AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ರಿಟಿಷರ ಇದೊಂದು ತಪ್ಪು ಮೊಘಲ್ ಚಕ್ರವರ್ತಿ ಔರಂಗಜೇಬನ ಮುಂದೆ ಮಂಡಿಯೂರುವಂತೆ ಮಾಡಿತ್ತು

ಪೋರ್ಚುಗೀಸ್ ಮತ್ತು ಡಚ್ ವ್ಯಾಪಾರಿಗಳು ಮೊಘಲರ ಜೊತೆ ಶಾಮೀಲಾಗಿ ಅನೇಕ ವ್ಯಾಪಾರ ಹಕ್ಕುಗಳನ್ನು ಪಡೆದಿದ್ದರು. ಈ ವಿಷಯ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯಸ್ಥ ಜೋಜಯಾಗೆ ಇಷ್ಟ ಆಗಲಿಲ್ಲ. ಪೋರ್ಚುಗೀಸ್, ಡಚ್ ಮತ್ತು ಮೊಘಲರಿಗೆ ಪಾಠ ಕಲಿಸುವ ಸಲುವಾಗಿ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯಸ್ಥ ಯೋಜನೆಯೊಂದನ್ನು ರೂಪಿಸಿದ.

ಬ್ರಿಟಿಷರ ಇದೊಂದು ತಪ್ಪು ಮೊಘಲ್ ಚಕ್ರವರ್ತಿ ಔರಂಗಜೇಬನ ಮುಂದೆ ಮಂಡಿಯೂರುವಂತೆ ಮಾಡಿತ್ತು
ಔರಂಗಜೇಬ
TV9 Web
| Edited By: |

Updated on: Aug 09, 2023 | 9:31 AM

Share

ಭಾರತದ ಆರನೆಯ ಮೊಘಲ್ ಚಕ್ರವರ್ತಿ ಹಾಗೂ ಷಹಜಹಾನ್ ಮತ್ತು ಮುಮ್ತಾಜ್ ದಂಪತಿಯ ಮೂರನೆಯ ಮಗನಾಗಿದ್ದ ಔರಂಗಜೇಬನ(Aurangzeb of the Mughal Empire) ಆಳ್ವಿಕೆಯು ಭಾರತೀಯ ಇತಿಹಾಸದಲ್ಲಿ ಒಂದು ಪ್ರಮುಖ ಅವಧಿಯಾಗಿತ್ತು. ಕೋಪಿಷ್ಟ ಮತ್ತು ಮತಾಂಧ ಎಂದು ಕರೆಯಲ್ಪಡುವ ಔರಂಗಜೇಬ ಯಾವುದೇ ದಯೆ ದಾಕ್ಷಿಣ್ಯವಿಲ್ಲದೆ ಆಡಳಿತ ನಡೆಸುತ್ತಿದ್ದ. ಇವನ ಇದೇ ಕೋಪ ಬ್ರಿಟಿಷರು(British) ಮಂಡಿ ಊರುವಂತೆ ಮಾಡಿತ್ತು.

1603 ರಲ್ಲಿ, ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ಅಧಿಕೃತವಾಗಿ ಸ್ಥಾಪನೆಯಾಗಿತ್ತು. ಇಡೀ ಭಾರತವನ್ನ ತಮ್ಮದಾಗಿಸಿಕೊಳ್ಳುವ ಸಂಚಿನಲ್ಲಿ ಭಾತರದಲ್ಲಿ ವ್ಯಾಪಾರ-ವಹಿವಾಟು ಶುರು ಮಾಡಿದ ಬ್ರಿಟಿಷರು ಅವಕಾಶಕ್ಕಾಗಿ ಕಾದು ಕುಳಿತಿದ್ದರು. ಇಡೀ ಭಾರತವನ್ನು ವಶಪಡಿಸಿಕೊಳ್ಳುವುದು ಅದರ ಏಕೈಕ ಉದ್ದೇಶವಾಗಿತ್ತು. ಮತ್ತೊಂದೆಡೆ ಸಿರಾಜ್-ಉದ್-ದೌಲಾ ಮತ್ತು ಟಿಪ್ಪು ಸುಲ್ತಾನರಂತಹ ಮಹಾನ್ ಆಡಳಿತಗಾರರನ್ನು ಸೋಲಿಸಿ ವಿಜಯ ಸಾಧಿಸಿದ ನಂತರ, ಬ್ರಿಟಿಷರಿಗೆ ಆನೆ ಬಲ ಬಂದಂತಾಗಿತ್ತು. ಉತ್ತೇಜನ ಸಿಕ್ಕಿತ್ತು. ಮಹಾನ್ ವೀರರನ್ನು ಸೋಲಿಸಿದ ಖುಷಿಯಲ್ಲಿದ್ದ ಬ್ರಿಟಿಷರು ಮತ್ತೊಂದಷ್ಟು ಕಡೆ ತಮ್ಮ ಹಿಡಿತವನ್ನು ಸಾಧಿಸಲು ಮುಂದಾದ್ರು. ಆದ್ರೆ ಇವರ ಕೆಲ ತಪ್ಪು ನಿರ್ಧಾರಗಳು ಔರಂಗಜೇಬನ ಕೋಪವನ್ನು ಕೆರಳಿಸಿತು. ಬ್ರಿಟಿಷರು ವಿರುದ್ಧ ಮೊಘಲ್ ಚಕ್ರವರ್ತಿ ಔರಂಗಜೇಬ ಕೆಂಡ ಕಾರುವಂತೆ ಮಾಡಿತು.

ಬ್ರಿಟಿಷರು ಭಾರತದಲ್ಲಿ ವ್ಯಾಪಾರ ಕೇಂದ್ರಗಳನ್ನು ಸ್ಥಾಪಿಸಿದಾಗ ಅವರು ಭಾರತೀಯ ವ್ಯಾಪಾರಿಗಳಿಗೆ ಯಾವುದೇ ತೆರಿಗೆಯನ್ನು ಪಾವತಿಸುವಂತಿರಲಿಲ್ಲ. ಇದು ಅವರಿಗೆ ಲಾಭ ತಂದುಕೊಟ್ಟಿತ್ತು. ಬ್ರಿಟಿಷರು ತಮ್ಮ ವಾಣಿಜ್ಯ ಕೇಂದ್ರಗಳನ್ನು ಒಂದರ ನಂತರ ಒಂದರಂತೆ ಸ್ಥಾಪಿಸಲು ಪ್ರಾರಂಭಿಸಿದರು. ಬಾಂಬೆ, ಮದ್ರಾಸ್, ಸೂರಜ್ ಮತ್ತು ಕಲ್ಕತ್ತಾವನ್ನು ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡರು. ಈ ವೇಳೆ ಪೋರ್ಚುಗೀಸ್ ಮತ್ತು ಡಚ್ ವ್ಯಾಪಾರಿಗಳು ಮೊಘಲರ ಜೊತೆ ಶಾಮೀಲಾಗಿ ಅನೇಕ ವ್ಯಾಪಾರ ಹಕ್ಕುಗಳನ್ನು ಪಡೆದಿದ್ದರು. ಈ ವಿಷಯ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯಸ್ಥ ಜೋಜಯಾಗೆ ಇಷ್ಟ ಆಗಲಿಲ್ಲ. ಕೋಪಗೊಂಡ. ಅಸಮಾಧಾನಗೊಂಡ. ಸಹಿಸಲಾಗಲಿಲ್ಲ. ಹೀಗಾಗಿ ಪೋರ್ಚುಗೀಸ್, ಡಚ್ ಮತ್ತು ಮೊಘಲರಿಗೆ ಪಾಠ ಕಲಿಸುವ ಸಲುವಾಗಿ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯಸ್ಥ ಯೋಜನೆಯೊಂದನ್ನು ರೂಪಿಸಿದ.

ಇದನ್ನೂ ಓದಿ: Delhi: ದೆಹಲಿಯ ಔರಂಗಜೇಬ್ ರಸ್ತೆಯ​ನ್ನು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆ ಎಂದು ಮರುನಾಮಕರಣ

ಆದ್ರೆ ಜೋಜಯಾ ತಿಳಿದಿರಲಿಲ್ಲ ಆತ ಎಂತಹ ದೊಡ್ಡ ತಪ್ಪು ಮಾಡುತ್ತಿದ್ದಾನೆ ಎಂದು. ಈ ಸಮಯದಲ್ಲಿ ಕಾಬೂಲ್‌ನಿಂದ ಢಾಕಾದವರೆಗೆ ಔರಂಗಜೇಬನ ಆಡಳಿ ಇತ್ತು. ಜೋಜಯಾ ಆತುರದಲ್ಲಿ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಿಂದ ಹೊರಬರುವ ಮೊಘಲರ ಹಡಗುಗಳನ್ನು ನಿಲ್ಲಿಸಲು ಭಾರತದಲ್ಲಿನ ತನ್ನ ಅಧಿಕಾರಿಗಳಿಗೆ ಆದೇಶ ನೀಡಿದ. ಹಾಗೂ ಸೈನಿಕರ ವಿಶೇಷ ಗುಂಪನ್ನು ಕಳುಹಿಸಿದ. ಜೋಜಯಾ ತನ್ನ 308 ಸೈನಿಕರ ಗುಂಪಿನ ಮೂಲಕ ಮೊಘಲರ ಅತ್ಯಂತ ಕ್ರೂರ ಮತ್ತು ಶಕ್ತಿಶಾಲಿ ಚಕ್ರವರ್ತಿಯನ್ನು ಎದುರಿಸಲು ಮುಂದಾಗಿದ್ದ. ಮೊಘಲ್ ಸೈನ್ಯದಲ್ಲಿ 9 ಲಕ್ಷಕ್ಕೂ ಹೆಚ್ಚು ಸೈನಿಕರಿದ್ದರು. ಬ್ರಿಟಿಷರು ಮೊಘಲ್ ಹಡಗುಗಳನ್ನು ನಿಲ್ಲಿಸಿ ದಾಳಿ ಮಾಡಿದರು. ಇದಕ್ಕೆ ಸುಮ್ಮನಿರದ ಮೊಘಲರು ತಮ್ಮ ಶಕ್ತಿಯುತ ಫಿರಂಗಿಗಳೊಂದಿಗೆ ಪ್ರತಿಕ್ರಿಯಿಸಿದರು. ದೊಡ್ಡ ಯುದ್ಧವೇ ನಡೆಯಿತು. ಈ ಆಂಗ್ಲೋ ಮೊಘಲ್ ಯುದ್ಧದಲ್ಲಿ ಬ್ರಿಟಿಷರಿಗೆ ಭಾರಿ ಮುಖ ಭಂಗ ಎದುರಾಯಿತು. ಮೊಘಲರು ಬ್ರಿಟಿಷ್ ಹಡಗುಗಳನ್ನು ವಶಪಡಿಸಿಕೊಂಡರು.

ಇನ್ನು ಮೊಘಲ್ ಸುಲ್ತಾನರ ಮಂತ್ರಿ ಅಲ್ಬಹಾರ್ ಸಿದಿ ಯಾಕುತ್ 20,000 ಸೈನಿಕರೊಂದಿಗೆ ಬ್ರಿಟಿಷರ ಮೇಲೆ ದಾಳಿ ಮಾಡಿದನೆಂದು ಸಂಘರ್ಷವನ್ನು ಕಣ್ಣಾರೆ ಕಂಡ ಅಲೆಕ್ಸಾಂಡರ್ ಹ್ಯಾಮಿಲ್ಟನ್ ಎಂಬ ಆಗ್ಲರು ತಮ್ಮ ಪುಸ್ತಕದಲ್ಲಿ ಯುದ್ಧದ ಕಥೆಯನ್ನು ದಾಖಲಿಸಿದ್ದಾರೆ. ಈ ಯುದ್ಧದಲ್ಲಿ, ಬ್ರಿಟಿಷರು ಸಾಕಷ್ಟು ನಷ್ಟು ಎದುರಿಸಬೇಕಾಯಿತು. ಮೊಘಲ್ ಸೈನ್ಯವು ಒಂದರ ಹಿಂದೆ ಒಂದರಂತೆ ಫಿರಂಗಿಗಳನ್ನು ಹೊಡೆದು ಬ್ರಿಟಿಷರನ್ನು ಹೊಡೆದು ಉರುಳಿಸಿತು. ಈಸ್ಟ್ ಇಂಡಿಯಾ ಕಂಪನಿ ಸರ್ವ ನಾಶವಾಯಿತು. ಬ್ರಿಟಿಷರ ಈ ತಪ್ಪು ಅವರನ್ನು ಬಡವರನ್ನಾಗಿಸಿತು.

ಮೊಘಲರು ಪೂರ್ವ ಭಾರತದ ಹಲವು ಭಾಗಗಳನ್ನು ಲೂಟಿ ಮಾಡಿ ವಶಪಡಿಸಿಕೊಂಡರು. ಈ ಘಟನೆಯು ಬ್ರಿಟಿಷರ ಇತಿಹಾಸದಲ್ಲಿ ಮಹತ್ವದ ಪಾಠವಾಗಿ ದಾಖಲಾಗಿದೆ. ಬ್ರಿಟಿಷರ ಈ ತಪ್ಪು ಅವರಿಗೆ ಹಣವಿಲ್ಲದಂತೆ ಮಾಡಿ ಔರಂಗಜೇಬನ ಆಳ್ವಿಕೆಯನ್ನು ಭಾರತೀಯ ಇತಿಹಾಸದಲ್ಲಿ ಪ್ರಮುಖ ಸ್ಮರಿಣೀಯ ಘಟನೆಯನ್ನಾಗಿ ಮಾಡಿತು.

2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ರೀಲ್ಸ್ ತಂದ ಆಪತ್ತು: ಇನ್ಸ್ಟಾಗ್ರಾಮ್​​​ ಬಳಸುವವರು ಈ ವಿಡಿಯೋನ ಒಮ್ಮೆ ನೋಡಿ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ