್ರವು ಭಾನುವಾರ ಖಾಸಗಿ ಟೆಲಿವಿಷನ್ ಚಾನೆಲ್‌ಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ನಾಲ್ಕು ರಾಷ್ಟ್ರಮಟ್ಟದ ಸಹಾಯವಾಣಿ ಸಂಖ್ಯೆಗಳನ್ನು ವಾಹಿನಿಯಲ್ಲಿ ಪ್ರದರ್ಶಿಸುವ ಮೂಲಕ ಕೊವಿಡ್ ಟ್ರೀಟ್ಮೆಂಟ್ ಪ್ರೋಟೋಕಾಲ್, ಸೂಕ್ತವಾದ ನಡವಳಿಕೆ ಮತ್ತು ವ್ಯಾಕ್ಸಿನೇಷನ್ ಎಂಬ ಮೂರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಬಯಸಿದೆ ಎಂದು ತಿಳಿಸಿದ್ದಾರೆ.
ಕಳೆದ ಹಲವಾರು ತಿಂಗಳುಗಳಿಂದ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲು ಸರ್ಕಾರವು ಮುದ್ರಣ, ಟಿವಿ, ರೇಡಿಯೋ, ಸೋಷಿಯಲ್ ಮೀಡಿಯಾ ಸೇರಿದಂತೆ ವಿವಿಧ ಉಪಕರಣಗಳು ಮತ್ತು ಮಾಧ್ಯಮ ವೇದಿಕೆಗಳನ್ನು ಬಳಸಿಕೊಳ್ಳುತ್ತಿದೆ. ನಾಗರಿಕರ ಅನುಕೂಲಕ್ಕಾಗಿ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳನ್ನು ಸಹ ರಚಿಸಲಾಗಿದೆ ಮತ್ತು ಪ್ರಚಾರ ಮಾಡಿದೆ ಎಂದು ಸರ್ಕಾರದ ಸಲಹೆಯಲ್ಲಿ ತಿಳಿಸಲಾಗಿದೆ.
ಈ ಕೆಲಸವನ್ನು ಮತ್ತಷ್ಟು ಹೆಚ್ಚಿಸಲು, ಖಾಸಗಿ ಟಿವಿ ಚಾನೆಲ್‌ಗಳು ಈ ಕೆಳಗಿನ ನಾಲ್ಕು ರಾಷ್ಟ್ರೀಯ ಮಟ್ಟದ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಟಿಕ್ಕರ್ ಮೂಲಕ ಅಥವಾ ನಿಯತಕಾಲಿಕಗಳಲ್ಲಿ, ಹಾಗೂ ದೂರದರ್ಶನದಲ್ಲಿ ವಿಶೇಷವಾಗಿ ಪ್ರಧಾನ ಸಮಯದಲ್ಲಿ ಈ ಸಂಖ್ಯೆಗಳನ್ನು ಪ್ರದರ್ಶಿಸುವ ಮೂಲಕ ಇನ್ನಷ್ಟು ಜಾಗೃತಿ ಮೂಡಿಸಲು ಸೂಚಿಸಲಾಗಿದೆ.
ಸರ್ಕಾರ ನೀಡಿರುವ ನಾಲ್ಕು ಸಹಾಯವಾಣಿ ಸಂಖ್ಯೆಗಳು ಹೀಗಿದೆ: – 1075 (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ) – 1098 (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಹಾಯವಾಣಿ ಸಂಖ್ಯೆ) – 14567 (ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಹಿರಿಯ ನಾಗರಿಕರ ಸಹಾಯವಾಣಿ) – 08046110007 (ಮಾನಸಿಕ ಬೆಂಬಲಕ್ಕಾಗಿ NIMHANS ನ ಸಹಾಯವಾಣಿ ಸಂಖ್ಯೆ)
#IndiaFightsCorona @MIB_India has issued a #COVID19 advisory to all the private TV channels to promote awareness of the following four national level helpline nos.
1075 : @MoHFW_INDIA 1098 : @MinistryWCD 14567 : @MSJEGOI 08046110007 : NIMHANS for psychological support pic.twitter.com/VYrhbJkD0e
— #IndiaFightsCorona (@COVIDNewsByMIB) May 30, 2021
ಮಾರ್ಚ್ ತಿಂಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಎಲೆಕ್ಟ್ರಾನಿಕ್ ಮಾಧ್ಯಮದೊಂದಿಗೆ ಸಂವಾದ ನಡೆಸಿದ್ದರು. ಟೆಲಿವಿಷನ್ ಚಾನೆಲ್‌ಗಳು ವೈಜ್ಞಾನಿಕ ವರದಿಗಳನ್ನು ಪ್ರಸಾರ ಮಾಡಲು, ತಿಳುವಳಿಕೆಯುಳ್ಳ ಜನರನ್ನು ತಮ್ಮ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ಎದುರಿಸಲು ಹಾಗೂ ಕೊರೊನಾ ತಡೆಯಲು ಮಾರ್ಗಸೂಚಿಗಳ ಮಹತ್ವವನ್ನು ಎತ್ತಿ ತೋರಿಸುವಂತೆ ಕೇಳಿಕೊಂಡಿದ್ದರು.
ಕೊವಿಡ್ -19 ರ ಸುತ್ತ ತಪ್ಪು ಮಾಹಿತಿಯ ಹರಡುವಿಕೆಯನ್ನು ನಿಲ್ಲಿಸುವುದು ಮತ್ತು ಅದರ ಸುತ್ತಲಿನ ಸುಳ್ಳುಗಳನ್ನು ಬಹಿರಂಗಪಡಿಸುವುದು ಕೇಂದ್ರ ಸರ್ಕಾರದ ಆದ್ಯತೆಗಳಾಗಿವೆ. ಕೇಂದ್ರ ಸರ್ಕಾರದ ಟ್ವಿಟರ್ ಹ್ಯಾಂಡಲ್ ಪಿಐಬಿಫ್ಯಾಕ್ಟ್ ಚೆಕ್ ಮೂಲಕ ಈ ಬಗ್ಗೆ ಹೋರಾಡಲಾಗುತ್ತಿದೆ.
ಇದನ್ನೂ ಓದಿ: ಕೊರೊನಾ ಸೋಂಕಿತನ ಮೃತದೇಹವನ್ನು ನದಿಗೆ ಎಸೆದು ಹೋದ ಸಂಬಂಧಿಕರು; ವೈರಲ್ ವಿಡಿಯೋ ನೋಡಿ ಪ್ರಕರಣ ದಾಖಲು
ಭಾರತ ಇತರೆ ರಾಷ್ಟ್ರಗಳ ಆಲೋಚನೆ ಮತ್ತು ಒತ್ತಡಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿಲ್ಲ -ಮೋದಿ
Published On - 5:44 pm, Sun, 30 May 21