Mumbai: ನೌಕಾಪಡೆ ಹಾಸ್ಟೆಲ್‌ನಲ್ಲಿ ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಯುವತಿ ಆತ್ಮಹತ್ಯೆ

Agniveer: ಮುಂಬೈನ ನೌಕಾಪಡೆಯ ಹಾಸ್ಟೆಲ್‌ನಲ್ಲಿ 20 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಯುವತಿಯನ್ನು ಅಪರ್ಣಾ ನಾಯರ್ ಎಂದು ಗುರುತಿಸಲಾಗಿದೆ. ಭಾರತೀಯ ನೌಕಾಪಡೆಯಲ್ಲಿ ಐಎನ್‌ಎಸ್ ವಿಭಾಗದಲ್ಲಿ ದಾಳಿಯ ಬಗ್ಗೆ ತರಬೇತಿಯನ್ನು ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

Mumbai: ನೌಕಾಪಡೆ ಹಾಸ್ಟೆಲ್‌ನಲ್ಲಿ ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಯುವತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Nov 28, 2023 | 12:55 PM

ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ 20 ವರ್ಷದ ಯುವತಿ ಮುಂಬೈನ ನೌಕಾಪಡೆಯ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈ ಪೊಲೀಸರ ಪ್ರಕಾರ ಮೃತರನ್ನು ಅಪರ್ಣಾ ನಾಯರ್ ಎಂದು ಗುರುತಿಸಲಾಗಿದೆ. ಭಾರತೀಯ ನೌಕಾಪಡೆಯಲ್ಲಿ ಐಎನ್‌ಎಸ್ ವಿಭಾಗದಲ್ಲಿ ದಾಳಿಯ ಬಗ್ಗೆ ತರಬೇತಿಯನ್ನು ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಇನ್ನು ಈ ಯುವತಿ ಆತ್ಮಹತ್ಯೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದು, ತನಿಖೆಯನ್ನು ನಡೆಸಿದ್ದಾರೆ.

ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಎಡಿಆರ್​ (Alternative Dispute Resolution) ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಗ್ನಿವೀರ್ ಅಮೃತ್​ಪಾಲ್​ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಕಾರಣ ನಿಯಮದಂತೆ ಸೇನಾ ಗೌರವ ನೀಡಿಲ್ಲ: ಸೇನೆ

ಅಗ್ನಿಪಥ್ ಯೋಜನೆಯಡಿಯಲ್ಲಿ ಅನೇಕ ಯುವಕರಿಗೆ ಸೈನ್ಯದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಯೋಜನೆಯನ್ನು ಜೂನ್ 14, 2022 ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ 4 ವರ್ಷಗಳ ಕಾಲ ಮಿಲಿಟಿರಿಯಲ್ಲಿ ಸೇವೆ ಸಲ್ಲಿಸಬಹುದು. ನಂತರ ಸಶಸ್ತ್ರ ಪಡೆಗಳಲ್ಲಿ ಮುಂದುವರಿಯಲು ಅರ್ಜಿ ಸಲ್ಲಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ