Karnataka Rain: ಆಗುಂಬೆ ಘಾಟ್​ನ 11ನೇ ತಿರುವಿನಲ್ಲಿ ಗುಡ್ಡ ಕುಸಿತ: ಬದಲಿ ಮಾರ್ಗ ಸೂಚಿಸಿದ ಜಿಲ್ಲಾಡಳಿತ

ಆಗುಂಬೆ ಘಾಟ್​ನ 11ನೇ ತಿರುವಿನಲ್ಲಿ ಗುಡ್ಡ ಕುಸಿದಿರುವ ಹಿನ್ನೆಲೆ, ಜಿಲ್ಲಾಡಳಿತ ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಸೂಚಿಸಿದೆ.

Karnataka Rain: ಆಗುಂಬೆ ಘಾಟ್​ನ 11ನೇ ತಿರುವಿನಲ್ಲಿ ಗುಡ್ಡ ಕುಸಿತ: ಬದಲಿ ಮಾರ್ಗ ಸೂಚಿಸಿದ ಜಿಲ್ಲಾಡಳಿತ
ಆಗುಂಬೆ ಘಾಟ್​ನಲ್ಲಿ ಗುಡ್ಡ ಕುಸಿತ
Follow us
TV9 Web
| Updated By: ವಿವೇಕ ಬಿರಾದಾರ

Updated on:Jul 10, 2022 | 7:59 PM

ಶಿವಮೊಗ್ಗ: ಆಗುಂಬೆ (Agumbe) ಘಾಟ್​ನ 11ನೇ ತಿರುವಿನಲ್ಲಿ ಗುಡ್ಡ ಕುಸಿದಿರುವ ಹಿನ್ನೆಲೆ, ಜಿಲ್ಲಾಡಳಿತ ವಾಹನ (Vehicle) ಸಂಚಾರಕ್ಕೆ ಬದಲಿ ಮಾರ್ಗವನ್ನು ಸೂಚಿಸಿದೆ. ಭೂ ಕುಸಿತದ ಮಣ್ಣು ಮತ್ತು ಮರಮಟ್ಟುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲಾ ರೀತಿಯ ವಾಹನ ಸಂಚಾರವನ್ನು ಜುಲೈ 12ರ ಮುಂಜಾನೆ 8ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಜುಲೈ 12ರ ಬಳಿಕ  ಜುಲೈ 30ರವರೆಗೆ ಈ ಮಾರ್ಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಬದಲಿ ಮಾರ್ಗ ಇಲ್ಲಿದೆ

1. ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಕಾರ್ಕಳ-ಮಂಗಳೂರು

2. ತೀರ್ಥಹಳ್ಳಿ-ಆಗುಂಬೆ-ಶೃಂಗೇರಿ-ಕಾರ್ಕಳ-ಮಂಗಳೂರು

3. ತೀರ್ಥಹಳ್ಳಿ-ಮಾಸ್ತಿಕಟ್ಟೆ- ಕುಂದಾಪುರ ಮಾರ್ಗವನ್ನು ವಾಹನ ಸಂಚಾರಕ್ಕೆ ಬಳಸುವಂತೆ ಜಿಲ್ಲಾದಿಕಾರಿ ಸೂಚನೆ ನೀಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ; ಪ್ರವಾಹ ಪೀಡಿತ ಗ್ರಾಮಗಳಿಗೆ ಡಿಸಿ ಭೇಟಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಕೋಟ ಭಾಗದಲ್ಲಿ ಪ್ರವಾಹ ಪೀಡಿತ ಬನ್ನಾಡಿ, ಉಪ್ಲಾಡಿ, ಬೆಟ್ಲಕ್ಕಿ ಗ್ರಾಮಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಭೇಟಿ ನೀಡಿದ್ದಾರೆ. ಧಾರಾಕಾರ ಮಳೆಯಿಂದಾಗಿ ರಾಜ್ಯ ಹೆದ್ದಾರಿ ಭಾಗಶಃ ಮುಳುಗಡೆಯಾಗಿದೆ. ಮಡಿವಾಳ ಸಾಲು ಹೊಳೆ  ತುಂಬಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ನೆರೆ ಉಂಟಾಗಿದೆ.

ನೆರೆ ನೀರಿನಲ್ಲಿ ಲಕ್ಷಗಟ್ಟಲೆ ಬೆಲೆಬಾಳುವ ಅಂತರಗಂಗೆ ಗಿಡ ತೇಲಿ ಬಂದಿರುತ್ತಿವೆ. ಪ್ರವಾಹದಿಂದಾಗಿ ಪರಿಸರ ಕೃಷಿ ಭೂಮಿ ಸಂಪೂರ್ಣ ನಾಶವಾಗಿದೆ. ಹೀಗಾಗಿ ಗ್ರಾಮಸ್ಥರು ಮಳೆಗಾಲದಲ್ಲಿ ಆಗುವ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್​ಗೆ ಮನವಿ ಮಾಡಿದ್ದಾರೆ.

Published On - 6:08 pm, Sun, 10 July 22