
ವಾರಾಣಸಿ, ಜನವರಿ 08: ಮೊಬೈಲ್(Mobile) ಕಳವಾಗುವುದು ಸಾಮಾನ್ಯ, ಆದರೆ ದೂರು ಕೊಡದೆ ಇರಲಾದೀತೆ, ಆ ದೂರನ್ನು ಗಂಭೀರವಾಗಿ ಪರಿಗಣಿಸದೆ ಹಲವು ಪೊಲೀಸರು ಅಸಡ್ಡೆತನ ತೋರುವುದುಂಟು ಅಂಥದ್ದೇ ಘಟನೆ ವಾರಾಣಸಿಯಲ್ಲಿ ನಡೆದಿದೆ. ಟೆಕ್ಕಿ ಅಂಕಿತಾ ಗುಪ್ತ ಮೊಬೈಲ್ ಕಳೆದು ಹೋಗಿತ್ತು ಆಕೆ ಕೂಡಲೇ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದರು, ಆದರೆ ಪೊಲೀಸರು ಈ ವಿಚಾರವನ್ನು ನಿರ್ಲಕ್ಷಿಸಿದ್ದರು. ಆದರೆ ಕೊನೆಗೆ ಆಗಿದ್ದೇ ಬೇರೆ.
ವಾರಾಣಸಿಯ ಅಸ್ಸಿ ಘಾಟ್‌ನಲ್ಲಿ ಯುವತಿಯ ಮೊಬೈಲ್ ಕಳುವಾಗಿತ್ತು, ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನವಾಗಲಿಲ್ಲ, ಬಳಿಕ ಸ್ನೇಹಿತರ ಸಹಾಯ ಪಡೆದು ತನ್ನ ಮೊಬೈಲ್ ಪತ್ತೆ ಹಚ್ಚುವಲ್ಲಿ ಆಕೆ ಯಶಸ್ವಿಯಾಗಿದ್ದಾರೆ. ನಂತರ ನಿರ್ಲಕ್ಷ್ಯದ ಆರೋಪದ ಮೇಲೆ ಸ್ಥಳೀಯ ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರ ಮುಂಬೈನ ಘಾಟ್ಕೋಪರ್ ಪ್ರದೇಶದ ನಿವಾಸಿ ಅಂಕಿತಾ ಗುಪ್ತಾ ತಮ್ಮ ಕುಟುಂಬದೊಂದಿಗೆ ವಾರಾಣಸಿಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ. ಅಸ್ಸಿ ಘಾಟ್‌ನಲ್ಲಿ ಭಾರೀ ಜನದಟ್ಟಣೆಯ ನಡುವೆ, ಯಾರೋ ಆಕೆಯ ಮೊಬೈಲ್ ಅನ್ನು ಕಸಿದು ಪರಾರಿಯಾಗಿದ್ದರು. ಗುಪ್ತಾ ನಂತರ ಪೊಲೀಸ್ ದೂರು ದಾಖಲಿಸಿದರು.
ಗುಪ್ತಾ ತನ್ನ ಸ್ನೇಹಿತರ ಸಹಾಯದಿಂದ ಫೋನ್ ಇರುವ ಸ್ಥಳವನ್ನು ಪತ್ತೆಹಚ್ಚಿ ಮಂಡುದಿಹ್ ಪ್ರದೇಶದಲ್ಲಿ ಒಂದು ಮನೆಯನ್ನು ಗುರುತಿಸಿದ್ದರು. ನಂತರ ಅವರು ಪೊಲೀಸರಿಗೆ ವಿವರಗಳೊಂದಿಗೆ ತಿಳಿಸಿದ್ದರು. ಮಾಹಿತಿಯ ಮೇರೆಗೆ ಪೊಲೀಸ್ ತಂಡ ದಾಳಿ ನಡೆಸಿ ಗುಪ್ತಾ ಅವರ ಫೋನ್ ವಶಪಡಿಸಿಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧ ಕಾರ್ಯದಲ್ಲಿ ಕದ್ದ ಇತರ 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತಷ್ಟು ಓದಿ: ಆಟವಾಡಲು ಮಕ್ಕಳ ಕೈಗೆ ಮೊಬೈಲ್ ಕೊಟ್ಟು, ಕೆರೆಗೆ ಹಾರಿದ ಮಹಿಳೆ
ಪ್ರಕರಣದ ತನಿಖೆಯ ನಂತರ, ಉಪ ಪೊಲೀಸ್ ಆಯುಕ್ತ ಗೌರವ್ ಕುಮಾರ್ ಆಂತರಿಕ ತನಿಖೆಗೆ ಆದೇಶಿಸಿದರು. ಜನವರಿ 4 ರಂದು ಅಮಾನತುಗೊಂಡಿದ್ದ ಅಸ್ಸಿ ಪೊಲೀಸ್ ಔಟ್‌ಪೋಸ್ಟ್ ಇನ್‌ಚಾರ್ಜ್ ಅವರ ನಿರ್ಲಕ್ಷ್ಯವು ತನಿಖೆಯಲ್ಲಿ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ