ಹಿಂಸಾಚಾರಕ್ಕೆ ತಿರುಗಿದ ಕೌಟುಂಬಿಕ ಕಲಹ; ಮನೆಯ ಛಾವಣಿ ಕುಸಿದು 10 ಜನರ ಸ್ಥಿತಿ ಗಂಭೀರ
ಮಹಾರಾಷ್ಟ್ರದ ಭಿವಾಂಡಿಯ ದೇನೆನಗರದಲ್ಲಿ ಎರಡು ಕುಟುಂಬಗಳ ನಡುವಿನ ಹಿಂಸಾತ್ಮಕ ವಾಗ್ವಾದ ತಾರಕಕ್ಕೇರಿದ್ದು, ಮನೆಯ ಛಾವಣಿ ಕುಸಿದು 10 ಜನರು ಕೆಳಗಿನ ಮಹಡಿಯೊಳಗೆ ಉರುಳಿಬಿದ್ದಿದ್ದಾರೆ. ಈ ಘಟನೆಯಿಂದ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎರಡೂ ಕುಟುಂಬಗಳು ಪರಸ್ಪರ ವಿರುದ್ಧ ಕಾನೂನು ದೂರು ದಾಖಲಿಸಿದ್ದು, ಪೊಲೀಸ್ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಭಿವಾಂಡಿ, ಏಪ್ರಿಲ್ 4: ಮಹಾರಾಷ್ಟ್ರದ (Maharashtra) ಥಾಣೆಯ ಭಿವಾಂಡಿಯ ದೇನೆನಗರದಲ್ಲಿ 2 ಕುಟುಂಬಗಳ ನಡುವಿನ ಹಿಂಸಾತ್ಮಕ ಹಲ್ಲೆಯಿಂದಾಗಿ ಮನೆಯ ಛಾವಣಿ ಕುಸಿದು ಬಿದ್ದಿದೆ. ಇದರಿಂದ ಮೇಲಿನ ಮಹಡಿಯಿಂದ ಕೆಳಗಿನ ಮಹಡಿಯೊಳಗೆ 10 ಜನರು ಉರುಳಿಬಿದ್ದಿದ್ದಾರೆ. ಸಣ್ಣ ವಿವಾದವೊಂದು ದೊಡ್ಡ ಪ್ರಮಾಣದ ಜಗಳವಾಗಿ ಬೆಳೆದ ನಂತರ ನಡೆದ ಈ ಆಘಾತಕಾರಿ ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಟಿವಿ 9 ವರದಿಯ ಪ್ರಕಾರ, ಮೊಯಿನುದ್ದೀನ್ ನಸ್ರುದ್ದೀನ್ ಶೇಖ್ ಮತ್ತು ನಸ್ರುದ್ದೀನ್ ಇಮಾಮುದ್ದೀನ್ ಶೇಖ್ ಅವರ ಕುಟುಂಬಗಳ ನಡುವಿನ ಫೋನ್ ಕರೆಯಲ್ಲಿ ನಡೆದ ಮಾತಿನ ಚಕಮಕಿಯಿಂದ ಘರ್ಷಣೆ ಪ್ರಾರಂಭವಾಯಿತು. ಮಾತಿನ ಚಕಮಕಿಯಾಗಿ ಆರಂಭವಾದ ಈ ಘಟನೆ, ನಂತರ ಹಲ್ಲೆಗೆ ತಿರುಗಿ, ಎರಡೂ ಕುಟುಂಬಗಳು ನೆರೆಮನೆಯವರ ಮನೆಯ ಛಾವಣಿಗೆ ಮೇಲೆ ನಿಂತು ಜಗಳವಾಡಿದರು. ಘರ್ಷಣೆ ತೀವ್ರಗೊಳ್ಳುತ್ತಿದ್ದಂತೆ ಇದ್ದಕ್ಕಿದ್ದಂತೆ ಮನೆಯ ಛಾವಣಿ ಕುಸಿದು ಬಿದ್ದ ಕಾರಣ 10 ಜನರು ನೆಲಕ್ಕೆ ಬಿದ್ದರು. ಅವರ ಮೇಲೆ ಫ್ಲೋರ್ನ ಅವಶೇಷಗಳು ಬಿದ್ದವು.
Shocking incident in Bhiwandi! A fight between two families on a rooftop turned disastrous as the floor collapsed, causing several people to fall. All sustained serious injuries. Police are investigating. #Bhiwandi #Accident #ViralVideo pic.twitter.com/U9J41wAw69
— Mayuresh Ganapatye (@mayuganapatye) April 4, 2025
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಕಾರ್ಬನ್ ಮಾನಾಕ್ಸೈಡ್ ಉಸಿರಾಡಿ 27 ವರ್ಷದ ವ್ಯಕ್ತಿ ಆತ್ಮಹತ್ಯೆ
ಈ ಘಟನೆಯ ನಂತರ, ಎರಡೂ ಕುಟುಂಬಗಳ ಸದಸ್ಯರು ಛಾವಣಿ ಕುಸಿತದಿಂದ ಉಂಟಾದ ಹಾನಿಗೆ ಮನೆ ಮಾಲೀಕರಿಗೆ ಪರಿಹಾರ ನೀಡಲು ಒಪ್ಪಿಕೊಂಡರು. ಆದರೆ, ಎರಡೂ ಕುಟುಂಬಗಳು ಪರಸ್ಪರ ವಿರುದ್ಧ ಕಾನೂನು ದೂರು ದಾಖಲಿಸಿವೆ ಮತ್ತು ಪೊಲೀಸ್ ಅಧಿಕಾರಿಗಳು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ