ದೆಹಲಿ: ಮುಂಗಾರುಶನಿವಾರದ ವೇಳೆಗೆ ದಕ್ಷಿಣ ಅರಬ್ಬೀ ಸಮುದ್ರದ ಉಳಿದ ಭಾಗಗಳು, ಮಧ್ಯ ಅರಬ್ಬೀ ಸಮುದ್ರದ ಕೆಲವು ಭಾಗಗಳು ಮತ್ತು ಕೇರಳ ಮತ್ತು ಲಕ್ಷದ್ವೀಪದ ಉಳಿದ ಭಾಗಗಳಿಗೆ ಬರುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಇದು ತಮಿಳುನಾಡು ಮತ್ತು ಪುದುಚೇರಿಯ ಕೆಲವು ಭಾಗಗಳನ್ನು, ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ಕೆಲವು ಭಾಗಗಳನ್ನು, ರಾಯಲಸೀಮವನ್ನು ಮತ್ತು ದಕ್ಷಿಣ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳನ್ನು ಇಂದು ಮತ್ತು ನಾಳೆ ತಲುಪುವ ಸಾಧ್ಯತೆ ಇದೆ.
ಗುರುವಾರ ಕೇರಳದಲ್ಲಿ ಮುಂಗಾರು ಶುರು ಆಗಿದ್ದು ವಾಡಿಕೆಗಿಂತ ಎರಡು ದಿನ ವಿಳಂಬವಾಗಿ ತಲುಪಿದೆ. ನೈಋತ್ಯ ಮಾರುತಗಳ ಬಲದಿಂದಾಗಿ, ಮುಂದಿನ ಐದು ದಿನಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಮಳೆಯ ಕಂಡುಬರಲಿದೆ. ಜೂನ್ 4 ರಿಂದ 6 ರವರೆಗೆ ಅರುಣಾಚಲ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಜೂನ್ 3 ರಿಂದ 7 ರವರೆಗೆ ಅಸ್ಸಾಂ ಮತ್ತು ಮೇಘಾಲಯ ಮತ್ತು ಜೂನ್ 5 ಮತ್ತು 6 ರಂದು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮಳೆಯಾಗಲಿದೆ .
Southwest monsoon remained active over Kerala. Rain occurred at most places in Kerala and Lakshadweep during past 24 hours ending at 0830 hrs IST of today. 1/4
— India Meteorological Department (@Indiametdept) June 4, 2021
ಮುಂದಿನ 2-3 ದಿನಗಳಲ್ಲಿ ಪಶ್ಚಿಮ ಹಿಮಾಲಯನ್ ಪ್ರದೇಶದ ಕೆಲವು ಭಾಗಗಳಲ್ಲಿ ಮತ್ತು ವಾಯುವ್ಯ ಭಾರತದ ಪಕ್ಕದ ಬಯಲು ಪ್ರದೇಶಗಳಲ್ಲಿ ಚಂಡಮಾರುತ, ಮಿಂಚು ಮತ್ತು ಗಾಳಿಯಿಂದ ಕೂಡಿದ ಮಳೆಯಾಗಲಿದೆ.
In view of intense to very intense convection, light to moderate rainfall at most places with isolated heavy rainfall is very likely over Kerala during the next 12 hours.
Latest Satellite and Kochi Radar images attached here. pic.twitter.com/COGw7AIFBt— India Meteorological Department (@Indiametdept) June 3, 2021
ಕರ್ನಾಟಕ-ಕೇರಳ ಕರಾವಳಿಯ ಸರಾಸರಿ ಸಮುದ್ರ ಮಟ್ಟದಲ್ಲಿ ಕಡಿಮೆ ಒತ್ತಡದ ಪ್ರದೇಶ ಮತ್ತು ಕಡಿಮೆ ಉಷ್ಣವಲಯದ ಮಟ್ಟದಲ್ಲಿ ಪಶ್ಚಿಮ ಗಾಳಿಯನ್ನು ಬಲಗೊಳ್ಳಲಿದ್ದುಗುಡುಗು, ಮಿಂಚು ಮತ್ತು ಗಾಳಿಯೊಂದಿಗೆ ವ್ಯಾಪಕ ಮಳೆ ಸಾಧ್ಯತೆ ಇದೆ. ಮುಂದಿನ 3 ದಿನಗಳಲ್ಲಿ ಕೇರಳ ಮತ್ತು ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Monsoon Diet Tips: ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಒಂದಿಷ್ಟು ಟಿಪ್ಸ್
Published On - 11:13 am, Fri, 4 June 21