ಅರ್ಬನ್​ ಲ್ಯಾಡರ್​ ಕಂಪನಿ ರಿಲಾಯನ್ಸ್​ ತೆಕ್ಕೆಗೆ.. ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಅಂಬಾನಿ ಪೈಪೋಟಿ?

ಮುಂಬೈ: ಬೆಂಗಳೂರು ಮೂಲದ ಆನ್​ಲೈನ್​ ಶಾಪಿಂಗ್ ಕಂಪನಿಯಾದ ಅರ್ಬನ್ ಲ್ಯಾಡರ್​ನಲ್ಲಿ ರಿಲಾಯನ್ಸ್ ರಿಟೇಲ್​ ಶೇ. 96ರಷ್ಟು ಪಾಲನ್ನು 182 ಕೋಟಿ ಕೊಟ್ಟು ಖರೀದಿ ಮಾಡಿದೆ. ಈ ಬೆಳವಣಿಗೆಯು, ಇತರೆ ಆನ್​ಲೈನ್​ ಶಾಪಿಂಗ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್​ಕಾರ್ಟ್​ ಮತ್ತು ಭಾರತೀಯ ಮೂಲದ ಆನ್​ಲೈನ್​ ಪೀಠೋಪಕರಣಗಳ ಮಾರುಕಟ್ಟೆಗಳಿಗೆ ಪೈಪೋಟಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಭಾರತದಲ್ಲಿ ಐಕಿಯಾ, ಪೆಪ್ಪರ್​ ಫ್ರೈ ನಂಥ ಆನ್​ಲೈನ್​ ಫರ್ನೀಚರ್ ಶಾಪಿಂಗ್ ಸಂಸ್ಥೆಗಳಿದ್ದವು. ಇದೀಗ, ಅರ್ಬನ್ ಲ್ಯಾಡರ್​ ಇವೆಲ್ಲಾ ಕಂಪನಿಗಳಿಗೆ ಸ್ಪರ್ಧೆ ನೀಡುವ ಸಾಮರ್ಥ್ಯ ಪಡೆದಿದೆ. ಅಷ್ಟೇ ಅಲ್ಲ, ರಿಲಾಯನ್ಸ್ ರಿಟೇಲ್​ […]

ಅರ್ಬನ್​ ಲ್ಯಾಡರ್​ ಕಂಪನಿ ರಿಲಾಯನ್ಸ್​ ತೆಕ್ಕೆಗೆ.. ಅಮೆಜಾನ್​, ಫ್ಲಿಪ್​ಕಾರ್ಟ್​ಗೆ ಅಂಬಾನಿ ಪೈಪೋಟಿ?
Follow us
KUSHAL V
|

Updated on:Nov 16, 2020 | 7:24 PM

ಮುಂಬೈ: ಬೆಂಗಳೂರು ಮೂಲದ ಆನ್​ಲೈನ್​ ಶಾಪಿಂಗ್ ಕಂಪನಿಯಾದ ಅರ್ಬನ್ ಲ್ಯಾಡರ್​ನಲ್ಲಿ ರಿಲಾಯನ್ಸ್ ರಿಟೇಲ್​ ಶೇ. 96ರಷ್ಟು ಪಾಲನ್ನು 182 ಕೋಟಿ ಕೊಟ್ಟು ಖರೀದಿ ಮಾಡಿದೆ. ಈ ಬೆಳವಣಿಗೆಯು, ಇತರೆ ಆನ್​ಲೈನ್​ ಶಾಪಿಂಗ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್​ಕಾರ್ಟ್​ ಮತ್ತು ಭಾರತೀಯ ಮೂಲದ ಆನ್​ಲೈನ್​ ಪೀಠೋಪಕರಣಗಳ ಮಾರುಕಟ್ಟೆಗಳಿಗೆ ಪೈಪೋಟಿ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಐಕಿಯಾ, ಪೆಪ್ಪರ್​ ಫ್ರೈ ನಂಥ ಆನ್​ಲೈನ್​ ಫರ್ನೀಚರ್ ಶಾಪಿಂಗ್ ಸಂಸ್ಥೆಗಳಿದ್ದವು. ಇದೀಗ, ಅರ್ಬನ್ ಲ್ಯಾಡರ್​ ಇವೆಲ್ಲಾ ಕಂಪನಿಗಳಿಗೆ ಸ್ಪರ್ಧೆ ನೀಡುವ ಸಾಮರ್ಥ್ಯ ಪಡೆದಿದೆ.

ಅಷ್ಟೇ ಅಲ್ಲ, ರಿಲಾಯನ್ಸ್ ರಿಟೇಲ್​ ವೆಂಚರ್ಸ್ ಲಿಮಿಟೆಡ್ (RRVL), ಅರ್ಬನ್ ಲ್ಯಾಡರ್​ನ ಉಳಿದ ಪಾಲನ್ನು ಸಹ ಡಿಸೆಂಬರ್ 2023ರ ಒಳಗೆ ಪಡೆದುಕೊಳ್ಳುವ ಗುರಿಯಿಟ್ಟಿದೆ. 75 ಕೋಟಿ ರೂಪಾಯಿ ಹೂಡಿಕೆ ನಡೆಸಿ ಅರ್ಬನ್ ಲ್ಯಾಡರ್​ನ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳುವ ಸೂಚನೆ ಕಂಡುಬಂದಿದೆ. ಇದರಿಂದ, ಭಾರತದ32ಬಿಲಿಯನ್ ರೂಪಾಯಿ ಮೌಲ್ಯದ ಪೀಠೋಪಕರಣಗಳ ಮಾರುಕಟ್ಟೆಗೆ ರಿಲಾಯನ್ಸ್ ಲಗ್ಗೆ ಇಟ್ಟಂತಾಗಲಿದೆ.

Published On - 7:19 pm, Mon, 16 November 20

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು