ಹಿಮಾಚಲ ಪ್ರದೇಶ್: ಸೈನಿಕರೆಂದರೆ ದಿನದ 24 ಗಂಟೆ ಹಾಗೂ ವರ್ಷದ 365 ದಿನಗಳೂ ಸೈನಿಕರೇ. ಮಳೆಯೇ ಬರಲಿ, ಚಳಿಯೇ ಇರಲಿ ಅಥವಾ ಉರಿಯುವ ಬಿಸಿಲೇ ಇರಲಿ ಕರ್ತವ್ಯಕ್ಕೆ ಚ್ಯುತಿ ಬರದ ಹಾಗೆ ಅಂದು ಕೊಂಡದ್ದನ್ನು ಸಾಧಿಸಿ ತೋರಿಸುತ್ತಾರೆ.
ಜಗತ್ತಿನ ಎಲ್ಲೆಡೆ ಕೊರೊನಾ ಮಾಹಾ ಮಾರಿಯ ಹಾವಳಿಯಿದ್ದರೂ ಕೂಡಾ ಅಂಜದೇ ಕೋವಿಡ್ ಸಮಯದಲ್ಲಿಯೇ ಯೋಜನೆಯಂತೆ ಕಾರ್ಯರೂಪಕ್ಕಿಳಿದ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆ, ಈಗ ವಿಶ್ವದ ಅತ್ಯಂತ ಎತ್ತರದ ಶಿಖರಗಳಲ್ಲಿ ಒಂದಾದ ಲಿಯೋ ಪಾರ್ಗಿಲ್ ಶಿಖರವನ್ನು ಏರಿದ್ದಾರೆ.
ಕೋವಿಡ್ ಸಂಕಷ್ಟದ ಸಮಯದಲ್ಲೂ ಈ ಸಾಧನೆ ಮಾಡಿದ ಮೊದಲ ಪರ್ವತಾರೋಹಿಗಳು ಎಂಬ ಹೆಮ್ಮೆ ಈಗ ಈ ಐಟಿಬಿಪಿ ಪಡೆಯದ್ದಾಗಿದೆ. 12 ಪರ್ವತಾರೋಹಿಗಳಿದ್ದ ತಂಡ ಆಗಸ್ಟ್ 31ರಂದು ಯಶಸ್ವಿಯಾಗಿ ಶಿಖರವನ್ನು ಏರುವ ಮೂಲಕ ಭಾರತದ ಕೀರ್ತಿ ದ್ವಜವನ್ನು 22,222 ಅಡಿ ಎತ್ತರದ ಪರ್ವತದ ಮೇಲೆ ಹಾರಿಸಿದ್ದಾರೆ.
भारत माता की जय!
Mountaineers of SHQ ITBP Shimla successfully climbed Leo Pargil mountain (22,222 ft) on 31 Aug to record the first such ascent during #COVID19. Total 12 members of the total 16 member team climbed the peak successfully. #Himveers pic.twitter.com/UoirOEs4IP
— ITBP (@ITBP_official) September 2, 2020
Published On - 2:36 pm, Wed, 2 September 20