Mood of the Nation: ಈಗ ಸಂಸತ್ತಿಗೆ ಚುನಾವಣೆ ನಡೆದರೆ ಎನ್​​​ಡಿಎಗೆ 306 ಸ್ಥಾನಗಳ ಬಹುಮತ, ವಿಪಕ್ಷಗಳ ಮೈತ್ರಿಕೂಟಕ್ಕೆ ಎಷ್ಟು?

| Updated By: Ganapathi Sharma

Updated on: Aug 25, 2023 | 9:01 PM

ಎನ್​​ಡಿಎ ಬಗ್ಗೆ  ನೋಡುವುದಾದರೆ 2023 ರ ಜನವರಿಯಲ್ಲಿ ಹಿಂದಿನ MOTN ಸಮೀಕ್ಷೆಗಿಂತ ಎಂಟು ಸ್ಥಾನಗಳ ಸುಧಾರಣೆಯಾಗಿದೆ. ಆದರೆ ಇದು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ ಡಿಎ ವಾಸ್ತವವಾಗಿ ಗೆದ್ದ 357 ಸ್ಥಾನಗಳಿಗಿಂತ ಕಡಿಮೆಯಾಗಿದೆ. ಏತನ್ಮಧ್ಯೆ, ಹೊಸದಾಗಿ ರೂಪುಗೊಂಡ ಇಂಡಿಯಾ ಮೈತ್ರಿಕೂಟದ ಯೋಜಿತ ಸ್ಥಾನ ಹಂಚಿಕೆಯು ಭಾರಿ ಜಿಗಿತವನ್ನು ತೋರಿಸಿದೆ

Mood of the Nation: ಈಗ ಸಂಸತ್ತಿಗೆ ಚುನಾವಣೆ ನಡೆದರೆ ಎನ್​​​ಡಿಎಗೆ 306 ಸ್ಥಾನಗಳ ಬಹುಮತ, ವಿಪಕ್ಷಗಳ ಮೈತ್ರಿಕೂಟಕ್ಕೆ ಎಷ್ಟು?
ನರೇಂದ್ರ ಮೋದಿ
Follow us on

ಈಗ ಸಂಸತ್ತಿಗೆ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (NDA) 306 ಸ್ಥಾನಗಳ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಇಂಡಿಯಾ ಟುಡೇ-ಸಿ ವೋಟರ್ ಮೂಡ್ ಆಫ್ ದಿ ನೇಷನ್ ಸಮೀಕ್ಷೆ (Mood of the Nation)  ಹೇಳಿದೆ. ಒಂದು ರಾಜಕೀಯ ಪಕ್ಷ ಅಥವಾ ಮೈತ್ರಿ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ಫಿಗರ್ 272 ಅನ್ನು ಎನ್‌ಡಿಎ ದಾಟಲಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಪ್ರಕಾರ, ಎನ್‌ಡಿಎ 306 ಸ್ಥಾನಗಳನ್ನು ಗೆಲ್ಲುತ್ತದೆ. ಆದರೆ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ 193 ಸ್ಥಾನಗಳನ್ನು ಗಳಿಸಲಿದೆ ಎಂದು ಅಂದಾಜಿಸಲಾಗಿದೆ. ಇತರ ರಾಜಕೀಯ ಪಕ್ಷಗಳು 44 ಸ್ಥಾನಗಳನ್ನು ಗಳಿಸಲಿವೆ.

ಎನ್​​ಡಿಎ ಬಗ್ಗೆ  ನೋಡುವುದಾದರೆ 2023 ರ ಜನವರಿಯಲ್ಲಿ ಹಿಂದಿನ MOTN ಸಮೀಕ್ಷೆಗಿಂತ ಎಂಟು ಸ್ಥಾನಗಳ ಸುಧಾರಣೆಯಾಗಿದೆ. ಆದರೆ ಇದು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ ಡಿಎ ವಾಸ್ತವವಾಗಿ ಗೆದ್ದ 357 ಸ್ಥಾನಗಳಿಗಿಂತ ಕಡಿಮೆಯಾಗಿದೆ. ಏತನ್ಮಧ್ಯೆ, ಹೊಸದಾಗಿ ರೂಪುಗೊಂಡ ಇಂಡಿಯಾ ಮೈತ್ರಿಕೂಟದ ಯೋಜಿತ ಸ್ಥಾನ ಹಂಚಿಕೆಯು ಭಾರಿ ಜಿಗಿತವನ್ನು ತೋರಿಸಿದೆ. ಜನವರಿಯ ಸಮೀಕ್ಷೆಯು ಮೈತ್ರಿಕೂಟ 153 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಿತ್ತು. ಈಗ, ಸಮೀಕ್ಷೆಯ ಆಗಸ್ಟ್ ಆವೃತ್ತಿಯು  193 ಸೀಟುಗಳು ಸಿಗುತ್ತವೆ ಎಂದಿದೆ.

ಮತ ಹಂಚಿಕೆಗೆ ಸಂಬಂಧಿಸಿದಂತೆ, ಇಂದು ಚುನಾವಣೆ ನಡೆದರೆ ಎನ್‌ಡಿಎ ಶೇಕಡಾ 43 ರಷ್ಟು ಮತಗಳನ್ನು ಗೆಲ್ಲುತ್ತದೆ, ಆದರೆ ಇಂಡಿಯಾ ಮೈತ್ರಿಕೂಟ ಶೇಕಡಾ 41 ರಷ್ಟು ಮತಗಳನ್ನು ಪಡೆಯುತ್ತದೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆ

ಇದನ್ನೂ ಓದಿ: ಪ್ರಧಾನಿ ಮೋದಿಯ ಶೈಕ್ಷಣಿಕ ಅರ್ಹತೆ ಬಗ್ಗೆ ಮಾನನಷ್ಟ ಪ್ರಕರಣ; ಅರವಿಂದ್ ಕೇಜ್ರಿವಾಲ್‌ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಇತರ ಪಕ್ಷಗಳ ಸ್ಥಿತಿ ಏನು?

MOTN ಸಮೀಕ್ಷೆಯ ಪ್ರಕಾರ 287 ಸಂಸದೀಯ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಅಂದರೆ ಇದು 272 ರ ಸರಳ ಬಹುಮತಕ್ಕೆ ಅಗತ್ಯಕ್ಕಿಂತ 15 ಹೆಚ್ಚು. ಕಾಂಗ್ರೆಸ್ 74 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಎಲ್ಲಾ ರಾಜ್ಯಗಳಲ್ಲಿ ಒಟ್ಟು 25,951 ಜನರನ್ನು ಸಂದರ್ಶಿಸಲಾಗಿದೆ. ಸಾಮಾನ್ಯ ಟ್ರ್ಯಾಕರ್ ಡೇಟಾದಿಂದ ಹೆಚ್ಚುವರಿ 1,34,487 ಸಂದರ್ಶನಗಳನ್ನು ವಿಶ್ಲೇಷಿಸಲಾಗಿದೆ. ಭಾಗವಹಿಸಿದವರ ಒಟ್ಟು ಸಂಖ್ಯೆ 1,60,438 ಕ್ಕೆ ತೆಗೆದುಕೊಂಡಿದೆ. ಜುಲೈ 15 ಮತ್ತು ಆಗಸ್ಟ್ 14 ರ ನಡುವೆ ಸಂದರ್ಶನಗಳನ್ನು ನಡೆಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:46 pm, Fri, 25 August 23