
ನವದೆಹಲಿ, ಡಿಸೆಂಬರ್ 13: ನವದೆಹಲಿಯಲ್ಲಿ (New Delhi) ನ್ಯಾಯಾಲಯದ ಆದೇಶದಂತೆ ಆಸ್ತಿಯನ್ನು ವಶಪಡಿಸಿಕೊಳ್ಳಲು ಮನೆಯೊಂದಕ್ಕೆ ಹೋಗಿದ್ದ ಪೊಲೀಸರಿಗೆ ಆಘಾತ ಕಾದಿತ್ತು. ಪೊಲೀಸರು ಹಾಗೂ ಅಧಿಕಾರಿಗಳು ದೆಹಲಿಯ ಪೂರ್ವ ಭಾಗದಲ್ಲಿರುವ ಮನೆಗೆ ಹೋದರು. ಇಂದು ಮಧ್ಯಾಹ್ನ ಸರಿಯಾಗಿ 2.40ಕ್ಕೆ ಆ ಮನೆಗೆ ಹೋದ ಪೊಲೀಸರು ಮತ್ತು ಅಧಿಕಾರಿಗಳು ಮನೆಗೆ ಹಾಕಲಾಗಿದ್ದ ಬೀಗ ತೆಗೆದು ಒಳಗೆ ಹೋದರು. ಆದರೆ, ಆ ಬೀಗ ಹಾಕಿದ ಮನೆಯೊಳಗೆ ತಾಯಿ ಹಾಗೂ ಇಬ್ಬರು ಗಂಡುಮಕ್ಕಳು ನೇಣು ಹಾಕಿಕೊಂಡು ಮೃತಪಟ್ಟಿದ್ದರು.
ಈ ದೃಶ್ಯ ನೋಡಿ ಪೊಲೀಸರು ಶಾಕ್ ಆಗಿದ್ದಾರೆ. ಪೊಲೀಸರು ಬೀಗ ತೆಗೆದು ಒಳಗೆ ಹೋದಾಗ ಅನುರಾಧ ಕಪೂರ್ ಎಂಬ 52 ವರ್ಷದ ಮಹಿಳೆ, ಅವರ ಪುತ್ರರಾದ ಆಶಿಶ್ ಕಪೂರ್ (32) ಮತ್ತು ಚೈತನ್ಯ ಕಪೂರ್ (27) ಮನೆಯೊಳಗೆ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಆಘಾತಕ್ಕೊಳಗಾದರು.
ಇದನ್ನೂ ಓದಿ: ‘ಮಂಚಕ್ಕೆ ಬಾ ನಂಗೆ ಮಜಾ ಬೇಕು ನಿಂಗೆ ಹಣ ಬೇಕು’: ಸೈಟ್ ಕೊಡಿಸ್ತೇನೆಂದು ಸ್ವಾಮೀಜಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ
ತಾಯಿ ಮತ್ತು ಇಬ್ಬರು ಗಂಡುಮಕ್ಕಳು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದ ನಂತರ ಪೊಲೀಸರು ಇಡೀ ಮನೆಯನ್ನು ಶೋಧಿಸಿದರು. ಮನೆಯ ಒಂದು ಕೋಣೆಯಲ್ಲಿ ಕೈಬರಹದ ಸೂಸೈಡ್ ನೋಟ್ ಪತ್ತೆಯಾಗಿದೆ. ಆ ಕುಟುಂಬವು ತೀವ್ರ ಮಾನಸಿಕ ತೊಂದರೆಯನ್ನು ಎದುರಿಸುತ್ತಿದೆ ಎಂದು ತಿಳಿದುಬಂದಿದೆ. ಮಾನಸಿಕ ತೊಂದರೆಯಿಂದಾಗಿ ಅವರೆಲ್ಲರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಇದನ್ನೂ ಓದಿ: ಗರ್ಭಿಣಿಯ ಅನಿರೀಕ್ಷಿತ ಸಾವಿಗೆ ಹೊಸ ತಿರುವು; 10 ದಿನಗಳ ಬಳಿಕ ಬಯಲಾಯ್ತು ಅಸಲಿ ಸತ್ಯ
ಮೂವರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವ ಪೊಲೀಸರು, ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ಸುತ್ತಮುತ್ತಲಿನ ಜನರಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ