Monsoon 2024: ಮೇ 31ರಂದು ಕೇರಳ ಪ್ರವೇಶಿಸಲಿದೆ ನೈಋತ್ಯ ಮುಂಗಾರು

|

Updated on: May 22, 2024 | 11:59 AM

ಎಲ್ಲಾ ರಾಜ್ಯಗಳು ಮುಂಗಾರು ಆಗಮನವನ್ನೇ ಎದುರು ನೋಡುತ್ತಿವೆ. ನೈಋತ್ಯ ಮುಂಗಾರು ಮೇ 31ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಂಜಾಬ್, ಹರ್ಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್ ಮತ್ತು ವಾಯುವ್ಯ ಮಧ್ಯಪ್ರದೇಶದ ಕೆಲವು ಭಾಗಗಳು ತೀವ್ರವಾದ ಶಾಖದ ಅಲೆಯಿಂದ ತತ್ತರಿಸುತ್ತಿವೆ.

Monsoon 2024: ಮೇ 31ರಂದು ಕೇರಳ ಪ್ರವೇಶಿಸಲಿದೆ ನೈಋತ್ಯ ಮುಂಗಾರು
ಮುಂಗಾರು
Image Credit source: Wikipedia
Follow us on

ನೈಋತ್ಯ ಮುಂಗಾರು(Southwest Monsoon) ಮೇ 31ರಂದು ಕೇರಳ(Kerala) ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ(Meteorological Department) ನೀಡಿದೆ. ಪಂಜಾಬ್, ಹರ್ಯಾಣ, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್ ಮತ್ತು ವಾಯುವ್ಯ ಮಧ್ಯಪ್ರದೇಶದ ಕೆಲವು ಭಾಗಗಳು ತೀವ್ರವಾದ ಶಾಖದ ಅಲೆಯಿಂದ ತತ್ತರಿಸುತ್ತಿವೆ. ಹವಾಮಾನ ಇಲಾಖೆಯು ಈ ರಾಜ್ಯಗಳಿಗೆ ರೆಡ್ ಅಲರ್ಟ್ ಅನ್ನು ಸಹ ಹೊರಡಿಸಿದೆ ಮತ್ತು ವಯಸ್ಸಾದವರು, ಶಿಶುಗಳು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ದುರ್ಬಲ ಜನರು ತೀವ್ರ ಕಾಳಜಿವಹಿಸಬೇಕು ಎಂದು ಒತ್ತಿ ಹೇಳಿದೆ.

ಹಿಮಾಚಲ ಪ್ರದೇಶದ ಕೆಳಗಿನ ಬೆಟ್ಟಗಳಲ್ಲಿ ವಿಪರೀತ ಶಾಖವು ಮುಂದುವರಿಯುತ್ತದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ಕರ್ನಾಟಕದಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಶುರುವಾಗಿದೆ. ಭಾರತೀಯ ಆರ್ಥಿಕತೆಯು ಕೃಷಿ ಆಧಾರಿತವಾಗಿದೆ, ಮುಂಗಾರು ಅದಕ್ಕೆ ಜೀವನಾಡಿಯಂತೆ ಕಾರ್ಯನಿರ್ವಹಿಸುತ್ತದೆ.

ಮೇ 31ರ ವೇಳೆಗೆ ಮುಂಗಾರು ಕೇರಳ ತಲುಪುವ ನಿರೀಕ್ಷೆಯಿದೆ. ಕಳೆದ 150 ವರ್ಷಗಳಲ್ಲಿ ಕೇರಳದಲ್ಲಿ ಮಾನ್ಸೂನ್ ಆಗಮನದ ದಿನಾಂಕಗಳಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಂಡಿವೆ. 1918 ರಲ್ಲಿ, ಮಾನ್ಸೂನ್‌ನ ಆರಂಭಿಕ ಆಗಮನವು ಮೇ 11 ರಂದು ಆಗಿತ್ತು, ಆದರೆ 1972 ರಲ್ಲಿ ಮಾನ್ಸೂನ್ ಜೂನ್ 18 ರಂದು ಕೇರಳಕ್ಕೆ ಆಗಮಿಸಿದಾಗ ಆರಂಭಿಕ ಆಗಮನವಾಗಿದೆ.

ಮತ್ತಷ್ಟು ಓದಿ: Monsoon 2024: ಮೇ ತಿಂಗಳಲ್ಲೇ ಭಾರತ ಪ್ರವೇಶಿಸಲಿದೆ ಮುಂಗಾರು, ಯಾವ್ಯಾವ ರಾಜ್ಯಗಳಲ್ಲಿ ಯಾವಾಗ ಮಳೆ?

ಕಳೆದ ವರ್ಷ ಜೂನ್ 8ರಂದು ಕೇರಳಕ್ಕೆ ಮುಂಗಾರು ಆಗಮಿಸಿತ್ತು. 2022 ರಲ್ಲಿ, ಮುಂಗಾರು ಕೇರಳವನ್ನು ಮೇ 29 ರಂದು ಮತ್ತು 2021 ರಲ್ಲಿ ಜೂನ್ 3 ರಂದು, 2020 ರಲ್ಲಿ ಜೂನ್ 1 ರಂದು ತಲುಪಿತು. ಈ ವರ್ಷ ಭಾರತದಲ್ಲಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಇದಕ್ಕೆ ಕಾರಣ ಲಾ ನಿನಾ ಮತ್ತು ಪೆಸಿಫಿಕ್ ಮಹಾಸಾಗರದ ತಂಪಾಗಿರುವ ಕಾರಣ ಈ ವರ್ಷ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.

ಇತ್ತೀಚಿನ ದಿನಗಳಲ್ಲಿ, ದೇಶದ ಅನೇಕ ಭಾಗಗಳು ತೀವ್ರ ಶಾಖವನ್ನು ಎದುರಿಸುತ್ತಿವೆ. ಹಲವು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 48 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಈ ವರ್ಷ, ಏಪ್ರಿಲ್‌ನಲ್ಲಿಯೇ ದಕ್ಷಿಣ ಭಾರತದಲ್ಲಿ ಬಿಸಿಗಾಳಿ ಪ್ರಾರಂಭವಾಯಿತು. ವಿಪರೀತ ಬಿಸಿಯಿಂದಾಗಿ ವಿದ್ಯುತ್ ಜಾಲದ ಮೇಲೆ ಒತ್ತಡ ಹೆಚ್ಚುತ್ತಿದ್ದು, ನೀರಿನ ಮೂಲಗಳೂ ಬತ್ತಿ ಹೋಗುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿ, ಭಾರತಕ್ಕೆ ಮುಂಗಾರು ಮುಂಚಿತವಾಗಿ ಆಗಮನವು ಹೆಚ್ಚಿನ ಪರಿಹಾರವನ್ನು ನೀಡುತ್ತದೆ. 52 ರಷ್ಟು ಭಾರತದ ಕೃಷಿಯು ಮಳೆಯ ಮೇಲೆ ಅವಲಂಬಿತವಾಗಿದೆ. ಇದಲ್ಲದೆ, ಜಲಾಶಯಗಳನ್ನು ಮರುಪೂರಣಗೊಳಿಸಲು ಮತ್ತು ಕುಡಿಯುವ ನೀರಿನ ಲಭ್ಯತೆಗೆ ಮಾನ್ಸೂನ್ ಮಳೆಯು ಬಹಳ ಮುಖ್ಯವಾಗಿದೆ. ಖಾರಿಫ್ ಬೆಳೆಗೆ ಜೂನ್ ಮತ್ತು ಜುಲೈನಲ್ಲಿ ಮುಂಗಾರು ಮಳೆಯೂ ಅತ್ಯಗತ್ಯ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ