7ನೇ ಬಾರಿ ಬಿಹಾರದ ಸಿಎಂ ಪಟ್ಟಕ್ಕೇರಿದ ನಿತೀಶ್ ಕುಮಾರ್
ಪಾಟ್ನಾ: ರಾಜ್ಯದ ಸಿಎಂ ಆಗಿ ನಿತೀಶ್ ಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಫಗು ಚೌಹಾಣ್ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಬಿಹಾರದ ರಾಜಭವನದಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ನಡೆಯಿತು. ಸತತ 4ನೇ ಬಾರಿಗೆ ಸಿಎಂ ಪಟ್ಟವನ್ನು ಅಲಂಕರಿಸಿದ ನಿತೀಶ್ ಕುಮಾರ್ ಒಟ್ಟು 7ನೇ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ನಿತೀಶ್ ಜೊತೆ ಇಬ್ಬರು ಉಪಮುಖ್ಯಮಂತ್ರಿಗಳಾಗಿ ತರ್ಕಿಶೋರ್ ಪ್ರಸಾದ್ ಮತ್ತು ರೇಣುದೇವಿ ಕೂಡ ಪ್ರಮಾಣಚವನ ಸ್ವೀಕರಿಸಿದರು. ಇದಲ್ಲದೆ, ನಿತೀಶ್ ಜೊತೆ ಸಚಿವರಾಗಿ 14 ಶಾಸಕರು ಪ್ರಮಾಣವಚನ ಸ್ವೀಕರಿಸಿದರು. JDUನ 6 […]
ಪಾಟ್ನಾ: ರಾಜ್ಯದ ಸಿಎಂ ಆಗಿ ನಿತೀಶ್ ಕುಮಾರ್ ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಫಗು ಚೌಹಾಣ್ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಬಿಹಾರದ ರಾಜಭವನದಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ ನಡೆಯಿತು. ಸತತ 4ನೇ ಬಾರಿಗೆ ಸಿಎಂ ಪಟ್ಟವನ್ನು ಅಲಂಕರಿಸಿದ ನಿತೀಶ್ ಕುಮಾರ್ ಒಟ್ಟು 7ನೇ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ನಿತೀಶ್ ಜೊತೆ ಇಬ್ಬರು ಉಪಮುಖ್ಯಮಂತ್ರಿಗಳಾಗಿ ತರ್ಕಿಶೋರ್ ಪ್ರಸಾದ್ ಮತ್ತು ರೇಣುದೇವಿ ಕೂಡ ಪ್ರಮಾಣಚವನ ಸ್ವೀಕರಿಸಿದರು. ಇದಲ್ಲದೆ, ನಿತೀಶ್ ಜೊತೆ ಸಚಿವರಾಗಿ 14 ಶಾಸಕರು ಪ್ರಮಾಣವಚನ ಸ್ವೀಕರಿಸಿದರು. JDUನ 6 ಹಾಗೂ BJPಯ ಐವರು ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರು ಭಾಗಿಯಾದರು.