AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿಯಲ್ಲಿ ಪಾಲು ಸಿಗಲಿ, ಬಿಡಲಿ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ: ಹೈಕೋರ್ಟ್​

ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಸಿಗಲಿ ಬಿಡಲಿ ಆದರೆ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಭೋಪಾಲ್​ನ ನಿವಾಸಿಯೊಬ್ಬರು ತನ್ನ ತಾಯಿಯ ಆಸ್ತಿಯಲ್ಲಿ ತನಗೆ ಪಾಲು ಸಿಗಲಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ತನ್ನೊಂದಿಗೆ ಉಳಿಸಿಕೊಳ್ಳಲು ಮಗ ನಿರಾಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು.

ಆಸ್ತಿಯಲ್ಲಿ ಪಾಲು ಸಿಗಲಿ, ಬಿಡಲಿ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ: ಹೈಕೋರ್ಟ್​
ಪೋಷಕರುImage Credit source: sunday Guardian
ನಯನಾ ರಾಜೀವ್
|

Updated on: Sep 12, 2024 | 10:22 AM

Share

ವೃದ್ಧ ಪೋಷಕರ ಪೋಷಣೆಗೆ ಸಂಬಂಧಿಸಿದ ವಿಷಯದಲ್ಲಿ ಮಧ್ಯಪ್ರದೇಶ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಸಿಗಲಿ ಬಿಡಲಿ ಆದರೆ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.

ಭೋಪಾಲ್​ನ ನಿವಾಸಿಯೊಬ್ಬರು ತನ್ನ ತಾಯಿಯ ಆಸ್ತಿಯಲ್ಲಿ ತನಗೆ ಪಾಲು ಸಿಗಲಿಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ತನ್ನೊಂದಿಗೆ ಉಳಿಸಿಕೊಳ್ಳಲು ಮಗ ನಿರಾಕರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು.

ನ್ಯಾಯಮೂರ್ತಿ ಜಿ.ಎಸ್ ಅಹ್ಲುವಾಲಿಯಾ ಅವರು ಇಡೀ ಪ್ರಕರಣದ ಎಲ್ಲಾ ಸಂಗತಿಯನ್ನು ಸಾವಧಾನವಾಗಿ ಆಲಿಸಿ ಬಳಿಕ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ಸಿಗಲಿ, ಬಿಡಲಿ ವಯಸ್ಸಾದ ಮೇಲೆ ಪೋಷಕರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳು ಪೋಷಕರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರು: ಸುಪ್ರೀಂಕೋರ್ಟ್​

ಜೀವನಾಂಶಕ್ಕಾಗಿ ತಾಯಿಗೆ ಪ್ರತಿ ತಿಂಗಳು 2 ಸಾವಿರ ನೀಡುವಂತೆ ಸೂಚಿಸಿದ್ದಾರೆ. ನರಸಿಂಗಪುರದ ನಿವಾಸಿಯಾಗಿರುವ ವೃದ್ಧೆಗೆ ನಾಲ್ವರು ಗಂಡು ಮಕ್ಕಳಿದ್ದು, ಒಬ್ಬ ಮಗನಿಗೆ ಆಸ್ತಿಯಲ್ಲಿ ಪಾಲು ಸಿಕ್ಕಿಲ್ಲ. ತಮ್ಮ ವಯಸ್ಸಾದ ತಾಯಿಯ ಪೋಷಣೆಗಾಗಿ ಪ್ರತಿ ತಿಂಗಳು 3,000 ರೂಪಾಯಿಗಳನ್ನು ನೀಡುವಂತೆ ನಾಲ್ವರು ಪುತ್ರರಿಗೆ ಸೂಚಿಸಿದರು. ಇದಾದ ನಂತರ ಎಸ್‌ಡಿಎಂ ಆದೇಶವನ್ನು ಪ್ರಶ್ನಿಸಿ ಮಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

ಪುತ್ರರು ತಮ್ಮ ಪೋಷಕರ ಆಸ್ತಿಯನ್ನು ವಂಚನೆಯಿಂದ ಅಥವಾ ಪೋಷಕರನ್ನು ತಪ್ಪುದಾರಿಗೆಳೆಯುವ ಮೂಲಕ ತಮ್ಮ ಹೆಸರಿಗೆ ವರ್ಗಾಯಿಸಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಆ ನೋಂದಣಿ ತಿರಸ್ಕೃತವಾಗುತ್ತದೆ. ಅದನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ ಎಂದು ಕೋರ್ಟ್​ ಹೇಳಿದೆ.

ಭೂಮಿಯ ಹಂಚಿಕೆ ಬಗ್ಗೆ ಅಸಮಾಧಾನವಿದ್ದರೆ ಅವರು ಸಿವಿಲ್ ಮೊಕದ್ದಮೆ ಹೂಡಬಹುದು, ಆದರೆ ತಮ್ಮ ತಾಯಿಗೆ ಜೀವನಾಂಶವನ್ನು ನೀಡುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ