Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ.1ರಿಂದ ಜ.15ರವರೆಗೆ “ರಾಮ ಸಂದೇಶ ಮನೆಯಿಂದ ಮನೆಗೆ” ಅಭಿಯಾನ ಆರಂಭಿಸಲಿದೆ RSS

ಅಯೋಧ್ಯೆ ರಾಮಮಂದಿರ ಜನವರಿ 22ರಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ಮೋದಿ ಅವರು ಈ ಕಾರ್ಯವನ್ನು ಮಾಡಲಿದ್ದಾರೆ. ಜ.1ರಿಂದ ಜ.15ರವರೆಗೆ "ರಾಮ ಸಂದೇಶ ಮನೆಯಿಂದ ಮನೆಗೆ" ಅಭಿಯಾನ ಆರಂಭಿಸಲಿದೆ ಎಂದು RSS ಹೇಳಿದೆ. ಪ್ರತಿ ಮನೆಗೆ ರಾಮ ಸಂದೇಶ ಹೋಗಬೇಕು. ಹಾಗೂ ಈ ಮೂಲಕ ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ.

ಜ.1ರಿಂದ ಜ.15ರವರೆಗೆ ರಾಮ ಸಂದೇಶ ಮನೆಯಿಂದ ಮನೆಗೆ ಅಭಿಯಾನ ಆರಂಭಿಸಲಿದೆ RSS
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Nov 28, 2023 | 12:14 PM

ಅಯೋಧ್ಯೆ ರಾಮಮಂದಿರ (Ayodhya Ram Mandir) ಜನವರಿ 22ರಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಧಾನಿ ಮೋದಿ ಅವರು ಈ ಕಾರ್ಯವನ್ನು ಮಾಡಲಿದ್ದಾರೆ. ಇನ್ನು ರಾಮಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬ ಹಿಂದೂವಿನ ಪ್ರತ್ಯಕ್ಷ ಮತ್ತು ಪರೋಕ್ಷವಾದ ಶ್ರಮವಿದೆ ಎಂದು ರಾಮ ಮಂದಿರ ಟ್ರಸ್ಟ್ ಹೇಳಿದೆ. ಈ ಕಾರಣಕ್ಕೆ 10 ಕೋಟಿ ಜನರು ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೀಗ ಇದರ ಜತೆಗೆ ರಾಮಮಂದಿರದ ವಿಚಾರಧಾರೆಗಳು ಹಾಗೂ ಲೋಕಾರ್ಪಣೆ ಸಮಯದಲ್ಲಿ ರಾಮ ಕಥೆಗಳು ಪ್ರತಿ ಮನೆ ಮನೆಗೆ ತಲುಪುವ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಅದರ ಅಂಗಸಂಸ್ಥೆಗಳು ಜನವರಿ 1 ರಿಂದ ಜನವರಿ 15 ರವರೆಗೆ “ರಾಮ ಸಂದೇಶ ಮನೆಯಿಂದ ಮನೆಗೆ” ಎಂಬ ಅಭಿಯಾನದ ಮೂಲಕ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ಈ ಅಭಿಯಾನಕ್ಕಾಗಿ RSS ಕೆಲವೊಂದು ತಂಡಗಳನ್ನು ರಚಿಸಿ. ಪ್ರತಿ ಮನೆಗೆ, ರಾಮನ ಕಥೆ, ಅವರ ಜೀವನ, ಸಾಹಸ, ತ್ಯಾಗ ಹಾಗೂ ಜನವರಿ 22ರಂದು ರಾಮ ಮಂದರ ಲೋಕಾರ್ಪಣೆಯ ಆಮಂತ್ರಣ ನೀಡುವ ಮೂಲಕ ಬಹುದೊಡ್ಡ ಮಟ್ಟದಲ್ಲಿ ಜನರನ್ನು ಸಂಪರ್ಕಿಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಇನ್ನು ಅಭಿಯಾನಕ್ಕೆ ಸಿದ್ಧತೆ ಬಗ್ಗೆ ನವೆಂಬರ್​​ ಮೊದಲ ವಾರದಲ್ಲೇ ಸಭೆ ನಡೆಸಲಾಗಿದೆ. ದೇಶದ ಪ್ರತಿ ರಾಜ್ಯದ ಪ್ರತಿ ಹಳ್ಳಿಗೂ ರಾಮ ಮಂದಿರ ಉದ್ಘಾಟನೆ ಆಮಂತ್ರಣ ಹಾಗೂ ರಾಮ ವಿಚಾರಧಾರೆಗಳು ತಲುಪಿಸುವ ಕೆಲಸವನ್ನು RSS ಮಾಡಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬೆಳೆ ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಯಾವಾಗ? ಹೇಗಿದೆ ಭದ್ರತೆ? ದರ್ಶನ ಹೇಗೆ? ಇಲ್ಲಿದೆ ಮಾಹಿತಿ

ಈ ಕಾರ್ಯಕ್ರಮದ ಮೂಲಕ ಸಾಂಸ್ಕೃತಿ, ರಾಜಕೀಯ, ಆರ್ಥಿಕವಾಗಿ ಸಾಧನೆ ಮಾಡಿದವರನ್ನು ತಲುಪುದರ ಜತೆಗೆ ಜನಸಾಮಾನ್ಯರನ್ನು ಕೂಡ ಈ ಕಾರ್ಯಕ್ಕೆ ಆಹ್ವಾನಿಸುವುದು ಪ್ರಮುಖ ಗುರಿಯಾಗಿದೆ. ಎಲ್ಲ ರಾಜ್ಯಗಳಲ್ಲೂ ರಾಮಮಂದಿರ ಕಾರ್ಯಕ್ರಮದ ಬಗ್ಗೆ ಪ್ರಸಾರ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಆರ್​​​ಎಸ್​​ಎಸ್​ ಹೇಳಿದೆ.

ಈ ಅಭಿಯಾನವು ಇನ್ನೊಂದು ಹಂತದಲ್ಲೂ ಕೆಲಸ ಮಾಡಲಿದೆ. ಹಿಂದೂಗಳನ್ನು ಒಗ್ಗೂಡಿಸುವ ಕೆಲಸವನ್ನು ಮಾಡಲಿದೆ. ರಾಜಕೀಯ ಪಕ್ಷಗಳು ಜಾತಿ ಜನಗಣತಿ, ಇನ್ನು ಅನೇಕ ಉಪಕ್ರಮಗಳನ್ನು ಅನುಸರಿಸುತ್ತಿದೆ. ಈ ಯಾವುದಕ್ಕೂ ಅವಕಾಶ ನೀಡಬೇಡಿ ಎಂಬ ಎಚ್ಚರಿಕೆ ಮೂಲಕ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ. ಇದಕ್ಕೆ ಈ ಮನೆ ಸಂಪರ್ಕ ಸಹಾಯವಾಗಲಿದೆ ಎಂದು ಹೇಳಿದೆ.

ಇನ್ನು ಕಾಂಗ್ರೆಸ್​​​ ಈ ಬಗ್ಗೆ ಬೇರೆ ರೀತಿಯಲ್ಲಿ ಯೋಚನೆ ಮಾಡುತ್ತಿದೆ. ಜಾತಿ ಸಮೀಕ್ಷೆ, ಜಾತಿ ಮೀಸಲಾತಿ, ಇನ್ನು ಅನೇಕ ತಂತ್ರಗಳನ್ನು ಮಾಡಿ ಹಿಂದೂ ಸಮಾಜವನ್ನು ಹೊಡೆಯುತ್ತಿದೆ. ಇದನ್ನು ತಡೆಯುವ ಒಂದೇ ಶಕ್ತಿ ರಾಮ ಮನೆ ಮನೆಗೆ ಅಭಿಯಾನ, ಈ ಮೂಲಕ ಹಿಂದೂಗಳನ್ನು ನಾವು ಒಗ್ಗೂಡಿಸುತ್ತೇವೆ ಎಂದು ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಸೈಟು ಹಿಂತಿರುಗಿಸಿದ್ದು ಆದ ಪ್ರಮಾದವನ್ನು ಸಿಎಂ ಅಂಗೀಕರಿಸಿದಂತೆ: ವಿಜಯೇಂದ್ರ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ
ಮೋದಿ, ಮೋದಿ ಎಂದು ಜೈಕಾರ ಹಾಕಿ ಮೋದಿಯನ್ನು ಸ್ವಾಗತಿಸಿದ ಬ್ಯಾಂಕಾಕ್ ಜನ