ಭೂಕುಸಿತದಲ್ಲಿ ಕುಟುಂಬವನ್ನು ಕಳೆದುಕೊಂಡಿದ್ದ ಯುವತಿಯ ಮದುವೆಯಾಗಬೇಕಿದ್ದ ವರ ಕಾರು ಅಪಘಾತದಲ್ಲಿ ಸಾವು

ಕೇರಳದ ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಲ್ಲಿ ಇಡೀ ಕುಟುಂಬವನ್ನು ಕಳೆದುಕೊಂಡು ನೊಂದಿದ್ದ ಯುವತಿ ಇದೀಗ ಮದುವೆಯಾಗಬೇಕಿದ್ದ ವರನನ್ನೂ ಕಳೆದುಕೊಂಡಿದ್ದಾಳೆ.

ಭೂಕುಸಿತದಲ್ಲಿ ಕುಟುಂಬವನ್ನು ಕಳೆದುಕೊಂಡಿದ್ದ ಯುವತಿಯ ಮದುವೆಯಾಗಬೇಕಿದ್ದ ವರ ಕಾರು ಅಪಘಾತದಲ್ಲಿ ಸಾವು
ಮೃತ ಯುವಕImage Credit source: India Today
Follow us
|

Updated on: Sep 12, 2024 | 9:09 AM

ಕೆಲವೊಮ್ಮೆ ಒಂದು ನೋವನ್ನು ಮರೆಯುವ ಮುನ್ನವೇ ಒಂದರ ಹಿಂದೊಂದು ಕಷ್ಟಗಳ ಸರಮಾಲೆಗಳೇ ಬಂದು ನಿಂತಿರುತ್ತವೆ. ಆದರೆ ಆ ಸಮಯದಲ್ಲಿ ಧೈರ್ಯ ತಂದುಕೊಂಡು ಸಮಾಧಾನದಿಂದಿರಬೇಕಷ್ಟೆ. ಕಳೆದ ಜುಲೈನಲ್ಲಿ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದ ಯುವತಿಗೆ ಈಗ ಮತ್ತೊಂದು ಬರಸಿಡಿಲು ಬಡಿದಿದೆ.

ಆಕೆಯನ್ನು ಮದುವೆಯಾಗಬೇಕಿದ್ದ ವರ ಕೂಡ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಜೆನ್ಸನ್​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು ಬುಧವಾರ ರಾತ್ರಿ 8.30ರ ಸುಮಾರಿಗೆ ಮೃತಪಟ್ಟಿದ್ದಾರೆ. ಅವರ ಮೂಗು ಹಾಗೂ ತಲೆಯಿಂದ ಭಾರಿ ಪ್ರಮಾಣದ ರಕ್ತಸ್ರಾವವಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಮಂಗಳವಾರ ಜೆನ್ಸನ್​ ಇದ್ದ ಕಾರು ಬಸ್​ಗೆ ಡಿಕ್ಕಿ ಹೊಡೆದಿತ್ತು, ಕಾರಿನಲ್ಲಿದ್ದ ಶೃತಿ, ಜೆನ್ಸನ್​ ಸೇರಿದಂತೆ ಕುಟುಂಬ ಸದಸ್ಯರು ಗಾಯಗೊಂಡಿದ್ದರು. ಆದರೆ ಉಳಿದವರು ಬದುಕುಳಿದಿದ್ದಾರೆ, ಜೆನ್ಸನ್​ ಸಾವನ್ನಪ್ಪಿದ್ದಾರೆ.

ಮತ್ತಷ್ಟು ಓದಿ: Wayanad Landslide: ವಯನಾಡು ಭೂಕುಸಿತ, ದಾಖಲೆಗಳನ್ನು ಕಳೆದುಕೊಂಡವರಿಗಾಗಿ ವಿಶೇಷ ಅದಾಲತ್

ಜುಲೈ 30 ರಂದು ಸಂಭವಿಸಿದ ಭೂಕುಸಿತದಲ್ಲಿ ಮೆಪ್ಪಾಡಿ ಪಂಚಾಯತ್‌ನ ಚೂರಲ್‌ಮಲಾ ಮತ್ತು ಮುಂಡಕ್ಕೈ ಗ್ರಾಮಗಳಲ್ಲಿ ಶ್ರುತಿ ಅವರ ಪೋಷಕರು ಶಿವಣ್ಣ ಮತ್ತು ಸಬಿತಾ ಮತ್ತು ಅವರ ಕಿರಿಯ ಸಹೋದರಿ ಶ್ರೇಯಾ ಸೇರಿದಂತೆ ಒಂಬತ್ತು ಕುಟುಂಬ ಸದಸ್ಯರು ಸಾವನ್ನಪ್ಪಿದ್ದರು.

ಆಕೆ ಜೆನ್ಸನ್​ ಅನ್ನು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದಳು, ಆತನೊಬ್ಬನೇ ಆಕೆಗಾಗಿ ಇದ್ದವನಾಗಿದ್ದ. ಜೂನ್ 2 ರಂದು ನಿಶ್ಚಿತಾರ್ಥ ನಡೆದಿತ್ತು. ಆಗಸ್ಟ್ 29ರಂದು ಸ್ಮಶಾನಕ್ಕೆ ತೆರಳಿ ಕೆಲವು ವಿಧಿ ವಿಧಾನಗಳನ್ನು ನೆರವೇರಿಸಿದ್ದರು.

ಡಿಸೆಂಬರ್​ನಲ್ಲಿ ಮದುವೆಯಾಗುವವರಿದ್ದರು, ಆದರೆ ಪೋಷಕರನ್ನು ಕಳೆದುಕೊಂಡಿದ್ದರಿಂದ ಅದ್ಧೂರಿಯಾಗಿ ಬೇಡ ಸೆಪ್ಟೆಂಬರ್​ನಲ್ಲಿ ಕೋರ್ಟ್​ ಮ್ಯಾರೇಜ್ ಮಾಡಿಕೊಳ್ಳುವ ಕುರಿತು ಆಲೋಚಿಸಿದ್ದರು. ಭೂಕುಸಿತದಲ್ಲಿ ಶೃತಿ ಅವರ ಮನೆ, 4 ಲಕ್ಷ ರೂ. ನಗದು, 15 ಪವನ್ ಚಿನ್ನ, ಜತೆ ಮನೆಯ ಜನರು ಕೊಚ್ಚಿಕೊಂಡು ಹೋಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ