ಗರ್ಭಿಣಿಯಾಗದಿದ್ದಕ್ಕೆ ಅತ್ತಿಗೆಯನ್ನು ನಿಂದಿಸುವುದು ಕ್ರೌರ್ಯವಲ್ಲ; ಆಂಧ್ರ ಹೈಕೋರ್ಟ್ ಆದೇಶ
ಗರ್ಭ ಧರಿಸಲು ಸಾಧ್ಯವಾಗದಿದ್ದಕ್ಕಾಗಿ ಅತ್ತಿಗೆಯನ್ನು ನಿಂದಿಸುವುದು ಕ್ರೌರ್ಯವಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ವಿವಾಹಿತ ಅತ್ತಿಗೆಯರ ವಿರುದ್ಧದ ವರದಕ್ಷಿಣೆ ಕಾಯ್ದೆ, 498A ಐಪಿಸಿ ಪ್ರಕರಣವನ್ನು ರದ್ದುಗೊಳಿಸಿದೆ. ಗರ್ಭ ಧರಿಸಲು ಸಾಧ್ಯವಾಗದ ಕಾರಣದಿಂದ ಅತ್ತಿಗೆಯರ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ಇದನ್ನು ಒಳ್ಳೆಯ ಆಧಾರಗಳಾಗಿ ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆಂಧ್ರಪ್ರದೇಶ ಹೈಕೋರ್ಟ್, ವಿವಾಹಿತ ಅತ್ತಿಗೆಯರು ತಮ್ಮ ಸಹೋದರನ ಹೆಂಡತಿಯನ್ನು ಮಗುವನ್ನು ಗರ್ಭಧರಿಸಲು ಸಾಧ್ಯವಾಗುತ್ತಿಲ್ಲ ಎಂದು ನಿಂದಿಸುವುದು ಐಪಿಸಿಯ ಸೆಕ್ಷನ್ 498-ಎ ಅಥವಾ ವರದಕ್ಷಿಣೆ ನಿಷೇಧ ಕಾಯ್ದೆ, 1961ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲು ಸಾಕಷ್ಟು ಆಧಾರಗಳಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಹೈದರಾಬಾದ್, ಏಪ್ರಿಲ್ 25: ಮನೆಗೆ ಬಂದಾಗಲೆಲ್ಲ ಗರ್ಭಿಣಿಯಾಗದ ಕಾರಣಕ್ಕೆ ಅತ್ತಿಗೆಯನ್ನು ಹೀಯಾಳಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಮೇಲಿದ್ದ ಕೇಸನ್ನು ಆಂಧ್ರ ಪ್ರದೇಶ ಹೈಕೋರ್ಟ್ (Andhra Pradesh High Court) ತಿರಸ್ಕರಿಸಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498A ಅಡಿಯಲ್ಲಿ ದಾಂಪತ್ಯ ಕ್ರೌರ್ಯ ಪ್ರಕರಣವು ಆ ಮಹಿಳೆಯ ಅತ್ತಿಗೆಯ ವಿರುದ್ಧ ನಿಲ್ಲುವುದಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಕೇವಲ ಮಗುವನ್ನು ಹೆರಲು ಸಾಧ್ಯವಾಗದಿದ್ದಕ್ಕಾಗಿ ವಿವಾಹಿತ ಮಹಿಳೆಯನ್ನು ನಿಂದಿಸಿದ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹರಿನಾಥ್ ಎನ್ ಅವರ ಪೀಠವು ತಮ್ಮ ಸಹೋದರನ ಹೆಂಡತಿಯ ವಿರುದ್ಧ ಆರೋಪ ಮಾಡಿದ ಇಬ್ಬರು ಮಹಿಳೆಯರ ವಿರುದ್ಧ ಸೆಕ್ಷನ್ 498A ಐಪಿಸಿ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ ದಾಖಲಾಗಿದ್ದ ಕ್ರಿಮಿನಲ್ ಆರೋಪಗಳನ್ನು ರದ್ದುಗೊಳಿಸಿತು.
“ಗರ್ಭ ಧರಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕಾಗಿ ನಿಂದಿಸುತ್ತಿದ್ದಾರೆ ಎಂದು ಮಹಿಳೆ ಸಲ್ಲಿಸಿದ್ದ ಕೇಸ್ ವಿರುದ್ಧ ಐಪಿಸಿ ಸೆಕ್ಷನ್ 498-ಎ ಮತ್ತು ಡಿಪಿ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಕೇಸ್ ಬೇರೆ ಕೋರ್ಟ್ಗೆ ವರ್ಗಾಯಿಸಲು ಕೋರಿದ್ದ ಅರ್ಜಿ ವಜಾ
ದೂರು ನೀಡಿದ್ದ ಮಹಿಳೆಯ ವಿವಾಹದ ನಂತರ, ಆಕೆ ತನ್ನ ಗಂಡನ ಮನೆಯಿಂದ ದೂರ ಉಳಿದಿದ್ದರು ಎಂಬ ವಾದಗಳನ್ನು ನ್ಯಾಯಾಲಯವು ಗಮನಿಸಿತು. ಆ ಮಹಿಳೆ ತಮ್ಮ ವಿವಾಹದ ನಂತರ ಗಂಡನ ಮನೆಯಿಂದ ದೂರ ಉಳಿದಿದ್ದರು. ಆದ್ದರಿಂದ ಆಕೆಗೆ ಯಾವುದೇ ಕಿರುಕುಳ ನೀಡಲು ಸಾಧ್ಯವಿಲ್ಲ. ಇದನ್ನು ಐಪಿಸಿ ಸೆಕ್ಷನ್ 498 ಎ ಮತ್ತು ಡಿಪಿ ಕಾಯ್ದೆಯ 3 ಮತ್ತು 4ರ ಅಡಿಯಲ್ಲಿ ಅಪರಾಧಗಳಿಗೆ ಶಿಕ್ಷೆ ವಿಧಿಸಲು ಪರಿಗಣಿಸಲಾಗುವುದಿಲ್ಲ” ಎಂದು ಕೋರ್ಟ್ ಹೇಳಿದೆ.
ಅತ್ತಿಗೆಯಂದಿರ ವಿರುದ್ಧದ ಏಕೈಕ ಆರೋಪವೆಂದರೆ ಅವರು ಭೇಟಿಗೆ ಬಂದಾಗಲೆಲ್ಲಾ ಮಗುವನ್ನು ಹೆರಲು ಸಾಧ್ಯವಾಗದಿದ್ದಕ್ಕಾಗಿ ನಿಂದಿಸುತ್ತಿದ್ದುದು. ಈ ಆರೋಪಗಳು ಕ್ರಿಮಿನಲ್ ಪ್ರಕರಣವಾಗಲು ಸಾಧ್ಯವಿಲ್ಲ. ಹೀಗಾಗಿ, ಇದನ್ನು ಕೌಟುಂಬಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಕೇಸ್ ವಿಚಾರಣೆ ಶುರು; ಬರಲಿದೆ ಮಹತ್ವದ ತೀರ್ಪು
ನ್ಯಾಯಾಲಯವು ಆ ವ್ಯಕ್ತಿಯ ಪೋಷಕರು ಮತ್ತು ಸಹೋದರಿಯರ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದೆ. ಅವರೆಲ್ಲರೂ ಆ ವ್ಯಕ್ತಿಯ ಪತ್ನಿಯಿಂದ ವೈವಾಹಿಕ ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳದ ಆರೋಪ ಹೊತ್ತಿದ್ದರು. ದಂಪತಿಗಳ ವೈವಾಹಿಕ ಸಮಸ್ಯೆಗಳಲ್ಲಿ ಅವರ ಪಾತ್ರವಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








