Monsoon 2022: ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ನಲ್ಲಿ ಮಳೆಯ ಆರ್ಭಟದಿಂದ 18 ಜನ ಸಾವು
ಗುಜರಾತ್ನಲ್ಲಿ ಭಾರೀ ಮಳೆಯಿಂದ ಕಳೆದ 24 ಗಂಟೆಗಳಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಒಟ್ಟು 27,896 ಜನರನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ 18,225 ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಒದಗಿಸಲಾಗಿದೆ.
ಮುಂಬೈ: ಉತ್ತರ ಭಾರತದ ಮಹಾರಾಷ್ಟ್ರ (Maharashtra Rains), ಗುಜರಾತ್ (Gujarat Rain) ಮತ್ತು ಮಧ್ಯಪ್ರದೇಶದಲ್ಲಿ (Madhya Pradesh Rain) ಮಳೆಯ ಆರ್ಭಟ ಹೆಚ್ಚಾಗಿದೆ. ವರುಣನ ಆರ್ಭಟದಿಂದ ಈ ಮೂರು ರಾಜ್ಯಗಳಲ್ಲಿ ಈ ತಿಂಗಳಲ್ಲಿ 6 ಮಕ್ಕಳು ಸೇರಿದಂತೆ ಒಟ್ಟು 18 ಜನರು ಸಾವನ್ನಪ್ಪಿದ್ದಾರೆ. ಈಗಾಗಲೇ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) 13 ತಂಡಗಳು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಮೂರು ತಂಡಗಳನ್ನು ಈ ಮೂರು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ, ನಾಲ್ವರು ಗಾಯಗೊಂಡಿದ್ದಾರೆ. ಗುಜರಾತ್ನಲ್ಲಿ ಭಾರೀ ಮಳೆಯಿಂದ ಕಳೆದ 24 ಗಂಟೆಗಳಲ್ಲಿ 6 ಜನರು ಸಾವನ್ನಪ್ಪಿದ್ದಾರೆ. ಜೂನ್ 1ರಿಂದ ಇಲ್ಲಿಯವರೆಗೆ ಮಳೆ ಸಂಬಂಧಿತ ಸಾವಿನ ಸಂಖ್ಯೆ 69ಕ್ಕೆ ಏರಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಒಟ್ಟು 27,896 ಜನರನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ 18,225 ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಒದಗಿಸಲಾಗಿದೆ.
Fate of Ahmedabad after 25 yrs of BJP rule.. Houses were surrounded with rain water due to lack of drainage system#Ahmedabad#Gujarat pic.twitter.com/FCiQMtgq4r
— Syed Z?? (@syed_zakir_1947) July 12, 2022
ದಕ್ಷಿಣ ಗುಜರಾತ್‌ನ ನರ್ಮದಾ, ಸೂರತ್, ಡ್ಯಾಂಗ್, ವಲ್ಸಾದ್ ಮತ್ತು ತಾಪಿ ಜಿಲ್ಲೆಗಳು ಮತ್ತು ರಾಜ್ಯದ ಮಧ್ಯ ಭಾಗದ ಪಂಚಮಹಲ್ ಮತ್ತು ಛೋಟಾ ಉದೇಪುರದಲ್ಲಿ ಕಳೆದ ಒಂದು ದಿನದಿಂದ ಭಾರೀ ಮಳೆಯಾಗುತ್ತಿದೆ. ಸೌರಾಷ್ಟ್ರ ಪ್ರದೇಶದ ವಲ್ಸಾದ್, ನವಸಾರಿ, ಸೂರತ್, ತಾಪಿ, ಡ್ಯಾಂಗ್, ನರ್ಮದಾ, ಛೋಟಾ ಉದೇಪುರ್ ಜಿಲ್ಲೆಗಳು ಹಾಗೂ ಕಚ್, ರಾಜ್‌ಕೋಟ್, ಜಾಮ್‌ನಗರ್, ದೇವಭೂಮಿ ದ್ವಾರಕಾ ಮತ್ತು ಮೊರ್ಬಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ.
#WATCH | Gujarat: Heavy rain causes a flood-like situation in Rajkot. Residents living in the lower reaches have been asked to remain alert. pic.twitter.com/TBg5SFG3Jm
— ANI (@ANI) July 12, 2022
ಇದನ್ನೂ ಓದಿ: Karnataka Rain: ಜುಲೈ 14ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಮಳೆ, ಶಾಲೆಗಳಿಗೆ ರಜೆ; ಕರಾವಳಿಗೆ ರೆಡ್ ಅಲರ್ಟ್ ಘೋಷಣೆ
ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮುಂದುವರಿದಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಮೂವರು ಮಕ್ಕಳು ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ. 95 ಜನರನ್ನು ಪ್ರವಾಹದ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ. ಮುಂದಿನ ಮೂರು ದಿನಗಳ ಕಾಲ ನಾಸಿಕ್, ಪಾಲ್ಘರ್ ಮತ್ತು ಪುಣೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡಿದೆ. ಮಳೆಯಿಂದಾಗಿ ನಾಸಿಕ್ ನಗರದಲ್ಲಿ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಅಲ್ಲಿನ ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಆದೇಶಿಸಲಾಗಿದೆ.
#WATCH | Maharashtra: Various temples submerge under the Godavari river in Nashik, due to incessant rain for the past three days pic.twitter.com/AvAr7JYoYE
— ANI (@ANI) July 11, 2022
ಮುಂದಿನ ಮೂರು ದಿನಗಳಲ್ಲಿ ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ ಗುಡುಗು ಸಹಿತ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಕೇಂದ್ರ (ಐಎಂಡಿ) ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.
#WATCH | Maharashtra: Mumbai wakes up to rain lashing several parts of the city. pic.twitter.com/kzloDbqplN
— ANI (@ANI) July 12, 2022
ಛತ್ತೀಸ್‌ಗಢ, ವಿದರ್ಭ, ಮಧ್ಯಪ್ರದೇಶ, ಒಡಿಶಾ, ಮಹಾರಾಷ್ಟ್ರ, ಗುಜರಾತ್ ರಾಜ್ಯ, ಕೇರಳ ಮತ್ತು ಮಾಹೆ, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ರಾಜ್ಯಗಳಲ್ಲಿ ಮುಂದಿನ 4 ರಿಂದ 5 ದಿನಗಳವರೆಗೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜುಲೈ 15 ಮತ್ತು ಜುಲೈ 16ರಂದು ಕೊಂಕಣ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಮಳೆಯಾಗಲಿದೆ. ಜುಲೈ 14ರಂದು ಗುಜರಾತ್ನಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ