AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರ‍್ಯಾಟ್​ ಹೋಲ್ ಮೈನಿಂಗ್ ಎಂದರೇನು? ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಈ ಮಾರ್ಗ ಏಕೆ?

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ(Silkyara) ಸುರಂಗ ಮಾರ್ಗದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಕೈ ಮೂಲಕ ಕೊರೆಯುವ ಕಾರ್ಯ ನಡೆಯುತ್ತಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತಿದೆ. ಸುರಂಗದಲ್ಲಿರುವ ಕಾರ್ಮಿಕರನ್ನು ತಲುಪಲು ಲಂಬ ಹಾಗೂ ಅಡ್ಡ ಎರಡೂ ವಿಧದಲ್ಲಿ ಕೊರೆಯಲಾಗುತ್ತಿದೆ. ನವೆಂಬರ್ 12 ರಿಂದ 41 ಕಾರ್ಮಿಕರು ಈ ಸುರಂಗದೊಳಗೆ ಸಿಲುಕಿದ್ದಾರೆ. ಇದೀಗ ರ‍್ಯಾಟ್ ಹೋಲ್ ಮೈನಿಂಗ್ ತಂತ್ರವನ್ನು ಬಳಸಿಕೊಂಡು ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ.

ರ‍್ಯಾಟ್​ ಹೋಲ್ ಮೈನಿಂಗ್ ಎಂದರೇನು? ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವವರ ರಕ್ಷಣೆಗೆ ಈ ಮಾರ್ಗ ಏಕೆ?
ಸುರಂಗ
ನಯನಾ ರಾಜೀವ್
|

Updated on: Nov 28, 2023 | 11:40 AM

Share

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ(Silkyara) ಸುರಂಗ ಮಾರ್ಗದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಕೈ ಮೂಲಕ ಕೊರೆಯುವ ಕಾರ್ಯ ನಡೆಯುತ್ತಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯ ಮತ್ತೊಮ್ಮೆ ವೇಗ ಪಡೆದುಕೊಳ್ಳುತ್ತಿದೆ. ಸುರಂಗದಲ್ಲಿರುವ ಕಾರ್ಮಿಕರನ್ನು ತಲುಪಲು ಲಂಬ ಹಾಗೂ ಅಡ್ಡ ಎರಡೂ ವಿಧದಲ್ಲಿ ಕೊರೆಯಲಾಗುತ್ತಿದೆ. ನವೆಂಬರ್ 12 ರಿಂದ 41 ಕಾರ್ಮಿಕರು ಈ ಸುರಂಗದೊಳಗೆ ಸಿಲುಕಿದ್ದಾರೆ. ಇದೀಗ ರ‍್ಯಾಟ್ ಹೋಲ್ ಮೈನಿಂಗ್ ತಂತ್ರವನ್ನು ಬಳಸಿಕೊಂಡು ಅವಶೇಷಗಳನ್ನು ತೆಗೆದುಹಾಕಲಾಗುತ್ತಿದೆ.

ಅಮೆರಿಕದ ಆಗರ್ ಡ್ರಿಲ್ ಯಂತ್ರ ಕೆಟ್ಟು ನಿಂತ ನಂತರ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಪಾರುಗಾಣಿಕಾ ಪೈಪ್‌ನೊಳಗೆ ಅಂಟಿಕೊಂಡಿರುವ ಬ್ಲೇಡ್ ಅನ್ನು ತುಂಡುಗಳಾಗಿ ಕತ್ತರಿಸಿ ತೆಗೆಯಲಾಯಿತು.

ರ‍್ಯಾಟ್ ಹೋಲ್ ಮೈನಿಂಗ್ ಎಂದರೇನು? ರ‍್ಯಾಟ್ ಹೋಲ್ ಮೈನಿಂಗ್ ಮೇಘಾಲಯದಲ್ಲಿ ತುಂಬಾ ಪ್ರಚಲಿತದಲ್ಲಿದೆ, ಇದು ಕಿರಿದಾದ ಪ್ರದೇಶಗಳಿಂದ ಕಲ್ಲಿದ್ದಿಲನ್ನು ಹೊರತೆಗೆಯಲು ಬಳಸಲಾಗುವ ಗಣಿಗಾರಿಕೆ ವಿಧಾನ ಇದಾಗಿದೆ.

ರ‍್ಯಾಟ್ ಹೋಲ್ ಎಂಬ ಪದವು ನೆಲದಲ್ಲಿ ಅಗೆದ ಕಿರಿದಾದ ರಂಧ್ರಗಳನ್ನು ಸೂಚಿಸುತ್ತದೆ. ಈ ರಂಧ್ರದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಇಳಿಯಲು ಹಾಗೂ ಕಲ್ಲಿದ್ದಿಲನ್ನು ಹೊರತೆಗೆಯಲು ಸಾಧ್ಯವಾಗುತ್ತದೆ.

ರಂಧ್ರವನ್ನು ಕೊರದ ಬಳಿಕ ಕಲ್ಲಿದ್ದಿಲು ಜಾಗವನ್ನು ತಲುಪಲು ಹಗ್ಗಗಳು ಅಥವಾ ಬಿದಿರಿನ ಏಣಿಗಳನ್ನು ಬಳಸುತ್ತಾರೆ. ನಂತರ ಪಿಕ್ಸ್, ಸಲಿಕೆಗಳು ಮತ್ತು ಬುಟ್ಟಿಗಳಂತಹ ವಸ್ತುಗಳನ್ನು ಬಳಸಿಕೊಂಡು ಕೈಯಿಂದ ಹೊರ ತೆಗೆಯಲಾಗುತ್ತದೆ.

ಈ ರ‍್ಯಾಟ್ ಹೋಲ್ ಮೈನಿಂಗ್​ನಲ್ಲಿ ಎರಡು ವಿಧ ಒಂದು ಅಡ್ಡ ಕತ್ತರಿಸುವ ಪ್ರಕ್ರಿಯೆ, ಎರಡನೆಯದು ಬಾಕ್ಸ್​ ಮಾದರಿಯಲ್ಲಿ ಕತ್ತರಿಸುವುದು. ಕಿರಿದಾದ ಸುರಂಗಗಳಿಗೆ ಸೈಡ್​ ಕಟಿಂಗ್​ ಬಳಸಲಾಗುತ್ತದೆ. ಇವುಗಳನ್ನು ಪರ್ವತದ ಇಳಿಜಾರಿನಲ್ಲಿ ನಿರ್ಮಿಸಲಾಗುತ್ತದೆ.

 ಅಪಾಯವೇನು? ರ‍್ಯಾಟ್ ಹೋಲ್ ಮೈನಿಂಗ್ ಪರಿಸರ ಅಪಾಯಗಳನ್ನು ಉಂಟುಮಾಡುತ್ತದೆ. ಕಾರ್ಮಿಕರ ಸುರಕ್ಷತೆಯ ಬಗ್ಗೆ ನಂಬಿಕೆ ಇರುವುದಿಲ್ಲ. ಗಣಿಗಾರಿಕೆ ಪ್ರಕ್ರಿಯೆಯು ಭೂಮಿಯ ಅವನತಿ, ಅರಣ್ಯನಾಶ ಮತ್ತು ಜಲ ಮಾಲಿನ್ಯಕ್ಕೆ ಕಾರಣವಾಗಬಹುದು.

ರ‍್ಯಾಟ್ ಹೋಲ್ ಮೈನಿಂಗ್​ಗೆ ನಿಷೇಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2014ರಲ್ಲಿ ಈ ವಿಧಾನವನ್ನು ನಿಷೇಧಿಸಿತ್ತು. ಮೇಘಾಲಯದಲ್ಲಿ ನಿಷೇಧಿಸಲಾಗಿತ್ತು, 2015ರಲ್ಲೂ ನಿಷೇಧ ಕಾಯ್ದುಕೊಂಡಿತ್ತು. ಇದಾದ ಬಳಿಕ ಈ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

2019 ರಲ್ಲಿ ನಡೆದ ಪ್ರಮುಖ ದುರಂತದಲ್ಲಿ, ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದ ಬಳಿಕ ಇಲಿ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ 15 ಜನರು ಹಲವಾರು ದಿನಗಳವರೆಗೆ ಅಲ್ಲೇ ಇದ್ದರು, ನಂತರ ಸಾವನ್ನಪ್ಪಿದರು.

ನಾವು ಇದನ್ನು 10 ವರ್ಷಗಳಿಂದ ಮಾಡುತ್ತಿದ್ದೇವೆ ಮತ್ತು ನಮಗೆ ಸಾಕಷ್ಟು ಸ್ಥಳವಿದೆ. 41 ಕಾರ್ಮಿಕರನ್ನು ನಾವೆಲ್ಲರೂ ಹೊರಗೆ ತರಲು ಬಯಸುತ್ತೇವೆ ರಾಕೇಶ್ ರಜಪೂತ್ ಹೇಳಿದ್ದಾರೆ. ಒಬ್ಬೊಬ್ಬರನ್ನಾಗಿಯೇ ಸುರಂಗದಿಂದ ಹೊರ ತರಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀವನ್!
ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಜೀವನ್!
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
ಅಂಗಡಿಗಳ ಮೇಲೆ ಪೊಲೀಸರ ಹಠಾತ್ ದಾಳಿ: 500ಕ್ಕೂ ಹೆಚ್ಚು ರೋಲ್‌ ಮಾಂಜಾ ದಾರ ವಶ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
4 ಎಮ್​ಎಲ್ಸಿ ಸ್ಥಾನಗಳಿಗೆ ಇಂದು ಮತದಾನ ಆರಂಭ
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಆಸಿಯಾ-ಸೌಂದರ್ಯಾ ಪೈಕಿ ಯಾರಾಗ್ತಾರೆ ಮುಂದಿನ ಕ್ಯಾಪ್ಟನ್?
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್